ಭ್ರಷ್ಟಚಾರ ಮುಕ್ತ ಕಛೇರಿ ಮಾಡಲು ಹೊರಟ ನನ್ನ ಅಮಾನತು ಮಾಡಿದ್ದಾರೆ: ಉಡುಪಿ ಕ್ಷೇತ್ರ ಶಿಕ್ಷಾಣಾಧಿಕಾರಿ ಕೆ.ಮಂಜುಳ

ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳ ಅವರ ಅಮಾನತು ವಿಚಾರ ಈಗ ಹೊಸ ತಿರುವು ಪಡೆದುಕೊಂಡಿದೆ. ಮಂಜುಳ ಅವರು ತಮ್ಮ ಅಮಾನತಿನ ಕುರಿತಂತೆ ನೀಡಿರುವ ಪ್ರತಿಕ್ರಿಯೆ ಪ್ರಕಾರ ಇದೊಂದು ತನ್ನ ವಿರುದ್ದ ದ್ವೇಷದಿಂದ ಮಾಡಿರುವ ಪಿತೂರಿ ಎಂದಿದ್ದಾರೆ.

ಈ ಬಗ್ಗೆ ಖುದ್ದು ಕೆ. ಮಂಜುಳ ಅವರು ‘ಉಡುಪಿ ಟೈಮ್ಸ್‌’ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಹಿಂದೆ ಶಿಕ್ಷಣ ಸಂಯೋಜಕ (ಇಸಿಒ) ಆಗಿದ್ದ ಚಂದ್ರ ನಾಯ್ಕ್ ಅವರು, 40 ಮಂದಿ ಶಿಕ್ಷಕರ ಸಹಿಯನ್ನು ಪೋರ್ಜರಿ ಮಾಡಿ ರೂ.35,000ರೂ ಹಣವನ್ನು ದುರ್ಬಳಕೆ ಮಾಡಿದ್ದರು. ಅಲ್ಲದೆ ಹಿಂದೆ ಇದ್ದಂತಹ ಬಿಒ ಲೋಕೇಶಪ್ಪ ಅವರ ಸಹಿಯನ್ನೂ ಪೋರ್ಜರಿ ಮಾಡಿದ್ದರು. ಮಾತ್ರವಲ್ಲದೆ ಚಂದ್ರನಾಯ್ಕ್ ಶಿಕ್ಷಿಕಯೊಬ್ಬರ ಬಗ್ಗೆ ಅಸಹ್ಯಕರವಾದ ಪದಗಳ ಪತ್ರವನ್ನು ಬರೆದಿದ್ದರು. ಅವರು ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿ, ತುಂಬಾ ಉದ್ದಟತನದಿಂದ ವರ್ತಿಸಿದ್ದು, ಕಚೇರಿಯಲ್ಲಿ ನನ್ನ ಬಳಿ ಜಗಳವಾಡಿದ್ದಾರೆ ಎಂದು ಅಮಾನತುಗೊಂಡ ಬಿಇಒ ಮಂಜುಳ ದೂರಿದ್ದಾರೆ.

ಇದರ ಜೊತೆಗೆ ಪಠ್ಯಪುಸ್ತಕ ವಿತರಣೆಯ ಅವಧಿಯಲ್ಲಿ ಕೂಡ ಶಾಲೆಗಳಲ್ಲಿ ಹಣವನ್ನು ವಸೂಲಿ ಮಾಡಿದ್ದಾರೆ. ಈ ಬಗ್ಗೆ ಅವರಿಗೆ ನೋಟಿಸ್ ನೀಡಿ ತನಿಖೆಗೆ ಕರೆದಾಗ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಬಳಿ ಹೋಗಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಆಗ ಡಿಡಿಪಿಐ ಆಗಿದ್ದಂತಹ ಶೇಷಶಯನ ಅವರನ್ನು ಕರೆದು ಕಡತ ಹಿಂದಕ್ಕೆ ಪಡೆದುಕೊಳ್ಳುವಂತೆ ಅವರಿಗೆ ಒತ್ತಡ ಹೇರಿದ್ದಾರೆ.

ಈ ಬಗ್ಗೆ ನನ್ನ ಬಳಿ ಬಂದಾಗ ನಾನು ಕಡತ ವಾಪಾಸ್ಸು ಪಡೆಯಲು ಆಗುವುದಿಲ್ಲ ಎಂದು ಹೇಳಿದ್ದೆ. ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಅವರು ತನ್ನನ್ನು ನಿಂದಿಸಿದ್ದಾರೆ, ಈ ಬಗ್ಗೆ ಮಹಿಳಾ ಆಯೋಗಕ್ಕೆ ಪತ್ರನೂ ಬರೆದಿರುವುದಾಗಿ ತಿಳಿಸಿದ್ದಾರೆ. ಪ್ರತಿ ಜಿಲ್ಲಾ ಪಂಚಾಯತ್ ಸಭೆಯಲ್ಲೂ ನನಗೆ ಬೈದಿದ್ದು, ಈ ವರೆಗೆ ನನ್ನನ್ನು ವೈರಿಯಂತೆ ನೋಡಿದ್ದಾರೆ.

ಉದ್ಯಾವರದಲ್ಲಿ ಪ್ರೀ ಪ್ರೈಮರಿ ಶಾಲೆಯನ್ನು ತೆರೆಯುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕಾನೂನು ಬಾಹಿರವಾಗಿ ಅನುಮತಿ ನೀಡುವಂತೆ ಒತ್ತಡ ತಂದಿದ್ದರು. ಅದಕ್ಕೆ ನಾನು ಒಪ್ಪಿಗೆ ಸೂಚಿಸಿರಲಿಲ್ಲ. ಅಲ್ಲದೆ ಡಿಎಸ್‌ಎಸ್ ಮುಖಂಡ ಸುಂದರ್ ಅವರು ಸರಕಾರಕ್ಕೆ ವಂಚಿಸಿದ್ದ ಎರಡೂವರೆ ಲಕ್ಷ ಹಣವನ್ನು ಪಾವತಿಸಬೇಕಾಗಿದ್ದು, ಆ ಮೊತ್ತವನ್ನು ಕೂಡ ಕಡಿಮೆ ಮಾಡುವಂತೆ ಒತ್ತಡ ತಂದಿದ್ದರು. ಆಗ ಅದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ.

ಅಲ್ಲದೆ ನನ್ನ ಇಲಾಖಾ ವಾಹನದ ಚಾಲಕ ರಾಘವೇಂದ್ರ ಅವರು ಅನಧಿಕೃತ ರಜೆ ಮಾಡುವುದು, ಮನಬಂದಂತೆ ವಾಹನ ಚಲಾಯಿಸುವ ಕುರಿತಾಗಿ ಕ್ರಮ ಕೈಗೊಳ್ಳುವಂತೆ ನೋಟಿಸ್ ನೀಡಿದ್ದೆ, ಹಾಗೂ ವಯಸ್ಕರ ಶಿಕ್ಷಣದ ಕಾರ್ಯಕ್ರಮ ಸಹಾಯಕ ದಿನಕರ ಶೆಟ್ಟಿ ಅವರು ಒಂದು ವರುಷದಿಂದ ಅನಧಿಕೃತವಾಗಿ ಗೈರು ಹಾಜರಾಗಿದ್ದು ಈ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ನೋಡಿಸ್ ನೀಡಿದ್ದೆ. ಆದರೆ ಈ ಮೂವರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿ ನನ್ನ ಮೇಲಿನ ದ್ವೇಷದಿಂದ ಚಂದ್ರ ನಾಯ್ಕ್ ಅವರು ಅಶೋಕ ಕೊರಂಗ್ರಪಾಡಿ ಅವರ ಹೆಸರಿನಲ್ಲಿ ಅನಾಮದೇಯ ಪತ್ರ ಬರೆದಿದ್ದರು. ಆದರೆ ಅಶೋಕ ಕೊರಂಗ್ರಪಾಡಿ ಅವರನ್ನು ಕರೆದು ವಿಚಾರಿದಾಗ ಅವರು ಮಂಜುಳಾ ಮೇಡಂ ಅಂದರೆ ಯಾವುರೆಂದು ನನಗೆ ತಿಳಿದಿಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

ನನ್ನ ವಿರುದ್ಧ ಅನಾಮದೇಯ ಪತ್ರಗಳು ಬಂದಿರುವುದು ಚಂದ್ರ ನಾಯ್ಕ್ ಮತ್ತು ಪ್ರತಾಪ್ ಹೆಗ್ಡೆ ಮಾರಾಳಿ ಮೂಲಕವಾಗಿ ಬಂದಿದೆ. ಆದರೆ ಸರಕಾರದ ಆದೇಶದ ಪ್ರಕಾರ ಅನಾಮದೇಯ ಪತ್ರಗಳು ಬಂದಾಗ ಅದನ್ನು ವಿಚಾರಣೆ ಮಾಡಬಾರದು ಎಂದು ಇದೆ. ಆದರೂ ಅದನ್ನು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿ ತನಿಖೆ ಮಾಡುವ ಹಾಗೆ ಸಿಇಒ ಮೇಲೆ ಒತ್ತಡ ತರಲಾಯಿತು.

