ಉಡುಪಿ: ಟಫೆ ಎಕ್ಸೆಸ್ ನೂತನ ಸ್ಕೋಡಾ ಕಾರು ಶೋರೂಮ್ ಶುಭಾರಂಭ

ಉಡುಪಿ, ಎ.8: ಉಡುಪಿ ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ರಾಮರಾಜ ಟವರ್‌ನಲ್ಲಿ ಸ್ಕೋಡಾ ಅಟೋ ಇಂಡಿಯಾ ಇದರ ‘ಟಫೆ ಎಕ್ಸೆಸ್’ ನೂತನ ಶೋರೂಮ್ ಗುರುವಾರ ಶುಭಾರಂಭಗೊಂಡಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಭಯ್ ಗುಪ್ತ, ಪ್ರಥಮ ಗ್ರಾಹಕರಾದ ಮಣಿಪಾಲ ಕೆನರಾ ಬ್ಯಾಂಕಿನ ಮೆನೇಜರ್ ನೀರಜ್ ಶ್ರೀಕಾಂತ್ ಯಾದವ್ ಅವರಿಗೆ ಕಾರಿನ ಕೀಲಿ ಕೈ ಹಸ್ತಾಂತರಿಸುವ ಮೂಲಕ ನೂತನ ಶೋ ರೂಮ್‌ನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅಭಯ್ ಗುಪ್ತ, ನಾನು ಕಳೆದ 1990ರಿಂದ ಸ್ಕೋಡಾ ಕಾರನ್ನು ಬಳಸುತ್ತಿದ್ದೇನೆ. ನಾನು ಮೊದಲ ಕಾರನ್ನು ಟಫೆಯಲ್ಲಿಯೇ ಖರೀದಿಸಿರು ವುದು. ಇದರಲ್ಲಿ ನಾನು ತುಂಬಾ ಸಂತೃಪ್ತನಾಗಿದ್ದೇನೆ. ಪ್ರಸ್ತುತ ನನ್ನಲ್ಲಿರುವುದು ನಾಲ್ಕನೇ ಕಾರಾಗಿದೆ. ಉತ್ತಮ ಸೇವೆ ಕೂಡ ಇವರಿಂದ ದೊರೆಯುತ್ತಿದೆ. ಕಾರು ಕೂಡ ಅಷ್ಟೆ ಗುಣಮಟ್ಟದ್ದಾಗಿದೆ. ಹೊಸ ಗ್ರಾಹಕರು ಕೂಡ ನನ್ನ ಹಾಗೆ ಸಂತೃಪ್ತಿ ಹೊಂದಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್‌ನ ಪ್ರಮೋದ್ ಫೆರ್ನಾಂಡಿಸ್, ಸ್ಕೋಡಾ ಇದರ ಉಡುಪಿ, ಮಂಗಳೂರು, ಶಿವಮೊಗ್ಗ ಶಾಖೆ ಗಳ ಶಾಖಾ ವ್ಯವಸ್ಥಾಪಕ ಅಬೂಬಕ್ಕರ್ ಸಿದ್ದೀಕ್, ಮಂಗಳೂರು ಶಾಖೆಯ ಸರ್ವೀಸ್ ಮೆನೇಜರ್ ವಿನೋದ್ ಡಿಸೋಜ, ಹಿರಿಯ ವ್ಯವಸ್ಥಾಪಕ ವಿದ್ಯಾಧರ್ ಸಿತೂರು, ಕಟ್ಟಡದ ಮಾಲಕ ಕೆ.ಎಸ್.ಸುರೇಶ್ ರಾವ್, ಉಡುಪಿ ಶಾಖೆಯ ಸಹಾಯಕ ವ್ಯವಸ್ಥಾಪಕ ಹರಿಪ್ರಸಾದ್ ಕೆ. ಉಪಸ್ಥಿತರಿದ್ದರು. 

2.0 ಸ್ಕೋಡಾ ಪ್ರಾಜೆಕ್ಟ್ ಅಡಿಯಲ್ಲಿ ಉಡುಪಿ ಮತ್ತು ಶಿವಮೊಗ್ಗದ ಹೊಸ ಶೋರೂಮ್‌ಗಳನ್ನು ಆರಂಭಿಸಲಾಗಿದೆ. ಉಡುಪಿ ಶಾಖೆಯು ವಿಶಾಲವಾದ ಶೋರೂಮ್‌ನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ ರೀತಿಯ ಸೇವೆ ಇಲ್ಲಿ ದೊರೆಯಲಿದೆ. ಹೊಸ ಸ್ಕೋಡಾ ರ್ಯಾಪಿಡ್ ಟಿಎಸ್ಐ(1 ಲೀಟರ್ ಇಂಜಿನ್, ಕಾರಿನ ಆರಂಭ ದರ 7.79 ಲಕ್ಷ ರೂ.) ಮತ್ತು ಹೊಸ ಸೂಪರ್ಬ್‌ ಕಾರು (ಅಡ್ವಾನ್ಸ್‌ಡ್ ಟೆಕ್ನಾಲಜಿ, 2 ಲೀಟರ್ ಇಂಜಿನ್ ವಿಥ್ 190 ಪಿಎಸ್ ಪವರ್) ಗಳು ಶೋರೂಮ್‌ನಲ್ಲಿ ಲಭ್ಯ ಇವೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 7874334444ನ್ನು ಸಂಪರ್ಕಿಸಬಹುದು ಎಂದು ವ್ಯವಸ್ಥಾಪಕ ಅಬೂಬಕ್ಕರ್ ಸಿದ್ದೀಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!