ಸಾರಿಗೆ ನೌಕರರ ಮುಷ್ಕರಕ್ಕೆ ಕುಮ್ಮಕ್ಕು ಆರೋಪ: ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸ್ ವಶಕ್ಕೆ
ಬೆಳಗಾವಿ: ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಬೆಳಗಾವಿಯ ಸುವರ್ಣಸೌಧ ಬಳಿಯ ಸುವರ್ಣ ಗಾರ್ಡನ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸಭೆಗೆ ನಿರ್ಧರಿಸಿದ್ದರು. ಆದರೆ ಸಭೆಗೂ ಮುನ್ನವೇ ಖಾಸಗಿ ಹೋಟೆಲ್ನಲ್ಲಿದ್ದ ಕೋಡಿಹಳ್ಳಿ ಚಂದ್ರಶೇಖರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬೆಳಗಾವಿಯ ಹಿರೇಬಾಗೇವಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನು ತಮ್ಮನ್ನು ವಶಕ್ಕೆ ಪಡೆದಿರುವ ಸಂಬಂಧ ಪ್ರತಿಕ್ರಿಯಿಸಿದ ಕೋಡಿ ಹಳ್ಳಿ ಚಂದ್ರಶೇಖ್ ಸರ್ಕಾರ ತಮ್ಮ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಕರೆದೊಯ್ಯುವ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಿದು ಎನ್ನುತ್ತಿದ್ದಾರೆ. ಸಕಾರಣ ಗೊತ್ತಿಲ್ಲ. ಇದು ತಪ್ಪು. ಚಳವಳಿ ಧಮನ ನೀತಿ ಇದಾಗಿದೆ. ಈ ಬಂಧನ ಅಕ್ರವಾಗುತ್ತದೆ. ಧಮನವಾಗುತ್ತದೆ ಎಂದು ಆರೋಪಿಸಿದರು.
ಯಾವಾಗಲೂ ವಾಕ್ ಸ್ವಾತಂತ್ರ್ಯ ಮತ್ತು ಚಳವಳಿ ನಡೆಸುವ ಸ್ವಾತಂತ್ರ್ಯ ಇರಬೇಕು. ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಆಗಲಿ, ಇದನ್ನ ನಾವು ಸ್ವಾಗತ ಮಾಡುತ್ತೇವೆ’ ಎಂದು ಹೇಳಿದರು.