ಅದರಂತೆ ಸಿಇಒ ಅವರು ಡಿಡಿಪಿಐಗೆ ಪತ್ರ ಬರೆದು ವಿಚಾರಣೆ ನಡೆಸುವಂತೆ ತಿಳಿಸಿದ್ದಾರೆ. ಆಗ ಡಿಡಿಪಿಐ ಅವರು ಸರಕಾರದ ಆದೇಶದ ಪ್ರಕಾರ ಅನಾಮದೇಯ ಪತ್ರಗಳು ಬಂದರೆ ಅದನ್ನು ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಹೇಳಬೇಕಿತ್ತು ಆದರೆ ಸಿಇಓಗೆ ಹೇಳದೆ ಡಿಡಿಪಿಐ ನನ್ನನ್ನು ವಿಚಾರಿಸದೆ ಕಚೇರಿಯಲ್ಲಿ ವಿಚಾರಣೆ ಮಾಡಿ ವರದಿ ನೀಡಿದ್ದಾರೆ. ಆ ವರದಿಯಲ್ಲಿ ನನ್ನ ವಿರುದ್ಧ ಯಾವುದೇ ಮಾಹಿತಿ ಇರಲಿಲ್ಲ. ಅದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಪ್ರತಾಪ್ ಹೆಗ್ಡೆ ಮಾರಾಳಿ ಅವರು ನನ್ನಮೇಲೆ ಯವುದಾದರೊಂದು ಕೇಸು ಹಾಕಬೇಕು ಎನ್ನುವ ಉದ್ದೇಶದಿಂದ ಪ್ರೊಸಿಜರ್ ಲಾಪ್ಸ್ ಆಗಿರುವ ಕೇಸ್‌ಗಳನ್ನು ಹಾಕಿ ಅಮಾನತು ಮಾಡುವಂತೆ ಮಾಡಿದ್ದಾರೆ.

ನಮ್ಮ ಕಚೇರಿಯನ್ನು ಭ್ರಷ್ಟಾಚಾರ ಮುಕ್ತ ಕಚೇರಿ ಮಾಡಬೇಕು ಎನ್ನುವ ಉದ್ದೇಶದಿಂದ ಈ ರೀತಿ ಕ್ರಮ ಕೈಗೊಳ್ಳಬೇಕಾಗಿ ಬಂತು. ಆ ಬಳಿಕ ರಾಘವೇಂದ್ರ ಹಾಗೂ ಚಂದ್ರ ನಾಯ್ಕ್ ಗೆ ಡೆಪ್ಯುಟೇಶನ್ ಆಗಿತ್ತು. ಆದರೆ ನನ್ನ ಇಲಾಖಾ ವಾಹನಕ್ಕೆ ಚಾಲಕನನ್ನೂ ನೀಡಿರಲಿಲ್ಲ. ಈ ಅವಧಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದೆ. ಸದ್ಯ ಈ ಮೂವರು ನಮ್ಮ ಕಚೇರಿ ಇಲ್ಲದೇ ಇದ್ದು ಭ್ರಷ್ಟಾಚಾರ ಮುಕ್ತ ಕಚೇರಿ ಆಗಿದೆ. ಈ ರೀತಿ ಭ್ರಷ್ಟಾಚಾರ ವಿರುದ್ಧ ಹೋರಾಡಿದ ನನ್ನನ್ನು ಅಮಾನತು ಮಾಡಿದ್ದಾರೆ ಎಂದು ಬಿಇಒ ಮಂಜುಳ ದೂರಿದ್ದಾರೆ.

98 thoughts on “ಭ್ರಷ್ಟಚಾರ ಮುಕ್ತ ಕಛೇರಿ ಮಾಡಲು ಹೊರಟ ನನ್ನ ಅಮಾನತು ಮಾಡಿದ್ದಾರೆ: ಉಡುಪಿ ಕ್ಷೇತ್ರ ಶಿಕ್ಷಾಣಾಧಿಕಾರಿ ಕೆ.ಮಂಜುಳ

  1. I strongly disagree that Manjula madam is guilty.. She is one of the most prompt officers in education department who is ever conscious to teachers problem and highly enthusiastic and motivating the teachers… I m the witness that she strived to make Udupi B E office corruption free… because when I got appointed in 2018 December I did not get my salary for one year..After which I approached her and I enquired whether I need to bribe the case worker as everyone was suggesting me…She was shocked to here me and told me that was next to impossible and how she was striving to keep the office corruption free. She also told me that I should have brought to her notice about delay of my salary.. She assured me that she would personally follow it up and within two months my first salary for the whole year of 2019 was processed…She s the epitome of determination and will power…. SATYA MEVA JAYATHE

  2. We will miss you madam..

    In my service of 17 yrs never have we encountered an efficient,
    teacher friendly, Helpful and knowledgeable BEO like her.
    She has left her imprint in our hearts and mind with
    her efficient work and Discipline..

    Surely one more blow to Udupi block during this pandemic situation.

    Miss you and ur smiling face Mam…

    Wish you never change and return back soon

  3. We will miss you madam..

    In my service of 17 yrs never have we encountered an efficient,
    teacher friendly, Helpful and knowledgeable BEO like her.
    She has left her imprint in our hearts and mind with
    her efficient work and Discipline..

    Surely one more blow to Udupi block during this pandemic situation.

    Miss you and ur smiling face Mam…

    Wish you never change and return back soon

  4. ಮಂಜುಳಾ ಮೇಡಮ್ ರಂತಹ ನಿಷ್ಟಾವಂತ ಅಧಿಕಾರಿಗಳಿಗೆ ಸಿಕ್ಕ ಪ್ರತಿಫಲ ಇದು..ನನ್ನಂತ ಅದೆಷ್ಟೋ ಶಿಕ್ಷಕ ವೃಂದಕ್ಕೆ ಮಂಜುಳಾ ಮೇಡಮ್ ಒಬ್ಬ role model ..ಯಾವುದೇ ಭ್ರಷ್ಟ ಅಧಿಕಾರಿಯನ್ನು ಯಾರೂ role model ಅನ್ನಲು ಸಾಧ್ಯವಿಲ್ಲ . ಈ ವಿಷಯ ಕೇಳಿ ಅದೆಷ್ಟೋ ಶಿಕ್ಷಕರ ಮನಸ್ಸು ನೊಂದಿದೆ ಅಂದಾದರೆ ಇದು ಅವರ ಪ್ರಾಮಾಣಿಕ ಸೇವೆಗೆ ಸಾಕ್ಷಿಯಾಗಿದೆ.. Its really unfair ..

