ಮಾರ್ಪಳ್ಳಿಯಲ್ಲಿ ಸರಣಿ ಕಳವು ಪ್ರಕರಣ: ಬಂಧನ ಓರ್ವನ

ಉಡುಪಿ ಏ.10( ಉಡುಪಿ ಟೈಮ್ಸ್ ವರದಿ): ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿಯ ವಿವಿಧ ಕಡೆಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ರಮೇಶ್ ಹುಲುಗಪ್ಪ ವಡ್ಡಾರ ಬಂಧಿತ ಆರೋಪಿ. ಬಂಧಿತನಿಂದ 20 ಸಾವಿರ ರೂ. ಮೌಲ್ಯದ 5 ಗ್ರಾಂ ತೂಕದ ಸರ, ಕೀ ಪ್ಯಾಡ್ ಪೋನ್, ಸ್ರ್ಮಾ ಫೋನ್, ಮಾರ್ಪಳ್ಳಿಯ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬದಲ್ಲಿ ಇದ್ದ 375 ರೂ., ಮಾರ್ಪಳ್ಳಿಯ ಮಾನಸ್ ಜನರಲ್ ಸ್ಟೋರ್ ನಿಂದ ಕಳವು ಮಾಡಿದ್ದ 1,300 ರೂ ನಗದು. ಮತ್ತು 400 ರೂ ಮೌಲ್ಯದ ಗೇರು ಬೀಜ ಪ್ಯಾಕೇಟ್, ಅಲ್ಲದೆ ಆರೋಪಿಯು ಹಳಿಯಾಳ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದೆಂದು ಹೇಳಿದ್ದ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ವಿವಾರಣೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಆರೋಪಿ ಉಡುಪಿ ಬಸ್ ನಿಲ್ದಾಣದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಇಂದು ಬೆಳಿಗ್ಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳ ವಿರುದ್ಧ ಉಡುಪಿ ಜಿಲ್ಲೆ ಹಾಗೂ ಇತರ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಇತರ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.  

ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಸಚಿನ್ ಎಂಬಾತ ತಲೆಮೆರೆಸಿಕೊಂಡಿದ್ದು ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಏ.6 ರಂದು ಮಾರ್ಪಳ್ಳಿಯ ಹಲವೆಡೆ ಕಳವು ಪ್ರಕರಣಗಳು ನಡೆದಿತ್ತು. ಈ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಮುಂದಾದ ಉಡುಪಿ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಎನ್ ವಿಷ್ಣುವರ್ಧನ್ ಅವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಕುಮಾರ್ ಚಂದ್ರ , ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ ಸದಾನಂದ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!