ಯುವ ಪೀಳಿಗೆ ದುಶ್ಚಟಕ್ಕೆ ದಾಸರಾಗದೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು- ಸಿದ್ದಬಸಯ್ಯ

ಉಡುಪಿ: ಶ್ರೀಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಇತ್ತೀಚಿಗೆ ಛತ್ತೀಸ್ ಗಢದಲ್ಲಿ ಕ್ಸಲರ ಅಟ್ಟಹಾಸಕ್ಕೆ ಹುತಾತ್ಮರಾದ ನಮ್ಮ ವೀರ ಯೋಧರಿಗೆ ನುಡಿನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಜನಾರ್ದನ ಕೊಡವೂರು ಮಾತನಾಡಿ ಹಗಲು ಇರುಳು ಎನ್ನದೆ ದೇಶ ರಕ್ಷಣೆಯಲ್ಲಿ ನಿರತರಾದ ಯೋಧರಿಗೆ ಗೌರವಾರ್ಪಣೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ಇಂದಿನ ಯುವ ಪೀಳಿಗೆ ದುಶ್ಚಟಕ್ಕೆ ದಾಸರಾಗದೆ,  ಸಮಯವನ್ನು ವ್ಯರ್ಥ ಮಾಡದೆ ದೇಶ ಪ್ರೇಮ ಹೆಚ್ಚಿಸಿ ಕೊಳ್ಳುವ  ಕೆಲಸವನ್ನು ಮಾಡಬೇಕು.  ಇಂತಹ ಕೆಲಸ ನಮ್ಮ ಸಂಘಟನೆ ನಿರಂತರವಾಗಿ ಮಾಡುತ್ತಿದೆ ಎಂದರು.  ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಉಮೇಶ್ ಶೆಟ್ಟಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಈರಪ್ಪ ಗೌಂಡಿ  ಸಿದ್ದಣ್ಣ ಪೂಜಾರಿ ಅಮಲಿಹಾಳ, ಶರಣಪ್ಪ ಬಾರ್ಕೆರ ಉಪಸ್ಥಿತರಿದ್ದರು. ಮಹಿಳಾ ಅಧ್ಯಕ್ಷೆ ಸವಿತಾ ನೋಟಗಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಲಕ್ಷ್ಮಣ್ ಕೊಲ್ಕಾರ್ ನಿರೂಪಿಸಿದರು.  ಮಹೇಶ್ ಗುಂಡಿಬೈಲ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!