  5. ಮೇಡಂ ನೀವು ಅಮಾನತುಗೊಂಡಿದ್ದು ಓದಿ ತುಂಬಾ ನೋವಾಯಿತು. ಶಿಕ್ಷಣದ ಬಗ್ಗೆ ನಿಮಗೆ ಇದ್ದ ಕಾಳಜಿ ಎಲ್ಲರಿಗೂ ತಿಳಿದಿದೆ. ತುಂಬಾ ಬದಲಾವಣೆಗಳನ್ನು ತಂದಿರಿ.. ಅನ್ಯಾಯದ ವಿರುದ್ದ ಹೋರಾಟ ಮಾಡಲು ಹೋಗಿ ಇಂತಹ ಶಿಕ್ಷೆ ಅನುಭವಿಸುವಂತಾಯಿತು. ಮೇಡಂ ಯಾವಾಗಲೂ ನ್ಯಾಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಭರವಸೆ ಕಳೆದುಕೊಳ್ಳಬೇಡಿ

  6. ಒಬ್ಬ ನಿಷ್ಟಾವಂತ ಅಧಿಕಾರಿಗೆ ಸಿಕ್ಕ ಪ್ರತಿಫಲ ಇದು. ಶಿಕ್ಷಕರಾಗಿ ನಾವು ಮಕ್ಕಳಿಗೆ ಪ್ರಾಮಾಣಿಕತೆಯ ಪಾಠವನ್ನು ಯಾವ ಧೈರ್ಯದಿಂದ ಹೇಳಲು ಸಾಧ್ಯ. ಪ್ರಾಮಾಣಿಕತೆಗೆ ಇದುವೇ ಪ್ರತಿಫಲವಾದರೆ … ನನ್ನಂತ ಅದೆಷ್ಟೋ ಶಿಕ್ಷಕರಿಗೆ ಮಂಜುಳಾ ಮೇಡಮ್ role model ಆಗಿರುವುದೇ ಅವರ ಪ್ರಮಾಣಿಕತೆಗೆ , ಕ್ರಿಯಾಶೀಲತೆಗೆ ಸಾಕ್ಷಿ. ಇಂದು ಎಷ್ಟೋ ಶಿಕ್ಕಕರು ಹೊಸ ಹುರುಪಿನಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರೆ ಅದಕ್ಕೆ ಮಂಜುಳಾ ಮೇಡಮ್ ನೀಡಿದ ಪ್ರೋತ್ಸಾಹವೇ ಕಾರಣ. This is really unfair.

  7. ಮೇಡಂ ಕೆಲಸದ ಬಗ್ಗೆ ಎಲ್ಲಾ ಶಿಕ್ಷಕರಿಗೆ ತುಂಬಾ ಅಭಿಮಾನ ಇದೆ. ಅವರ ಏಳಿಗೆ ಯನ್ನು ಸಹಿಸದ ಜನ ಈ ವರ್ಷ ಏನೆಲ್ಲಾ ಪ್ರಯತ್ನ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ
    ತಿಳಿದ ವಿಚಾರ. ಒಬ್ಬ ಯೋಗ್ಯ ಅಧಿಕಾರಿ ಕಛೇರಿ ನಡೆ
    ಸುವುದು ಯಾರಿಗೂ ಬೇಡ ಆಗಿದೆ.ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಈ ಉಡುಪಿಯಲ್ಲಿ ನೆಲೆಯಿದೆ ಎನ್ನುವುದನ್ನು ಈ ಬಾರಿ ಕೂಡ ತೋರಿಸಿಕೊಟ್ಟಿದೆ.
    …….

    ಸತ್ಯಕ್ಕೆ ಜಯ ಸಿಗಲಿ.. ಇದು ಶ್ರೀಕೃಷ್ಣನ ನಾಡು.

  8. Yes .. I also support msnjula madam. She was Really a good officer. Her duty time she give good support to society & Good Service to her Department. We should boycott political issues & ban political back ground employees.

  9. Manjula madam is an able ,honest and prompt Officer. She has done an excellent job in Education department.She has sympathy over the teachers and has patience to listen their problems.She reacts immediately to solve their any problems without delay .Nowadays we need such type of Officers in every government field for smooth function of the departmental work.

  10. ಶಿಕ್ಷಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವರಾಗಿದ್ದರು. ನೇರವಾಗಿ ಇವರ ಜೊತೆ ಯಾವುದೇ ಅಂಜಿಕೆಯಿಲ್ಲದೆ ಮಾತನಾಡಬಹುದಿತ್ತು.

  11. ಪ್ರಾಮಾಣಿಕ ,ನಿಷ್ಠಾವಂತ ,ದಕ್ಷ ಅಧಿಕಾರಿ ನಮ್ಮ ಬಿ ಇ ಒ ಮಂಜುಳಾ ಮೇಡಂ

  12. ಈ ಜಿಲ್ಲೆಯ ಅತ್ಯುತ್ತಮ ಶಿಕ್ಷಕಸ್ನೇಹಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದರು ದಯವಿಟ್ಟು ಅವರಿಗೆ ನ್ಯಾಯ ಸಿಗಬೇಕು ನಮ್ಮ ಎಲ್ಲ ಶಿಕ್ಷಕ ವರ್ಗಕ್ಕೆ ನ್ಯಾಯ ಸಿಕ್ಕಂತೆ

  13. ಜಿಲ್ಲಾ ಪಂಚಾಯತ್ ಅಧ್ಯಕ್ಷ ರು ಸತ್ಯ ಹರಿಸ್ಸಚಂದ್ರರು. ಅವರಿಗೆ ಕಾನೂನಿನ ಅರಿವಿಲ್ಲದೆ ಇರುವುದರಿಂದ ಬೇಕಾಬಿಟ್ಟೆ ವತಿ೯ಸುತ್ತೀದ್ದಾರೆ. ಮೇಡಮ್ ನಿಮ್ಮ ಅಮಾನತು ಕಾನೂನು ಬಾಹಿರ ಇದನ್ನು ನಾನು ಖಂಡಿಸುತ್ತೇನೆ

  14. Manjula madam was very honest and hard working beo.
    When I heard the issue about her .I shocked bcz
    Such a wonderful woman I ever seen.i experienced lot of problems in textbook distribution.after she came, all these sloved.she done so many good works in improving the quality education as well as administration.plz give justice to her work and high aim.sathya meva jayathe

  15. ದಕ್ಷ, ಪ್ರಾಮಾಣಿಕ, ಸಹೃದಯಿ ಮನೋಭಾವದ ಮಂಜುಳ ಮೇಡಂ ಅಂದ ಅನ್ಯಾಯ ಸತ್ಯಕ್ಕೆ ಸಂದ ಅಪಜಯ

  16. Manjula madam really honest and hard worker …she is motivator to all of us as a teacher…as a guide…she is motivating us…. A inspiration to us…she built a good relationship with all teachers….she is the best……we want her back again …madam..we are with u …

  17. She is honest and hardworking beo.in her period lots of development took place in the education and adminstration.plz give justice to her work and high aim

  18. ನೇರ ದಿಟ್ಟ, ಪ್ರಾಮಾಣಿಕ ಮಹಿಳಾ ಅಧಿಕಾರಿಗೆ ದೊರಕಿದ ಕಹಿ ಉಡುಗೊರೆ ಇದು. ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿದ್ದ ಸಾಕಷ್ಟು ಲೋಪದೋಷಗಳನ್ನು ಅತೀ ಕಡಿಮೆ ಅವಧಿಯಲ್ಲಿ ಸರಿಪಡಿಸಿ ಶೀಘ್ರವಾಗಿ ಎಲ್ಲಾ ಕೆಲಸ ನಡೆಯುವಂತೆ ಶ್ರಮಿಸಿದ, ಅತೀ ಸರಳ ವ್ಯಕ್ತಿ ನಮ್ಮ ಮಂಜುಳಾ ಮೇಡಂ, ಅವರ ಅಮಾನತ್ತಿನಿಂದ ನಷ್ಟವಾಗಿರುವುದು ಶಿಕ್ಷಣ ಇಲಾಖೆಗೇ ಹೊರತು ಅವರಿಗಲ್ಲ‌, ಖಂಡಿತವಾಗಿಯೂ ನ್ಯಾಯ, ಸತ್ಯ ಪ್ರಾಮಾಣಿಕತೆಗೆ ಜಯ ನಿಶ್ಚಿತ ಮೇಡಂ, ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ

  19. ನೇರ ದಿಟ್ಟ, ಪ್ರಾಮಾಣಿಕ ಮಹಿಳಾ ಅಧಿಕಾರಿಗೆ ದೊರಕಿದ ಕಹಿ ಉಡುಗೊರೆ ಇದು. ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿದ್ದ ಸಾಕಷ್ಟು ಲೋಪದೋಷಗಳನ್ನು ಅತೀ ಕಡಿಮೆ ಅವಧಿಯಲ್ಲಿ ಸರಿಪಡಿಸಿ ಶೀಘ್ರವಾಗಿ ಎಲ್ಲಾ ಕೆಲಸ ನಡೆಯುವಂತೆ ಶ್ರಮಿಸಿದ, ಅತೀ ಸರಳ ವ್ಯಕ್ತಿ ನಮ್ಮ ಮಂಜುಳಾ ಮೇಡಂ, ಅವರ ಅಮಾನತ್ತಿನಿಂದ ನಷ್ಟವಾಗಿರುವುದು ಶಿಕ್ಷಣ ಇಲಾಖೆಗೇ ಹೊರತು ಅವರಿಗಲ್ಲ‌, ಖಂಡಿತವಾಗಿಯೂ ನ್ಯಾಯ, ಸತ್ಯ ಪ್ರಾಮಾಣಿಕತೆಗೆ ಜಯ ನಿಶ್ಚಿತ ಮೇಡಂ, ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ

  20. ಪ್ರಾಮಾಣಿಕ,ದಕ್ಷ, ಅಧಿಕಾರಿ ನಮ್ಮ ಬಿ.ಇ.ಓ.ಮೇಡಂ . ದೇವರು ನಿಮ್ಮನ್ನು ಕಾಪಾಡುತ್ತಾನೆ . ಸತ್ಯಕ್ಕೆ ಜಯ ಇದೆ ಮೇಡಂ.ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ ಮೇಡಂ

  21. ದಕ್ಷ ,ದಿಟ್ಟ, ಪ್ರಾಮಾಣಿಕ, ನೇರ ನಡೆ ನುಡಿಯ ಮಹಿಳಾ ಅಧಿಕಾರಿಯ ಪ್ರಾಮಾಣಿಕತೆಗೆ ದೊರಕಿದ ಕಹಿ ಉಡುಗೊರೆ ಇದು. ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿದ್ದ ಸಾಕಷ್ಟು ಲೋಪದೋಷಗಳನ್ನು ಸರಿಪಡಿಸಿ, ಸ್ವಚ್ಛ ಸುಂದರ ಹಾಗೂ ಶೀಘ್ರ ಕೆಲಸಗಳು ನಡೆಯುವ ಸರಕಾರಿ ಕಚೇರಿಯಾಗಿ ಪರಿವರ್ತಿಸಿದ ನಿಮ್ಮ ಕಾರ್ಯಕ್ಕೆ ಸಂದ ಕೆಟ್ಟ ಸನ್ಮಾನ, ಆದರೆ ಇಲ್ಲಿ ಇನ್ನೂ ಸತ್ಯ, ನ್ಯಾಯ ಪ್ರಾಮಾಣಿಕತೆಗೆ ಮನ್ನಣೆ ಹಾಗೂ ಬೆಲೆ ಇದೆ, ಮಂಜುಳಾ ಮೇಡಂ ಅವರ ಅಮಾನತ್ತಿನಿಂದ ನಷ್ಟವಾಗಿರೋದು ಶಿಕ್ಷಣ ಇಲಾಖೆ ಹಾಗೂ ಅಲ್ಲಿನ ಪ್ರಾಮಾಣಿಕ ಶಿಕ್ಷಕರಿಗೇ ಹೊರತು, ಮೇಡಂಗಲ್ಲ, ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ, ಸತ್ಯಕ್ಕೇ ಯಾವತ್ತೂ ಜಯ

  22. We will really miss you ma’am. Your honesty, dedication towards job was really great. you are the role model for us. You were responding immediately when ever there was a need. You have given us all the support and guidance. It was a shocking news for us. But truth wins always. I totally disagree with the guilty.We are with you ma’am.

  23. Manjula madam words are true and office staff were ignoring orders of her many a times. As per my observations not belonging to education department, she is a prompt worker. Case is preplanned it seems.

  24. ತುಂಬಿದ ಕೊಡ ತುಳುಕುವುದಿಲ್ಲಎಂಬ ಮಾತಿನಂತೆ ಸರಳ, ನಿಷ್ಠಾವಂತ ಅಧಿಕಾರಿಯಾದ ಮಂಜುಳಾ ಮೇಡಂ ಅಮಾನತು ಪ್ರಾಮಾಣಿಕತೆಗೆ ಬೆಲೆ ಇಲ್ಲ ಅನ್ನುವುದನ್ನು ಎತ್ತಿ ತೋರಿಸುತ್ತದೆ..Wish let the honesty win..

  25. ನಾನು ಕಂಡ ಅತ್ಯಂತ ದಕ್ಷ ಅಧಿಕಾರಿ ಮಂಜುಳಾ ಮೇಡಂ.. ನೇರ ನಡೆ, ನುಡಿಯವರಿಗೆ ಕಾಲವಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ…. ಉಡುಪಿ ವಲಯಕ್ಕೆ ಅವರಂತಹ ಅಧಿಕಾರಿಯೇ ಬೇಕು.. We desperately need her back..

  26. Manjula mam is very sincere honest and obedient officer, she did her work very faithfully when she was in shimoga District. We support her a lot.

  27. ಭ್ರಷ್ಟಾಚಾರ ಮುಕ್ತ ಕಛೇರಿಯನ್ನಾಗಿ ಮಾಡ ಹೊರಟ ನಿಮ್ಮ ಪ್ರಯತ್ನಕ್ಕೆ ಸಂದ ಫಲ ಅಮಾನತು ಆದರೂ ಮುಂಬರಲಿರುವ ದಿನಗಳಲ್ಲಿ ಜಯ ನಿಮ್ಮದೇ ಮೇಡಂ. ನಿಮ್ಮ ನೇರ ದಿಟ್ಟತನ, ಪ್ರಾಮಾಣಿಕತೆಯನ್ನು ಹೀಗೆ ಮುಂದುವರಿಸಿ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತೆ. Our prayers and wishes are with you madam.

  28. ಮಂಜುಳಾ ಮೇಡಂ ನಮ್ಮ ಕಚೇರಿಯಲ್ಲಿ ಭ್ರಷ್ಟಾಚಾರವನ್ನು ತಡೆಯಲು ಹೋಗಿ ಯಾವುದೇ ತಪ್ಪು ಮಾಡದ ಅವರು ಅಮಾನತು ಆಗುವಂತಾಯಿತು. ದಯವಿಟ್ಟು ನಿಮ್ಮ ಪತ್ರಿಕೆಯ ಮೂಲಕ ಮಂಜುಳಾ ಮೇಡಂ ಗೆ ನ್ಯಾಯ ಸಿಗುವಂತಾಗಲಿ.

  29. ಮಾನ್ಯ ಬಿಇಓ ಮೆಡಂ ರವರ ಬಗ್ಗೆ 29 ಶಿಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುವಾಗ ಜಿಲ್ಲೆಯ ನೌಕರರ ಕ್ಷೇಮಾಭಿವೃದ್ಧಿ ನೋಡಿಕೊಳ್ಳಬೇಕಾದ ಸರ್ಕಾರಿ ನೌಕರರ ಸಂಘ ಮೆಡಂರವರಿಗೆ ಆದ ಅನ್ಯಾಯ ದ ವಿರುದ್ಧ ಹೊರಾಡಲು ಬೆಂಬಲ ಸೂಚಿಸಬೇಕು.

  30. ಇದು ‘ಕಲಿಯುಗ’ ಎನ್ನುವುದಕ್ಕೆ ನಮ್ಮ ಶಿಕ್ಷಣ ಅಧಿಕಾರಿಯಾಗಿರುವ ಮಂಜುಳಾ ಮೇಡಂ ರವರು ಅಮಾನತು ಗೊಂಡಿರುವುದು ಒಂದು ಜೀವಂತ ಸಾಕ್ಷಿಯಾಗಿದೆ .ಅದಲ್ಲವಾದರೆ ಓರ್ವ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗೆ ಈ ರೀತಿಯ ಅನ್ಯಾಯ ಆಗಲು ಸಾಧ್ಯವೇ? ಇವರು ಶಿಕ್ಷಣಾಧಿಕಾರಿಯಾದಾಗ ಅಂದುಕೊಂಡೆ, ಇಂತಹ ದಕ್ಷ ಅಧಿಕಾರಿಯ ಪ್ರಾಮಾಣಿಕತೆಗೆ ಆಡಳಿತಕ್ಕೆ ಹೆಚ್ಚು ಕಾಲ ಉಳಿಗಾಲವಿಲ್ಲಾ ಎಂದು. ನನ್ನ ಊಹೆ ಹುಸಿಯಾಗಲಿಲ್ಲ. ಅನ್ಯಾಯವನ್ನು ಎತ್ತಿಹಿಡಿದು ಉತ್ತಮ ವ್ಯವಸ್ಥೆ ಬದಲಾವಣೆಗೆ ಚಿಂತನೆ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ. ಈ ಬಗ್ಗೆ ಅವರಿಗೆ ನ್ಯಾಯ ಸಿಗಲೇಬೇಕು. ಆಗಲೇ ನೊಂದ ಎಲ್ಲಾ ಇವರ ಹಿತೈಷಿ ವರ್ಗಕ್ಕೆ ನ್ಯಾಯ ದೊರೆತಂತೆ. ಆದರೆ ವೃತ್ತಿಜೀವನದ ಈ ಕಹಿ ಘಟನೆ ಮೇಡಂ ರವರ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿ ಧೃಡ ಗೊಳಿಸಿದೆ.

