ಅಂಬಲಪಾಡಿ: ಬುಡೋಕಾನ್ ಕರಾಟೆ ಎನ್ & ಸ್ಪೋಟ್ರ್ಸ್ ಆಸೋಷಿಯೇಶನ್, ಅಭಯಹಸ್ತ ಹೆಲ್ಪ್ ಲೈನ್-ಸ್ವಯಂಪ್ರೇರಿತ ರಕ್ತದಾನ ಶಿಬಿರ
ಉಡುಪಿ ಏ.12(ಉಡುಪಿ ಟೈಮ್ಸ್ ವರದಿ): ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಬುಡೋಕಾನ್ ಕರಾಟೆ ಎನ್ & ಸ್ಪೋಟ್ರ್ಸ್ ಆಸೋಷಿಯೇಶನ್, ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಏ.11 ರಂದು ಅಂಬಲಪಾಡಿ ದೇವಸ್ಥಾನ ವಠಾರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಾವನ್ನು ನಡೆಸಲಾಯಿತು.
ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ರಕ್ತನಿಧಿ ವಿಭಾಗ ಕೆಎಂ ಮಣಿಪಾಲ ಇದರ ನಿರ್ದೇಶಕ ಡಾ.ಶಮೀ ಶಾಸ್ತ್ರಿ, ಮಣಿಪಾಲ್ ಕಾಲೇಜ್ ಆಪ್ ಹೆಲ್ತ್ ಸಾಯನ್ಸ್ ಮಾಹೆ ಮಣಿಪಾಲ ಇದರ ಡೀನ್ ಡಾ.ಜಿ ಅರುಣ್ ಮಯ್ಯ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ವೀಣಾ ಎಸ್ ಶೆಟ್ಟಿ, ಕಿಶೋರ್ ಪೂಜಾರಿ ಉಡುಪಿ, ಶಿವಕುಮಾರ್ ಅಂಬಲಪಾಡಿ, ರಕ್ತದಾನ ಶಿಬಿರಾದ ಆಯೋಜನ ಪ್ರಮುಖ ಸುನೀಲ್ ಸಾಲ್ಯಾನ್ ಕಡೆಕರ್, ಶಿಹಾನ್ ವಾಮನ್ ಪಾಲನ್, ರಕ್ತದ ಅಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಮೊದಲಾದವರು ಉಪಸ್ಥಿತರಿದ್ದರು.