ಶಿರ್ವ: ಮಂಗಳೂರು ವಿವಿ ಗಣಕ ವಿಜ್ಞಾನ ವಿಭಾಗದಲ್ಲಿ ಸತ್ಯ ಸುಬ್ರಹ್ಮಣ್ಯ ನಾಲ್ಕನೇ ರ್ಯಾಂಕ್
ಶಿರ್ವ: ಮಂಗಳೂರು ವಿಶ್ವವಿದ್ಯಾನಿಲಯ 2020ರ ಸೆಪ್ಟೆಂಬರ್‍ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸತ್ಯ ಸುಬ್ರಹ್ಮಣ್ಯ ವಿ.ಎಸ್. ರವರು ಗಣಕ ವಿಜ್ಞಾನ ವಿಭಾಗ ಬಿ.ಸಿ.ಎ. ದಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.
ಕಾಸರಗೋಡಿನ ವೆಂಕಟೇಶ್ವರ ಭಟ್ ಮತ್ತು ಗೌರಿ ಅವರ ಪುತ್ರರಾದ ಸತ್ಯಸುಬ್ರಹ್ಮಣ್ಯ ವಿ.ಎಸ್. ಅವರು ಶೇಕಡಾ 95.72 ರಷ್ಟು ಅಂಕಗಳೊಂದಿಗೆ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ಇದೀಗ ಕಾಲೇಜಿಗೆ ಕೀರ್ತಿ ತಂದು ಕೊಟ್ಟಿರುವ ಸತ್ಯಸುಬ್ರಹ್ಮಣ್ಯ ಅವರನ್ನು ಕಾಲೇಜಿನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ಆಡಳಿತಾತ್ಮಕ ಸಿಬ್ಬಂದಿಗಳು, ರಕ್ಷಕ ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ ಹಾಗೂ ವಿದ್ಯಾರ್ಥಿ ವೃಂದ ಅಭಿನಂದಿಸಿದೆ.
ಸಂತ ಮೇರಿ ಕಾಲೇಜು, ಶಿರ್ವ ನಿರಂತರವಾಗಿ ಎಲ್ಲಾ ಕೋರ್ಸುಗಳ ಅಂತಿಮ ವರ್ಷದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದು ಅತ್ಯುತ್ತಮ ಫಲಿತಾಂಶ ಮತ್ತು ರ್ಯಾಂಕ್ ಗಳನ್ನು ಗಳಿಸುವ ಮುಖಾಂತರ ಒಂದು ವೈಶಿಷ್ಟ ಪೂರ್ಣ ಶಿಸ್ತುಬದ್ಧ ವಿದ್ಯಾ ಸಂಸ್ಥೆಯಾಗಿ ಬೆಳೆದಿದೆ.