  31. I know Manjula ma’am…I can proudly say that, she is one of the bestest BOE for our district. Don’t worry ma’am..we are with you…
    She is the one leader, who is sincerely tried to take our district to higher level in Education hubs..

  32. ಒಳ್ಳೆಯ ಕೆಲಸ ಮಾಡುವವರಿಗೆ ಇದು ಕಾಲವಲ್ಲ ಆದರೂ ಒಂದಲ್ಲ ಒಂದು ದಿನಾ ಸತ್ಯ ಗೊತ್ತಾಗಲಿ

  33. ನಾನು ಮಂಜುಳಾ ಮೇಡಂನ ಒಬ್ಬ ನೇರ ಮತ್ತು ದಿಟ್ಟ ನಡೆ ನುಡಿಗಳಿಂದ ಪ್ರಭಾವಿತನಾದವರಲ್ಲಿ ಒಬ್ಬ ಅವರ ವಿದ್ಯಾರ್ಥಿ.ಅವರ‌ ಈ ಹೋರಾಟದಲ್ಲಿ ಎಂದಿಗೂ ಅವರ ಪರವಾಗಿ ನಾವಿರುತ್ತೇವೆ.ಭ್ರಷ್ಟಾಚಾರ ಮುಕ್ತ ಹೋರಾಟಕ್ಕೆ ನಮ್ಮ‌ ಬೆಂಬಲವಿದೆ ಈ ರಾಜಕೀಯ ದವರ ಕಚಡ ರಾಜಕೀಯಕ್ಕೆ ಬಲಿಪಶು ಮಾಡಲು ಹೊರಟಿದ್ದಾರೆ ಆದರೆ ಸತ್ಯಕ್ಕೆ ಎಂದಿಗೂ ಜಯ.

  34. ಇದು ತುಂಬಾ ಅನ್ಯಾಯ ಆಗಿದೆ. ಒಳ್ಳೆಯದು ಮಾಡಲು ಹೋದಾಗ ಹೀಗಾಗುತ್ತದೆ. Dhairyaavaagiri ಮೇಡಂ god is great. God bless you. ನಾವು andukondida ಹಾಗೆ South canra ತುಂಬಾ valledu ಅಂತ. ಇಲಾಖೆಯಲ್ಲಿ ಕೆಲಸ ಮಾಡುವವರು ಇಲಾಖೆಯ ಪರ ಕೆಲಸ ಮಾಡಬೇಕು.madam ನಿಮಗೆ ನ್ಯಾಯ sikke ಸಿಗುತ್ತದೆ. ನೀವು ಎದುರಿಸಿ. Nimmantha ಧೈರ್ಯ shaali ಹೆಣ್ಣುಮಕ್ಕಳು ನಮ್ಮ ಇಲಾಖೆಗೆ, ಸಮಾಜಕ್ಕೆ ಬೇಕು.

  35. ಒಳ‍್ಲಯ ಕೆಲಸ ಮಾಡುವವರಿಗೆ ಇದು ಕಾಲವಲ್ಲ ಗುರು ಆದರೆ ಸತ್ಯಕ್ಕೆ ಜಯ ಸಿಗುವ ನಂಬಿಕೆ ಇದೆ

  36. I am proud to say that Manjula madam is very supportive sincere and honest in her work. She was the best BEO of our district She must get justice…

  37. I am proud to say that Manjula madam is very supportive sincere and honest in her work. She was the best BEO of our district…

  38. Every time this happened to every prompt person be strong ma’am,what to say?? Just fight hard,God bless you best of luck

  39. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮೂಲಕ ಉತ್ತಮ ಸೇವೆಯನ್ನು ಮಾಡಲು ಹೊರಟಿರುವ ನಿಮಗೆ ಅ ದೇವರ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತೇನೆ

  40. ಎಜುಕೇಡಿಡ್ ನಾಡಿಲೆ ಎಂದಾಣ ಇದು ಅನ್ ಎಜುಕೇಟಿಡ್ ಪೋಳಿಟಿಕ್ಸಾ? ಐ ನೋ ಹರ್ ವೆಲ್ ಅಸ್ ಅ ಸ್ಟ್ರಿಕ್ಟ್ ಅಂಡ್ ಡಿಸಿಪ್ಲೆನ್ಡ್ ಓಫಿಸರ್ ಕಮಿಟೆಡ್ ಫಾರ್ ಎಡುಕೇಷನ್.

  41. ನಮ್ಮ ಮೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮೇಡಮ್ಗೆ ಆದ ಅಹಿತಕರ ಘಟನೆಗಳು ಎಲ್ಲಾ ದಕ್ಷ ಅಧಿಕಾರಿಗಳನ್ನು ಒಮ್ಮೆ ಯೋಚಿಸಿ; ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಹಿಂಬಾಲಿಸಲು ಹಿಂಜರಿಕೆ ಉಂಟಾಗುವಂತೆ ಮಾಡಿದೆ, ನಿಷ್ಟಾವಂತ ದಕ್ಷ ಸರಳ ಸಜ್ಜನಿಕೆಯ ಈ ಅಧಿಕಾರಿಗೆ ನ್ಯಾಯ ಒದಗಿಸುವ ಮೂಲಕ ಜಿಲ್ಲೆಗೆ ಕೀರ್ತಿ ಬರಲಿ.

  42. ಹೇಳಿದಕ್ಕೆಲ್ಲಾ ತಲೆ ಅಲ್ಲಾಡಿಸುವವರು, ರಾಜಕೀಯ ಅಧಿಕಾರ ಇರುವವರಿಗೆ ಬಕೀಟ್ ಹಿಡಿಯುವರು ಇದ್ದರೆ ಮಾತ್ರ ರಾಜಕಾರಣಿಗಳಿಗೆ ಒಳ್ಳೆ ಅಧಿಕಾರಿ.. ಈಗ ಇರುವ ರಾಜ್ಯದ ಎಲ್ಲ ಸಿಇಓ, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕೇಸ್ ವರ್ಕರ್ ಗಳಂತೆ ಕಾಣ್ತಾ ಇದ್ದಾರೆ ಎಲ್ಲರೂ ಕೋಲೆ ಬಸವನಂತೆ ತಲೆ ಅಲ್ಲಾಡಿಸುವವರೇ

