ಕಸ್ತೂರಿ ರಂಗನ್, ಸಿಆರ್ಝಡ್ ಕಾನೂನು ಅವೈಜ್ಞಾನಿಕ, ಜನರಲ್ಲಿ ಆತಂಕ: ಸೊರಕೆ
ಉಡುಪಿ ಏ.12(ಉಡುಪಿ ಟೈಮ್ಸ್ ವರದಿ): ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏ.11 ರಂದು ನಡೆಯಿತು. ಸಭೆಯಲ್ಲಿ ರಾಜ್ಯ ಸರಕಾರ ಜಿ.ಪಂ, ತಾ.ಪಂ, ಕ್ಷೇತ್ರದ ವ್ಯಾಪ್ತಿಯನ್ನು ತನಗೆ ಪೂರಕವಾಗುವ ರೀತಿಯಲ್ಲಿ ಬೇಕಾಬಿಟ್ಟಿ ಅವೈಜ್ಞಾನಿಕ ರೀತಿಯಲ್ಲಿ ಬದಲಿಸಿದೆ. ಬಿಜೆಪಿಯವರಿಗೆ ಈಗಾಗಲೇ ಚುನಾವಣೆಯ ದಿನ ಮತ್ತು ಮೀಸಲಾತಿಯ ಪೂರ್ಣ ಮಾಹಿತಿ ದೊರೆತಿದೆ ಎನ್ನುವ ಒಕ್ಕೊರಲ ಅಭಿಪ್ರಾಯ ವ್ಕಕ್ತವಾಯಿತು.
ಈ ವೇಳೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, ಮಾತನಾಡಿ, ಜಿಲ್ಲೆಯ ಮಲೆನಾಡು ಪರಿಸರದಲ್ಲಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದಾಗುತ್ತಿರುವ ಸಂಕಷ್ಟ, ಕರಾವಳಿ ಪರಿಸರದಲ್ಲಿನ ಸಿ.ಆರ್.ಝಡ್ (ಕೋಸ್ಟಲ್ ರೆಗ್ಯುಲೇಶನ್ ಝೋನ್) ಸಮಸ್ಯೆಯೂ ಸೇರಿ ಕೇಂದ್ರದ ಕೆಲವೊಂದು ಅವೈಜ್ಞಾನಿಕ ಕಾನೂನುಗಳು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿಸಿದ್ದು, ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಪಕ್ಷ ಜನಮನಕ್ಕೆ ಸ್ಪಂದಿಸಿ ಸಂಘಟಿತ ಹೋರಾಟ ನಡೆಸುವುದು ಇಂದಿನ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಮ್ಮಿಕೊಂಡಿರುವ ಪಾದಯಾತ್ರೆ ಉತ್ತಮ ಫಲಿತಾಂಶ ನೀಡಿದೆ. ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯ ಕಸ್ತೂರಿ ರಂಗನ್ ವರದಿಯಿಂದ ಸಂತೃಸ್ತರಾದ ಮಲೆನಾಡು ಪರಿಸರಗಳಲ್ಲಿಯೂ ಈ ಪಾದಯಾತ್ರೆ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.
.ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾದ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಅಭಿಪ್ರಾಯಗಳೂ ಅಮೂಲ್ಯ. ಭಿನ್ನಾಭಿಪ್ರಾಯಗಳು ಸಹಜವಾದರೂ ಕಚ್ಛಾಟರಹಿತವಾಗಿ ತಳಮಟ್ಟದಿಂದ ಪಕ್ಷಕ್ಕೆ ವೇದಿಕೆ ಒದಗಿಸಿ ಸಂಘಟಿಸಿ ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಸಿದ್ಧರಾಗೋಣ. ಕೊರೋನಾ ಕಾರಣವಾಗಿ ಈ ಚುನಾವಣೆ ಹಿಂದೆ ಹೋಗಬಹುದೆಂಬ ವಿಶ್ವಾಸ ಬೇಡ. ಯಾಕೆಂದರೆ ಈ ಸರಕಾರ ಕೊರೋನ ಮಹಾಮಾರಿಯನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡುತ್ತಿದೆ ಎಂದರು.
ಈ ಸಂದರ್ಭ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗಫೂರ್, ಡಿ.ಸಿ.ಸಿ. ಪ್ರದಾನ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಅಲಿ, ಪಕ್ಷದ ಮುಖಂಡರಾದ ಬಿ. ಹಿರಿಯಣ್ಣ, ನೀರೆ ಕೃಷ್ಣ ಶೆಟ್ಟಿ, ದೇವಕಿ ಸಣ್ಣಯ್ಯ, ಸುಧಾಕರ ಕೋಟ್ಯಾನ್, ಶಬ್ಬೀರ್ ಅಹ್ಮದ್, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆ. ಅಣ್ಣಯ್ಯ ಶೇರಿಗಾರ್, ಬಿಪಿನ್ ಚಂದ್ರಪಾಲ್, ವೈ. ಸುಕುಮಾರ್ ಪಡುಬಿದ್ರಿ, ಹೆಚ್. ನಿತ್ಯಾನಂದ ಶೆಟ್ಟಿ, ಮುಷ್ತಾಕ್ ಅಹ್ಮದ್, ಭುಜಂಗ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಚಂದ್ರಶೇಖರ್ ಶೆಟ್ಟಿ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಸತೀಶ್ ಅಮೀನ್ ಪಡುಕೆರೆ, ದಿನಕರ್ ಹೇರೂರು, ಕಿಶೋರ್ ಕುಮಾರ್ ಎರ್ಮಾಳ್, ಗೀತಾ ವಾಗ್ಳೆ, ಶಶಿಧರ ಶೆಟ್ಟಿ ಎಲ್ಲೂರು, ರೋಶನಿ ಒಲಿವರ್, ಬಾಲಕೃಷ್ಣ ಪೂಜಾರಿ, ಎಂ.ಪಿ. ಮೊಯಿದಿನಬ್ಬ, ದಿಲೀಪ್ ಹೆಗ್ಡೆ, ಕೇಶವ ಕೋಟ್ಯಾನ್, ಡಾ. ಸುನೀತಾ ಶೆಟ್ಟಿ, ಲೂಯೀಸ್ ಲೋಬೋ, ದೀವಾ ನಂಬಿಯಾರ್, ರೇವತಿ ಶೆಟ್ಟಿ, ಉಪೇಂದ್ರ ಗಾಣಿಗ, ಸಂಜೀವ ಜಿ. ಸಾಲ್ಯಾನ್, ರಾಜೇಶ್ ಶೆಟ್ಟಿ ಬ್ರಹ್ಮಾವರ, ಸುಬೋದ್ ಶೆಟ್ಟಿ ಕಾರ್ಕಳ, ಡಾ. ಯಾದವ ರಾವ್ ಮೊದಲಾದವರು ಉಪಸ್ಥಿತರಿದ್ದರು.