ಉಡುಪಿ-ಮಣಿಪಾಲ ಕೊರೋನಾ ಕರ್ಫ್ಯೂ: ಯಾವುದಕ್ಕೆ ವಿನಾಯಿತಿ.? ಇಲ್ಲಿದೆ ಸಂಪೂರ್ಣ ಮಾಹಿತಿ…
ಉಡುಪಿ(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಸರಕಾರ ರಾಜ್ಯದ 8 ಜಿಲ್ಲೆಗಳಲ್ಲಿ ನೈಟ್ ಕಫ್ರ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಸರಕಾರದ ಆದೇಶದ ಪ್ರಕಾರ ನಾಳೆಯಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಕೊರೋನಾ ಕರ್ಫ್ಯೂ ವಿಧಿಸಲಾಗಿದೆ.
ಈ ಸಂದರ್ಭದಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆ ಹಾಗೂ ಇತರ ಚಟುವಟಿಕೆಗಳನ್ನು ನಿರ್ಭಂಧಿಸಿ ಆದೇಶವನ್ನು ನೀಡಲಾಗಿದೆ. ಆದರೆ ಈ ಆದೇಶದಲ್ಲಿ ಕೆಲವೊಂದು ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರನ್ನು ಕರೆದುಕೊಂಡು ಹೋಗಲು ಅವರಿಗೆ ಮತ್ತು ಅವರ ಸಹಾಯಕರಿಗೆ ಅನುಮತಿ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಎಲ್ಲಾ ಕಾರ್ಖಾನೆಗಳು, ಕಂಪನಿಗಳ ನೌಕರರಿಗೆ ರಾತ್ರಿ 10 ಗಂಟೆಯ ಒಳಗೆ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಬಳಿಕ ಬೆಳಿಗ್ಗೆ 5 ಗಂಟೆ ನಂತರ ಮನೆಗೆ ತೆರಳಲು ಅವಕಾಶ ನೀಡಲಾಗಿದೆ.
ವೈದ್ಯಕೀಯ ಚಟುವಟಿಕೆಯನ್ನು ಹೊರತು ಪಡಿಸಿ ವಿವಿಧ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿರ್ಭಂಧಿಸಲಾಗಿದೆ. ಯಾವುದಾದರೂ ಇ ಕಾಮರ್ಸ್ ಅಥವಾ ಹೋಂ ಡೆಲಿವರಿಗಳಿದ್ದರೆ ಅವರಿಗೆ ಮನೆಗಳಿಗೆ ತೆರಳಿ ವಸ್ತುಗಳನ್ನು ನೀಡಲು ಅನುಮತಿ ನೀಡಲಾಗಿದೆ. ದೂರದ ಊರಿಗೆ ರಾತ್ರಿ ಪ್ರಯಾಣ ನಡೆಸುವವರಿದ್ದರೆ ಅಂತವರಿಗೆ ಆಟೋ ಮತ್ತು ಕ್ಯಾಬ್ ಮೂಲಕ ಪ್ರಯಾಣಿಸಿಸಲು ಅವಕಾಶ ನೀಡಲಾಗಿದೆ ಆದರೆ ಅವರು ಟಿಕೆಟ್ ಹೊಂದಿರ ಬೇಕಗುತ್ತದೆ. ಈ ಆದೇಶ ಏ.10 ರ ರಾತ್ರಿ 10 ಗಂಟೆಯಿಂದ ಏ.20 ರ ರಾತ್ರಿ 10 ಗಂಟೆ ವರೆಗೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.