  43. ಶ್ರೀಮತಿ ಮಂಜುಳ ಇವರು ಇತ್ತೀಚಿಗಷ್ಟೆ ಗ್ರೂಪ್ ಎ ಕಿರಿಯ ವೃಂದದ ಹುದ್ದೆಗೆ ಪದೋನ್ನತಿ ಹೊಂದಿ ಮೊದಲು ಡಯಟ್ ಉಡುಪಿ ಇಲ್ಲಿ ಹಿರಿಯ ಉಪನ್ಯಾಸಕಿಯಾಗಿ ಅಲ್ಲಿಂದ ವರ್ಗಾವಣೆಗೊಂಡು ಪ್ರಥಮ ಬಾರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಉಡುಪಿ ವಲಯದಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರಕಿದಾಗ ಒಪ್ಪಿಕೊಂಡು; ಶಿಕ್ಷಕರಿಗೆ ಉತ್ತಮ ಸೇವೆ ಮತ್ತು ತನ್ನ ಕಛೇರಿಯನ್ನು ಶಿಕ್ಷಕರ ಸ್ನೇಹಿ ಕಛೇರಿಯನ್ನಾಗಿ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬಂದ ಅವರಿಗೆ ಮೊದಲಿಂದಲೂ ಅಡೆತಡೆಗಳು ಬಂದಿದ್ದವು. ಕಛೇರಿಯಲ್ಲಿ ಸೇವಾ ಅನುಭವ ಇಲ್ಲದ ಸಿಬ್ಬಂದಿಗಳು ಮತ್ತು ಅಸಹಕಾರ ಧೋರಣೆ ಇವರನ್ನು ಕಂಗಾಲಾಗಿ ಮಾಡಿತ್ತು. ಆದರೂ ಧೃತಿಗೆಡದೆ ಹಂತಹಂತವಾಗಿ ಎಲ್ಲವನ್ನೂ ಸರಿದಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಇವರು ಹೆಚ್.ಆರ್.ಎಂ.ಎಸ್. ವೇತನ ತಂತ್ರಾಂಶದಲ್ಲಿ ಮಾಸ್ಟರ್ ರಿಸೋರ್ಸ್ ವ್ಯಕ್ತಿಯಾಗಿದ್ದರಿಂದ ವೇತನ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಇವರೇ ಖುದ್ದು ಬಗೆಹರಿಸುತ್ತಿದ್ದರು. ಖಾಸಗಿ ಶಾಲೆಗಳ ವೇತನ ಬಿಲ್ಲನ್ನು ಕಛೇರಿಯಲ್ಲಿಯೇ ಸಿದ್ದಪಡಿಸಿ ಅಲ್ಲಿಯ ಶಿಕ್ಷಕರಿಗೆ ಆರ್ಥಿಕ ಅನೂಕೂಲ ಮಾಡಿಕೊಟ್ಟಿದ್ದರು. ನಿರಂತರ ಶಾಲೆಗಳಿಗೆ ಭೇಟಿ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂಪರ್ಕವಿರಿಸಿಕೊಂಡ ಇವರು ಎಲ್ಲಾ ಸಮಸ್ಯೆಗಳನ್ನು ಅನಾವಶ್ಯಕ ಮೇಲಾಧಿಕಾರಿಗಳಿಗೆ ವರ್ಗಾಯಿಸದೇ ತಕ್ಷಣ ಸ್ಪಂದನೆ ನೀಡುತ್ತಿದ್ದರು. ಯಾರೇ ಆಗಲಿ ಯಾವುದೇ ತಪ್ಪುಗಳನ್ನು ಮಾಡಿದಾಗ ನೇರವಾಗಿ ಅವರಿಗೆ ಇದ್ದು ತಪ್ಪು ಎಂದು ತಿಳಿಸಲು ಆತ್ಮವಿಶ್ವಾಸ ಇರುವ ಅಪರೂಪದ ವ್ಯಕ್ತಿತ್ವ ಇವರದ್ದಾಗಿದೆ.
    ಇವರ ಅಮಾನತ್ತಿನ ಆದೇಶದಲ್ಲಿನ ಆರೋಪಗಳನ್ನು ನೋಡಿದಾಗ ಮೇಲ್ನೋಟಕ್ಕೆ ಇವರು ನಿಯಮ ಬಾಹಿರವಾಗಿ ಕೆಲಸ ನಿರ್ವಹಿಸಿದ್ದಾರೆಂದು ವರ್ಣಿಸಲಾಗಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಸೂಕ್ಷವಾಗಿ ಗಮನಿಸಿದಾಗ ಇವರು ಶೈಕ್ಷಣಿಕ ಮತ್ತು ಆಡಳಿತ ಹಿತದೃಷ್ಠಿಯಿಂದ ತೆಗೆದುಕೊಂಡಿರುವುದೇ ಆಗಿದೆ. ಕೆಲವೊಂದು ಗಂಭೀರ ಸಮಸ್ಯೆಗಳಿಗೆ ಮೇಲಾಧಿಕಾರಿಯವರ ಆದೇಶವಿಲ್ಲದೆ ನಿರ್ಣಯಗಳನ್ನು ತಕ್ಷಣ ತೆಗೆದುಕೊಂಡು ಅಲ್ಲಿ ಆಗುವ ಹೆಚ್ಚಿನ ಅನಾಹುತಗಳನ್ನು ತಡೆದಿರುವುದೇ ಇವರ ಅಮಾನತ್ತಿಗೆ ಮೂಲ ಕಾರಣವಾಗಿದೆ. ಹಾಗಾದರೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಯು ಶಾಲೆಯ/ಶಿಕ್ಷಕರ/ ವಿದ್ಯಾರ್ಥಿಗಳ ಸಮಸ್ಯೆಗೆ ತಕ್ಷಣ ಪರಿಹಾರ ಕೊಡದೆ ಅದನ್ನು ಮೇಲಾಧಿಕಾರಿಗೆ ವರದಿ ಮಾಡಿ ಅಲ್ಲಿಂದ ಆದೇಶ ಬರುವ ತನಕ ಕಾಯಬೇಕೇ? ಅಥವಾ ಆ ಸಮಸ್ಯೆಯನ್ನು ಇನ್ನೂ ಗಂಭೀರ ಸ್ಥಿತಿಗೆ ಕೊಂಡೊಯ್ಯಬೇಕೇ?………….ಇವರು ಆದೇಶವಿಲ್ಲದೆ ಮಾಡಿದ್ದಾರೆ ಎಂದಲ್ಲ… ಆದೇಶಗಳು ದೂರವಾಣಿ ಮೂಲಕ ನೀಡುತ್ತಾರೆ… ಸಮಸ್ಯೆ ಬಂದಾಗ ಮಾತ್ರ ಮೇಲಾಧಿಕಾರಿಗಳು ನುಣುಚಿಕೊಳ್ಳುತ್ತಾರೆ…ಇದು ಪ್ರಸಕ್ತ ಆಡಳಿತ ಶಾಹಿಯಲ್ಲಿನ ಕಾರ್ಯವೈಖರಿ.
    ಆಡಳಿತದಲ್ಲಿ ಸುವ್ಯವಸ್ಥೆ, ಭ್ರಷ್ಟಾಷಾರ ನಿಗ್ರಹ ಹಾಗೆ.. ಹೀಗೆ.. ಎಂದು ಬೊಬ್ಬಿರಿಯುವ ಮಾಧ್ಯಮಗಳು, ಸಂಘ ಸಂಸ್ಥೆಗಳು, ಉನ್ನತ ಅಧಿಕಾರಿಗಳು ಒಬ್ಬ ನಿಷ್ಠಾವಂತ ಅಧಿಕಾರಿಯನ್ನು ಅಮಾನತು ಮಾಡಿದಾಗ ಒಂದೇ ಒಂದು ಅವರ ಪರವಾಗಿ ಹೇಳಿಕೆ ನೀಡದಿರುವುದು ನಿಜಕ್ಕೂ ನಂಬಲಾಗುತ್ತಿಲ್ಲ….. ಹಾಗಿದ್ದಲ್ಲಿ ಇವರು ಪರೋಕ್ಷವಾಗಿ ಭ್ರಷ್ಟರೊಂದಿಗಿರುವುದು ಒಪ್ಪಿಕೊಂಡಂತೆ.

  44. ಇಷ್ಟು ಕಾಮೆಂಟ್ ಗಳು ಮೇಡಂ ಬಗ್ಗೆ ಹೇಳುವುದು ನೋಡುವಾಗ ಅವರೆಷ್ಟು ಪ್ರಾಮಾಣಿಕರು ಎಂದು ಗೊತ್ತಾಗುತ್ತದೆ ಒಂದೇ ಒಂದು ಅವರನ್ನು ವಿರೋದಿಸುವ ಕಾಮೆಂಟ್ ಗಳಿಲ್ಲ ಇಲ್ಲಿ ಹ್ಯಾಟ್ಸಪ್ ಟು ಯು ಮಾಂ …ಈ ಅಸಹ್ಯ rajkeeyakke ನ್ಯೂಸ್ನ್ನದೊಂದು ದಿಕ್ಕಾರ …
    ಡಾ.ಶಶಿಕಿರಣ್ ಶೆಟ್ಟಿ ,ಉಡುಪಿ

  45. ಉಡುಪಿ ವಲಯದಲ್ಲಿ ಪ್ರಥಮ ಬಾರಿಗೆ ನಾನು ಕಂಡ ದಕ್ಷ ನೇರ ನುಡಿಯ ಪ್ರಾಮಾಣಿಕ ಮಹಿಳಾ ಅಧಿಕಾರಿ ನಮ್ಮ ಮಂಜುಳಾ ಮೇಡಂ… ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಅವರಿಗೆ ನ್ಯಾಯ ಸಿಗಲಿ..ಅವರ ಅಮಾನತು ರದ್ದಾಗಲಿ ಎಂದು ಆಶಿಸೋಣ..

