ಇಲಾಖೆಯ ವಾಹನ ದುರುಪಯೋಗ, ಲಕ್ಷಾಂತರ ರೂ.ವಂಚಿಸಿದ ಬಿಇಒ ವಿರುದ್ದ ಸೂಕ್ತ ತನಿಖೆ ನಡೆಸಿ: ಸುಂದರ್ ಮಾಸ್ತರ್
ಉಡುಪಿ, ಏ9.(ಉಡುಪಿ ಟೈಮ್ಸ್ ವರದಿ): ನಾನು ಓರ್ವ ನಿವೃತ್ತ ಶಿಕ್ಷಕ ಆದರೆ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮಂಜುಳಾ ಅವರು ತಮ್ಮ ಅಮಾನತು ವಿಚಾರವಾಗಿ ಮಾತನಾಡುವಾಗ ನನ್ನ ಮೇಲೆ ಆರೋಪ ಮಾಡುವ ವೇಳೆ ಶಿಕ್ಷಕರ ನೆಲೆಯನ್ನು ನನ್ನನ್ನು ಗುರುತಿಸುವ ಬದಲು ಡಿಎಸ್ಎಸ್ ಮುಖಂಡ ಎಂದು ಹೇಳಿರುವುದು ಬೇಜವಾಬ್ದಾರಿತನದ ಹೇಳಿಕೆಯಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಅಲ್ಲದೆ ಈ ಕುರಿತಾಗಿ ನಾನು ಮಂಜುಳಾ ಅವರ ಮೇಲೆ ಮಾನನಷ್ಟ ಮೊಕದದ್ದಮೆ ಹಾಕುವುದಾಗಿ ನಿವೃತ್ತ ಶಿಕ್ಷಕ ಸುಂದರ್ ಮಾಸ್ತರ್ ಅವರು ಎಚ್ಚರಿಕೆ ನೀಡಿದ್ದಾರೆ.
ಇಂದು ಉಡುಪಿಯಲ್ಲಿ ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮಂಜುಳ ಅವರು ನಿಜವಾಗಿ ಬಿಇಓ ಆಗಿರಲಿಲ್ಲ. ಮುಖ್ಯೋಪಾದ್ಯಾಯರ ಶ್ರೇಣಿಯಲ್ಲಿ ಇದ್ದವರು. ಅಲ್ಲದೆ ಅವರೆ ಹೇಳುವಂತೆ ಅವರು ದಕ್ಷ ಅಧಿಕಾರಿಯೂ ಅಲ್ಲ. ಅವರು ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಮಂದಿಗೆ ದೌರ್ಜನ್ಯವೆಸಗಿದ್ದಾರೆ. ಅನೇಕ ಸರಕಾರಿ ಶಾಲೆಗಳ ಸಿಗಬೇಕಾದ ಸೌಲಭ್ಯವನ್ನು ತಡೆಹಿಡಿದಿದ್ದಾರೆ ಎಂದು ಮಾಸ್ತರ್ ಆರೋಪ ಮಾಡಿದ್ದಾರೆ.dupi times
ಪುಸ್ತಕ, ಸಮವಸ್ತ್ರಗಳನ್ನು ಶಾಲೆಗಳಿಗೆ ಸರಬರಾಜು ಮಾಡಬೇಕೆನ್ನುವ ನಿಯಮ ಇದ್ದರೂ ಶಾಲೆಯ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗೆ ಬಂದು ತೆಗೆದುಕೊಂಡು ಹೋಗುವಂತೆ ಮಾಡಿ ಸರಬರಾಜು ಮಾಡಲಾಗಿದೆ ಎಂದು ಸುಳ್ಳು ವರದಿ ಕೊಟ್ಟು ಆ ಹಣವನ್ನು ವಂಚನೆ ಮಾಡಿದ್ದಾರೆ. ಇಷ್ಟೇ ಅಲ್ಲದೆ 2019 ರಲ್ಲಿ ನನ್ನ ಪೆನ್ಶನ್ ಪೇಪರ್ ಸಿಗಬೇಕಾದರೆ 50,000 ಲಂಚದ ಬೇಡಿಕೆ ಇಟ್ಟಿದ್ದರು. ಮಾತ್ರವಲ್ಲದೆ ಇಲಾಖೆಯ ವಾಹನವನ್ನು ದುರುಪಯೋಗ ಮಾಡಿಕೊಂಡು ಇಲಾಖೆಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಇದೆಲ್ಲದರ ವಿರುದ್ದ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತವಾದ ತನಿಖೆ ನಡೆಸಬೇಕು ಎಂದು ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ.
ಓಯಿ ಮಾಸ್ಟರ್ ಯಾವುದಾದರೂ ದಾಖಲೆ ಗಳಿದ್ದರೆ ತೋರಿಸಿ ಮಾತನಾಡಿ ಸುಮ್ಮನೆ ತೇಜೊವಧೆ ಮಾಡುವುದು ಬೇಡ
Ella kalre en madak agutte
ನಮ್ಮ ತಂದೆಯು ಒಬ್ಬ ಮುಖ್ಯೋಪಾಧ್ಯಾಯರು..ದಿನಾಲೂ ಅವರು ಅನುಭವಿಸುವ ಇಲಾಖಾ ಕಷ್ಟಗಳನ್ನು ನಾವು ಕಣ್ಣಾರೆ ನೋಡಿದ್ದೇವೆ..ಆದರೆ ಅವರು ತಮ್ಮ ಕಷ್ಟಗಳನ್ನು ಎಂದಿಗೂ ಮನೆಯಲ್ಲಿ ಚರ್ಚೆ ಮಾಡೋದಿಲ್ಲ..ಅಲ್ಪಸಂಖ್ಯಾತರಿಗೆ ಕೊಟ್ಟ ವಿನಾಯಿತಿ ಹಾಗೂ ಮೀಸಲಾತಿಗಳನ್ನು ಅವರು ದುರುಪಯೋಗ ಪಡಿಸಿಕೊಂಡು ಹಿರಿಯ ಅಧಿಕಾರಿಗಳ ತೇಜೋವಧೆ ಮಾಡುವ ಕುತಂತ್ರ ಇದು..ಒಂದು ವೇಳೆ ಈ ಸುಂದರ ಸರ್ ಹೇಳುವುದು ನಿಜವಾದರೆ ದಾಖಲೆ ಸಮೇತ ಬಹಿರಂಗಪಡಿಸಲಿ..ಕೇವಲ ಮಂಜುಳಾ ಮೇಡಂ ಒಬ್ಬರೇ ಅಲ್ಲ ಹಿಂತಹ ಎಷ್ಟೋ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ದೊಡ್ಡದಾಗಿದ್ದರೂ ಕೆಳಮಟ್ಟದ ಸಿಬ್ಬಂದಿಗಳ ಪ್ರಭಾವ ಸಲುವಾಗಿ ತಮ್ಮ ಕೆಲಸದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ..ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಲ್ಲ ವರ್ಗದ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿ ವರ್ಗಕ್ಕೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು..