ಮಂಗಳೂರು ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆ- ಉಡುಪಿ ಡಾ.ಜಿ.ಶಂಕರ್ ಕಾಲೇಜ್’ಗೆ 6 ರ್ಯಾಂಕ್, 2ಚಿನ್ನದ ಪದಕ

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯವು 2020 ನೇ ಸಾಲಿನಲ್ಲಿ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಉಡುಪಿ ಅಜ್ಜರಕಾಡು ಡಾ.ಜಿ. ಶಂಕರ್ ಸ.ಮ.ಪ್ರ.ದರ್ಜೆ ಕಾಲೇಜು 6 ರ್ಯಾಂಕ್ ಗಳನ್ನು 2 ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.

ಅದರಂತೆ, ಎಂ.ಎ ಇತಿಹಾಸ ವಿಭಾಗದಲ್ಲಿ ಸುಕನ್ಯ ಪ್ರಥಮ ರ್ಯಾಂಕ್ ಮತ್ತು 2 ಚಿನ್ನದ ಪದಕ, ಎಂ.ಕಾಂ ವಿಭಾಗದಲ್ಲಿ ಸುಚಿತ್ರ ಶೆಟ್ಟಿ 2 ನೇ ರ್ಯಾಂಕ್, ಸ್ವಾತಿ 6 ನೇ ರ್ಯಾಂಕ್, ಸಮಿತಾ ಆರ್ ದೇವಾಡಿಗ 8 ನೇ ರ್ಯಾಂಕ್, ಶಿಲ್ಪಾ 8 ನೇ ರ್ಯಾಂಕ್, ಪೂಜಾ 9 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!