  46. ಮೇಡಮ್ ನಿಮ್ಮಂತ ನಿಷ್ಠಾವಂತ ಅಧಿಕಾರಿಗಳಿಗೆ ಅಮಾನತು ಮಾಡಿರುವದು
    ಕಂಡನೀಯ ಪೋರ್ಜರಿ ಸಹಿ ಮಾಡಿ ಹಣ ದುರ್ಬಬಳಿಕೆ ಮಾಡಿ ದಂತಹ,ಶಿಕ್ಷರನ್ನು ಸಾಕ್ಷಿ ಸಮೇತ
    ಹಿಡಿದು ನ್ಯಾಯಾಲಕ್ಕೆ ಹಾಜರುಪಡಿಸಿ,ಶಿಕ್ಷೆ ಕೊಡಿಸಿ ಪಾಠ ಹೇಳಿಕೊಡುವ ಶಿಕ್ಷಕರೆ ಈರೀತಿ
    ಮಾಡಿದರೆ ,ಯಾವ ಸೀಮೆ ಉಪಾಧ್ಯಯರು ನಾಚಿಕೆ ಆಗಬೇಕು

  47. ಮಂಜುಳಾ ಮೇಡಂ ನಂತಹ ನಿಷ್ಠಾವಂತ ಅಧಿಕಾರಿಗಳಿಗೆ ಹೇಗೆ ಆದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ನೀನು ಹಾಗಾಗಿ ಯಾರೇ ಆಗಲಿ ತಪ್ಪು ಮಾಡಿದವರಿಗೆ ಕಠಿಣವಾದ ಶಿಕ್ಷೆ ಆಗಲೇಬೇಕು ಇಂತಹ ಜನರನ್ನು ಬಿಟ್ಟರೆ ಮುಂದೆ ಇಲಾಖೆಗೆ ಬಹುದೊಡ್ಡ ಆಪತ್ತು ಕಟ್ಟಿಟ್ಟ ಬುತ್ತಿ ಶಿಕ್ಷಕರ ಈ ರೀತಿ ಮಾಡಿದರೆ ಅವರು ಕಲಿಸಿದ ಮಕ್ಕಳು ಹೇಗೆ ನಿಷ್ಠಾವಂತ ಪ್ರಜೆಗಳಾಗಲು ಸಾಧ್ಯ ಹಾಗಾಗಿ ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಹಾಗೆಯೇ ನಮ್ಮ ಮಂಜುಳ ಮೇಡಂ ನ ಅಮಾನತನ್ನು ರದ್ದುಗೊಳಿಸ ಬೇಕಾಗಿ ಕೇಳಿಕೊಳ್ಳುತ್ತೇನೆ

  48. She was the first b.e.o to whom i could speak freely.She was down to earth,very simple,kind hearted but strict in work.We miss you mam…

  49. She was the first b.e.o to whom i could speak freely.She was down to earth,very simple,kind hearted but strict in work.We miss you mam…

  50. She was the first b.e.o to whom i could speak freely.She was very simple,down to earth,kind hearted but strict in work.We miss her

  51. ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು ಕರ್ತವ್ಯ ವನ್ನೇ ಉಸಿರಾಗಿ ಅವಿರತವಾಗಿ ದುಡಿದ ಕ್ರಿಯಾಶೀಲ ವ್ಯಕ್ತಿತ್ವ ದ ಮಂಜುಳಾ ಮೇಡಂರವರಿಗೆ ಆದ ಶಿಕ್ಷೆ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ. ನಮ್ಮ ವರ್ತಮಾನದ ಆಡಳಿತ ಯಂತ್ರದ ಬಗ್ಗೆ ಬೇಸರವಿದೆ.

  52. I proudly say that,she is one of the best BOE for our district..we desperately need her back..we are with you….

  53. ದಕ್ಷ ನಿಷ್ಠಾವಂತ ಅಧಿಕಾರಿಯಾಗಿದ್ದವರು ಮಂಜುಳಾ ಮೇಡಂ ರವರುಶಿಕ್ಷಕರ ಮತ್ತು ಅಧಿಕಾರಗಳ ಮಧ್ಯದಲ್ಲಿರುವ ಒಂದು ತಾರತಮ್ಯವನ್ನು ತೆಗೆದು ಹಾಕಿದವರು ನಮ್ಮ ಮಂಜುಳಾ ಮೇಡಂ ರವರು.. ಅಧಿಕಾರಿಗಳು ಮತ್ತು ಶಿಕ್ಷಕರ ಮಧ್ಯೆ ಇರುವ ತಡೆಗೋಡೆಯನ್ನು ತೆಗೆದುಹಾಕಿ ಶಿಕ್ಷಕ ಸ್ನೇಹಿತ ಮಂಜುಳಾ ಮೇಡಂ ರವರು…. ಯಾರೋ ಮಾಡಿದ ತಪ್ಪಿಗೆ ಅವರ ತಪ್ಪುಗಳನ್ನು
    .. ಮಂಜುಳಾ ಮೇಡಂ ರವರನ್ನು ಬಲಿಪಶು ಮಾಡಿರುತ್ತಾರೆ……

  54. ನಾನು ಇವರನ್ನು ನೋಡಿಲ್ಲ ಆದರೆ ದಕ್ಷ ಪ್ರಾಮಾಣಿಕ ವ್ಯಕ್ತಿ ಎಂಬುದನ್ನು ಹಲವರ ಬಾಯಿಂದ ಕೇಳಿದ್ದೇನೆ.ಇವರ ಅಮಾನತು ಮಾಡಿರುವುದು ಪ್ರಾಮಾಣಿಕ ಅಧಿಕಾರಕ್ಕೆ ಮಾಡಿರುವ ಅನ್ಯಾಯ ವಾಗಿದೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ

  55. ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜಾತಿ ರಾಜಕಾರಣ ಮಾಡಲಿಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾರೆ…. ಅವರು ದೇಶಸೇವೆಗೆ ಜನರ ಸೇವೆಗೆ ಬಂದವರಲ್ಲ ಎಂಬುದು ಈ ಮೂಲಕ ಸ್ವಷ್ಟವಾಗಿದೆ….ಸಾಧ್ಯವಾದರೆ ಚಂದ್ರನಾಯಕ್ ಮತ್ತು ಸುಂದರ ನನ್ನ ಕಾನೂನುಪ್ರಕಾರ ಮುಂದೆ ಕರೆದುಕೊಂಡು ಬರಬೇಕು… ಸುಂದರನ ಬಗ್ಗೆ ಹೇಳಲು ಒಂದೆರಡು ಇಲ್ಲ…. ದಕ್ಷ ಅಧಿಕಾರಿಗೆ ನ್ಯಾಯ ಸಿಗಲೇಬೇಕು….

  56. ಮಂಜುಳಾ ಮೇಡಂ ಅವರ ಸಿದ್ಧಾಂತಗಳು ಏನೇ ಇರಲಿ ಆದರೆ ಒಬ್ಬ ಶಿಕ್ಷಣಾಧಿಕಾರಿ ಗಳಾಗಿ ಅವರ ದಕ್ಷತೆ ಪ್ರಾಮಾಣಿಕತೆ ಬಗ್ಗೆ ಎರಡು ಮಾತಿಲ್ಲ.. ತಪ್ಪುಗಳು ಕಂಡು ಬಂದಲ್ಲಿ ಕಡ್ಡಿ ತುಂಡು ಮಾಡಿದಂತೆ ತಕ್ಷಣ ವೇ ಪ್ರತಿಕ್ರಿಯಿಸುವ ಅವರು, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಮುಂದಡಿ ಇಟ್ಟದ್ದೇ ಮುಳುವಾಗಿದೆ.. ಆದರೆ ಮೇಡಂ ನಿಮ್ಮೊಂದಿಗೆ ನಾವಿದ್ದೇವೆ.. ತಕ್ಷಣ ಇವರ ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸುತ್ತೇವೆ. ಹಾಗೂ ಪುನಃ ಅವರು ಉಡುಪಿ ಬಿಇಓ ಆಗಿ ಕರ್ತವ್ಯ ಮುಂದುವರೆಸಲು ಅವಕಾಶ ನೀಡಬೇಕು.

