ಕಾರ್ಕಳ: ಚುಚ್ಚುಮದ್ದು ಪಡೆದ ನಾಲ್ಕುವರೆ ತಿಂಗಳ ಹಸುಗೂಸು ಮೃತ್ಯು
ಕಾರ್ಕಳ: ಚುಚ್ಚುಮದ್ದು ಪಡೆದ ಕೆಲವೇ ಗಂಟೆಗಳಲ್ಲಿ ನಾಲ್ಕುವರೆ ತಿಂಗಳ ಹಸುಗೂಸೊಂದು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ. ಶ್ರೀಯಾನ್ ನಾಲ್ಕೂವರೆ ತಿಂಗಳಿನ ಮೃತಪಟ್ಟ ಮಗು.
ಏ.4 ರಂದು ಮಧ್ಯಾಹ್ನ 12:30 ರ ಸುಮಾರಿಗೆ ಕಾರ್ಕಳದ ರೆಂಜಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀಯಾನ್ಗೆ ಆರೋಗ್ಯ ಕೇಂದ್ರದ ಶುಶ್ರೂಕಿಯರು ತಿಂಗಳ ಚುಚ್ಚು ಮದ್ದು ನೀಡಿದ್ದರು. ಬಳಿಕ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದು ಮದ್ಯಾಹ್ನ 02:30 ರಿಂದ 3 ಗಂಟೆಯ ಅವದಿಯಲ್ಲಿ ಮಗುವಿನ ಬಾಯಿಯಲ್ಲಿ ನೊರೆ ಬಂದಿದ್ದು, ತೀವೃ ರೀತಿಯಲ್ಲಿ ಅಸ್ವಸ್ಥಗೊಂಡಿದೆ.
ಈ ವೇಳೆ ತಕ್ಷಣ ಮಗುವನ್ನು ಕಾರ್ಕಳ ರೋಟರಿ ಪೈ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶ್ರೀಯಾನ್ಗೆ ಚುಚ್ಚುಮದ್ದು ನೀಡಿದ ಅಡ್ಡ ಪರಿಣಾಮದಿಂದಲೇ ಮೃತಪಟ್ಟಿದ್ದಾಗಿ ಮಗುವಿನ ಮರಣದಲ್ಲಿ ಸಂಶಯ ವ್ಯಕ್ತಪಡಿಸಿ ಸುಧಾಕರ ಆರ್. ಶೆಟ್ಟಿ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.