ಕುಂದಾಪುರ: ಸಾರಿಗೆ ನೌಕರರ ಬಂದ್- ಬಸ್ ಚಲಾಯಿಸಿದಕ್ಕಾಗಿ ಚಾಲಕನೋರ್ವನಿಗೆ ಬೆದರಿಕೆ
ಕುಂದಾಪುರ, ಏ.10: ರಾಜ್ಯದಾದ್ಯಂತ ಸಾರಿಗೆ ನೌಕರರ ಬಂದ್ ಹಿನ್ನೆಲೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾದ್ದ ಸಂದರ್ಬದಲ್ಲಿ ಬಸ್ ಚಲಾಯಿಸಿದಕ್ಕಾಗಿ ಚಾಲಕನೋರ್ವನಿಗೆ ಬೆದರಿಕೆ ಹಾಕಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಡಿಪೆÇೀದ ಚಾಲಕ ಹೊನ್ನಾವರದ ಹಾಮಕ್ಕಿ ಕೂಳಿಮನೆ ಮೂಲದ ನಾಗರಾಜ ಎಂ. ನಾಯ್ಕ ಅವರನ್ನು ಕುಂದಾಪುರದ ಡಿಪೆÇೀದ ಚಾಲಕ ಸಹೋದ್ಯೋಗಿ ರವಿ ಎಂಬುವವರು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ.
ನಾಗರಾಜ ಅವರು ಏ. 7 ರಂದು ರಾತ್ರಿ 8.15 ರ ಸುಮಾರಿಗೆ ಕುಂದಾಪುರದಿಂದ ಮೈಸೂರಿಗೆ ಹೋಗಲು ಬಸ್ಸನ್ನು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಫ್ಲಾಟ್ ಫಾರಂನಲ್ಲಿ ತಂದು ನಿಲ್ಲಿಸಿದಾಗ ಸಹೋದ್ಯೋಗಿ ರವಿ ಕರೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.