ಉಡುಪಿಯ ಅ್ಯಡ್ಲಿನ್ ಕ್ಯಾಸ್ತಲಿನೊ ಮಿಸ್ ಯೂನಿವರ್ಸ್ ಇಂಟರ್ ನ್ಯಾಶನಲ್ ನಲ್ಲಿ ಭಾರತದಿಂದ ಸ್ಪರ್ಧೆ
ಉಡುಪಿ ಏ.12(ಉಡುಪಿ ಟೈಮ್ಸ್ ವರದಿ) ಕಳೆದ ವರ್ಷ ಮುಂಬೈನಲ್ಲಿ ನಡೆದ ಪ್ರತಿಷ್ಠಿತ ಮಿಸ್ ದಿವಾ ಯೂನಿವರ್ಸ್ 2020 ಕಿರಿಟವನ್ನು ಮುಡಿಗೇರಿಸಿಕೊಂಡಿದ್ದ ಕರಾವಳಿಯ ಅ್ಯಡ್ಲಿನ್ ಕ್ಯಾಸ್ತಲಿನೊ ಅವರು ಮುಂಬರುವ ಮಿಸ್ ಯೂನಿವರ್ಸ್ ಇಂಟರ್ ನ್ಯಾಶನಲ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮುಂದಿನ ತಿಂಗಳು ಯುಎಸ್ಎ ನಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಟರ್ ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಅ್ಯಡ್ಲಿನ್ ಕ್ಯಾಸ್ತಲಿನೊ ಅವರಿಗೆ ನಾಡಿನ ಮತ್ತು ಜಿಲ್ಲೆಯ ಜನತೆ ಪ್ರೋತ್ಸಾಹ ನೀಡುವ ಮೂಲಕ ಅವರ ಗೆಲುವಿಗೆ ಸಹಕಾರ ನೀಡಬಹುದಾಗಿದೆ. ಇವರು ಮೂಲತಹ ಕರ್ನಾಟಕದ ಕರಾವಳಿಯ ಉಡುಪಿ ಜಿಲ್ಲೆಯ ಉದ್ಯಾವರ ಕೊರಂಗ್ರಪಾಡಿಯವರು. ಪ್ರಸ್ತುತ ಕುವೈತ್ ನ ವೈಟ್ ಸ್ಟೋರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಫೋನ್ಸಸ್ ಕ್ಯಾಸ್ತಲಿನೊ ಮತ್ತು ಕುವೈತ್ ನ ಹೆಲ್ಮನ್ ವಲ್ರ್ಡ್ ವೈಡ್ ಲಾಜಿಸ್ಟಿಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀರಾ ಕ್ಯಾಸ್ತಲಿನೊ ದಂಪತಿಗಳ ಪುತ್ರಿಯಾಗಿರುವ ಇವರು ಕುವೈತ್ನಲ್ಲಿ ಜನಿಸಿದವರು.
ಅ್ಯಡ್ಲಿನ್ ಕ್ಯಾಸ್ತಲಿನೊ ಅವರು ಕುವೈತ್ ನ ಇಂಡಿಯನ್ ಸೆಂಟ್ರಲ್ ಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ಬಳಿಕ ತಮ್ಮ 15 ನೇ ವಯಸ್ಸಿನಲ್ಲಿ ಭಾರತಕ್ಕೆ ಮರಳಿ ಮುಂಬೈಗೆ ತೆರಳಿದರು, ಮುಂಬೈನ ಸೈಂಟ್ ಜೇವಿಯರ್ಸ್ ಕಾಲೇಜಿನಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದುಕೊಂಡರು. ಬಳಿಕ ಮುಂಬೈನ ವಿಲ್ಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಪ್ರಾರಂಭಿಸಿದ ಅವರು ಅಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ನಲ್ಲಿ ಪದವಿ ಪಡೆದರು. ಇವರು ಓರ್ವ ರೂಪದರ್ಶಿ ಆಗಿರುವ ಜೊತೆಗೆ ರೈತರ ಆತ್ಮಹತ್ಯೆ ಮತ್ತು ಅಸಮಾನತೆಯನ್ನು ನಿಗ್ರಹಿಸಲು ರೈತರಿಗೆ ಸುಸ್ಥಿರ ಜೀವನೋಪಾಯಕ್ಕಾಗಿ ಕೆಲಸ ಮಾಡುವ ವಿಎಸ್ ಪಿ ಎಂಬ ಸಂಘಟನೆಯೊಂದಿಗೆ ಕೆಲಸ ಮಾಡುತ್ತಿದ್ದ ಇವರು ಮಾದರಿಯಾಗಿದ್ದಾರೆ.
ನಮ್ಮ ಕರಾವಳಿಯ ಯುವತಿ ಅ್ಯಡ್ಲಿನ್ ಕ್ಯಾಸ್ತಲಿನೊ ಅವರು ಮಿಸ್ ಯೂನಿವರ್ಸ್ ಇಂಟರ್ ನ್ಯಾಶನಲ್ ಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡ ಬಯಸುವವರು ಅವರ ಇನ್ ಸ್ಟಗ್ರಾಂ ಖಾತೆ https://instagram.com/adline_castelinofficial?igshid=w4fxkc3cvdbv ಮೂಲಕ ಅವರಿಗೆ ಓಟ್ ಮಾಡಬಹುದಾಗಿದೆ. ನಿಮ್ಮ ಪ್ರತೀ ಒಂದು ಓಟ್ ಅವರು ಅವರ ಗೆಲುವಿನತ್ತ ಸಾಗಲು ಸಹಕಾರಿಯಾಗುತ್ತದೆ.
All the best
All the best adlin and take care
All the best