ನಾಳೆಯಿಂದ ಮತ್ತೆ ಬ್ಯಾಂಕ್’ಗಳಿಗೆ ಸಾಲು ಸಾಲು ರಜೆ
ಉಡುಪಿ(ಉಡುಪಿ ಟೈಮ್ಸ್ ವರದಿ): ನಾಳೆಯಿಂದ ಮತ್ತೆ ಬ್ಯಾಂಕ್ಗಳಿಗೆ ಸಾಲು ಸಾಲು ರಜೆಗಳು ಬರುತ್ತಿವೆ. ಹಾಗಾಗಿ ಯಾವುದೇ ತುರ್ತು ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆ ಆಗುವ ಸಾಧ್ಯತೆಗಳಿವೆ.
ಏಪ್ರಿಲ್ 10 ಎರಡನೇ ಶನಿವಾರ, ಏಪ್ರಿಲ್ 11 ಭಾನುವಾರ, ಏಪ್ರಿಲ್ 13 ಯುಗಾದಿ, ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಪ್ರಯುಕ್ತ ರಜೆ ಇರುತ್ತದೆ. ಏಪ್ರಿಲ್ 12 ರಂದು ಸೋಮವಾರ ಯುಗಾದಿ, ಅಮಾವಾಸ್ಯೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಜನ ಬ್ಯಾಂಕ್, ಕಚೇರಿಗೆ ಬರುವುದಿಲ್ಲ. ಹೀಗಾಗಿ ಬ್ಯಾಂಕ್, ಕಚೇರಿಗಳಿಗೆ ಸತತ ರಜೆ ಇರುತ್ತದೆ. ಆದ್ದರಿಂದ ಸಾಲು ಸಾಲು ರಜೆಗಳಿಂದ ಯಾವುದೇ ಬ್ಯಾಂಕ್, ಕಚೇರಿ ವ್ಯವಹಾರ, ಕೆಲಸ ಕಾರ್ಯಗಳಿದ್ದಲ್ಲಿ ಇಂದೇ ಮುಗಿಸುವುದು ಉತ್ತಮ.