ಉಡುಪಿ: ಸಿನೆಮಾ ನೋಡಲು ಹೋಗಿದ್ದ ಯುವಕ ನಾಪತ್ತೆ
ಉಡುಪಿ: ಸಿನೆಮಾ ನೋಡಲು ಬಂದಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಸಂದೀಪ(30) ಕಾಣೆಯಾದವರು. ಇವರು ಏ.4 ರಂದು ಕಾಪು ತಾಲೂಕಿನ ಮಟ್ಟು ಗ್ರಾಮದ ವಸಂತಿ ಶೇರಿಗಾರ್ತಿ ಅವರ ಅಣ್ಣನ ಮಗನಾಗಿದ್ದು, ಇವರೊಂದಿಗೆ ಮಟ್ಟುವಿನಲ್ಲಿ ವಾಸವಾಗಿದ್ದರು. ಏ.4 ರಂದು ಮನೆಯಿಂದ ಸಿನೆಮಾ ನೋಡಲು ಉಡುಪಿಯ ಚಲನಚಿತ್ರ ಮಂದಿರಕ್ಕೆ ಮನೆಯ ಇತರ ಮಕ್ಕಳೊಂದಿಗೆ ಬಂದಿದ್ದರು. ಅದೇ ದಿನ ರಾತ್ರಿ ಸಿನೆಮಾ ನೋಡಲು ಹೋಗಿದ್ದ ಮಕ್ಕಳು ಮನೆಗೆ ಮರಳಿ ಬಂದಿದ್ದು ಮಕ್ಕಳ ಜೊತೆಗೆ ಸಂದೀಪ ಇಲ್ಲದಿರುವುದನ್ನು ಗಮನಿಸಿದ ವಸಂತಿ ಅವರು ಮಕ್ಕಳಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ.
ಆಗ ಮಕ್ಕಳು ಸಂದೀಪ ತಮ್ಮ ಜೊತೆಗೆ ಚಲನಚಿತ್ರ ನೋಡಲು ಬಂದಿರುವುದಿಲ್ಲ ಎಂದು ಹೇಳಿ ಕೆಎಸ್ಅರ್ಟಿಸಿ ಬಸ್ ನಿಲ್ದಾಣದ ಬಳಿ ಹೋಗಿದ್ದ ಎಂದು ತಿಳಿಸಿದ್ದಾರೆ. ಬಳಿಕ ಸಂದೀಪನ ಕುರಿತಾಗಿ ಸಂಬಂಧಿಕರ ಮನೆಗೆ ಹಾಗೂ ಪರಿಚಯದವರೆಲ್ಲರಿಗೆ ಕರೆ ಮಾಡಿ ವಿಚಾರಿಸಿದ್ದು ಈ ವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.