  57. ದಯವಿಟ್ಟು ನಮ್ಮ ಸಂಘದ ಪದಾಧಿಕಾರಿಗಳು ಎಚ್ಚೆತ್ತು ಪ್ರಾಮಾಣಿಕ ಅಧಿಕಾರಿ ಕೆ.ಮಂಜುಳಾ ಮೇಡಂ ರವರನ್ನು ಸಪೋರ್ಟ ಮಾಡಿ ಪ್ರಾಮಾಣಿಕ ಕೆಲಸ ಮಾಡುವವರನ್ನು ರಕ್ಷಣೆ ಮಾಡಿ ಸರ್. ನಮ್ಮ ಸಂಘಕ್ಕೆ ಒಳ್ಳೆಯದಾಗುತ್ತೆ ಸರ್

  58. Shishakara samasegallige begane sapandisi parihara odagisi koduthidaru erithi aroopa madiruvavarige thakka shikshe agabekku

  59. ಉಡುಪಿ ಜಿಲ್ಲಾ ಮತ್ತು ತಾಲೂಕು ಶಿಕ್ಷಕರ ಸಂಘದ ಪ್ರತಿನಿಧಿಗಳು ಮೇಡಂ ರವರ ರಕ್ಷಣೆಗೆ ನಿಲ್ಲಬೇಕು.ಯಾರೊಬ್ಬರೂ ಮೇಡಂ ರವರ ವಿರುದ್ಧವಾಗಿ ಮಾತನಾಡಿಲ್ಲದ್ದನ್ನು ನೋಡಿದರೆ ಅವರೆಸ್ಟು ಪ್ರಾಮಾಣಿಕರು ಎಂಬುದು ತಿಳಿಯುತ್ತದೆ. ಮೇಡಂ ರವರ ಅಮಾನತು ಇಲಾಖೆಗೆ ದೊಡ್ಡ ನಷ್ಟ , ನಿಮ್ಮಂತ ಕಳಕಳಿಯ ಅಧಿಕಾರಿಗಳು ಶಿಕ್ಷಣದ ,ಶಾಲೆಗಳ ಆಸ್ತಿ. ಒಳ್ಳೆಯದಾಗಲಿ.

  60. I heard Beo Manjula medam is able ,honest and prompt officer in udupi tq. But she was Suspended based on unknow person’s complaint letter. Behind that letter other person might be there it seems.she will definately get right justice.
    ,

  61. Shishakara samasegallige begane sapandisi parihara odagisi koduthidaru erithi aroopa madiruvavarige thakka shikshe agabekku

  62. Manjula madam was very honest, sincere and straight forward B.E.O. She struggled very hard to uplift the education standard in Udupi. She encouraged all teachers and students. This shouldn’t happened with her. We pray that you come back to your position with dignity.

  63. ಇಂತಹ ಅವಾಂತರಗಳಿಗೆ ಕಾರಣರಾಗುವ ರಾಜಕಾರಣಿಗಳನ್ನು ಮುಂದೆ ಚುನಾವಣೆಯಾಗುವಾಗ ಸೀದಾ ತಿರಸ್ಕರಿಸಬೇಕು. ಅವರನ್ನು ಬೆಂಬಲಿಸುವ ಪಕ್ಷಗಳಿಗೂ ಸ್ಪಷ್ಟವಾಗಿ ಸಂದೇಶ ರವಾನಿಸಬೇಕು

  64. Manjula is a straight forward officer. She was doing good work. It’s very unfortunate that the officers who are bold and do their work honestly are punished.

  65. ಮೇಡಂ
    ನನ್ನ ಹೆಂಡತಿ ಕೂಡ ಶಿಕ್ಷಕಿ ಆಗಿದ್ದ ರು.ಆ ಕಾಲದಲ್ಲಿ ನಾನು ಕಂಡ ಭ್ರಷ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕತೆ ಬಹಳ ದೊಡ್ಡದಿದೆ.
    ಪ್ರಾಮಾಣಿಕತೆ ಯಾರಿಗೂ ಬೇಡ ಅನಿಸಿದೆ.ನಿಮ್ಮಂತಹ ರು ತೀರಾ ಅಪರೂಪ.

    ನನ್ನ ಗೆಳೆಯ ಇದಕ್ಕೆ ಒಂದು.ಉಪಾಯ ಹೀಗೆ ಹೇಳ್ತಾನೆ

    ” ಬೆಟ್ಟದ ಕೆಳಗೆ ಬಟ್ಟ ಸಿಕ್ಕರ ಬಟ್ಟ ತಕ್ಕೊ ,ಆದರ ಬೆಟ್ಟ ಸರಸಲಿಕ್ಕೆ.ಹೋಗ ಬ್ಯಾಡಾ

    ಎಂತಹ ಭಯಾನಕ ನಿರ್ಣಯ ಇದು ?

  66. ನಿಷ್ಠಾವಂತ ದಕ್ಷ ಅಧಿಕಾರಿ ನಮ್ಮ b.e.o. ಮೇಡಂ ಸತ್ಯಕ್ಕೆ ಜಯ ಇದೆ ನಿಮ್ಮೊಂದಿಗೆ ನಾವೆಲ್ಲರೂ ಇದ್ದೇ ವೆ

  67. ಈ ಲಜ್ಜೆಗೆಟ್ಟ ದುರಹಂಕಾರಿ ರಾಜಕಾರಣಿಗಳು ಮತ್ತು ಅವರ ಕುಂಡೆ ನೆಕ್ಕುವ ಒಂದಷ್ಟು ಅಪ್ಪನಿಗೆ ಹುಟ್ಟದ ಭ್ರಷ್ಟ ಅಧಿಕಾರಿಗಳಿಂದ ಇವತ್ತು ನಮ್ಮ ಶಿಕ್ಷಣ ಇಲಾಖೆ ಕೊಳೆತು ನಾರುತ್ತಿದೆ.. ಅಸಹ್ಯ.. ಅಭಿಯಾನ ಶುರು ಮಾಡಿ ಉಡುಪಿ ಜಿಲ್ಲೆಯಿಂದ ನಾವೆಲ್ಲಾ ನಿಮಗೆ ಬೆಂಬಲಿಸಿ ಬರುತ್ತೇವೆ

  68. ಶಬ್ಬಾಸ್ ಮಾತಾಜಿ ಶಬ್ಬಾಸ್. ನಿಮ್ಮ ಜೊತೆ ನೈತಿಕವಾಗಿ ನಾವಿದ್ದೇವೆ. ತಾವು ಮಾಡುವ ಕೆಲಸಕ್ಕೆ ಧನ್ಯವಾದಗಳು.

  69. I’m one of your student mam. You are really a role model to others and inspiration to all madam. How friendly you treated all the students we miss you mam.

  70. ಮಂಜುಳಾ ಮೇಡಂ ಅಂತವರು ಇಲಾಖೆಯಲ್ಲಿ ಉಳಿದರೆ ಮಾತ್ರ ಇಲಾಖೆ ಉದ್ಧಾರವಾಗುತ್ತದೆ. ಸರ್ಕಾರ ಮಧ್ಯ ಪ್ರವೇಶಿಸಿ ಅವರಿಗೆ ನ್ಯಾಯ ಕೊಡಿಸಬೇಕು. ಸುಮ್ಮ ಸುಮ್ಮನೆ ಅವರಿಗೆ ತೊಂದರೆ ಕೊಡುವವರನ್ನು ಒದ್ದು ದೂರು ದಾಖಲಿಸಬೇಕು.

  71. ತನ್ನ ಕಾರ್ಯಕ್ಷೇತ್ರದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಮಂಜುಳಾ ಮೇಡಂಗೆ ಆದಷ್ಟು ಬೇಗ ನ್ಯಾಯ ಸಿಗಲಿ..

  72. Manjula k BEO medam is very very promt and clean officer .mem you don’t wory god with you. I pray for allaha .

  73. ದಯವಿಟ್ಟು ದಕ್ಷ ಪ್ರಾಮಾಣಿಕ ಶಿಕ್ಷಣ ಅಧಿಕಾರಿಯವರನ್ನು ಉಳಿಸಿ.ಒಳ್ಳೆಯ ಸೇವೆಗೆ ಅವಕಾಶ ನೀಡಿ. ಇಂತಹ ಅಧಿಕಾರಿಯನ್ನು ವರ್ಗಾವಣೆ ಗೊಳಿಸಲು ಕಾರಣಕರ್ತರಾದ ಭ್ರಷ್ಟ ಅಧಿಕಾರಿಗಳು ಕೆಟ್ಟ ರಾಜಕೀಯ ಪುಡಾರಿಗಳ ಹೆಸರನ್ನು ಅವರ ಭಾವಚಿತ್ರ ಮುದ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವಂತೆ ಮಾಡಿ.
    ಸರಕಾರವಂತೂ ನ್ಯಾಯ ಕೊಡಿಸುವ ಭರವಸೆ ಇಲ್ಲ.

  74. Iam a teacher from KALBURGI I didn’t know about MANJULA. madam but I read all comments with keen interest . The comments here reflects her personality .She is rarest in the rare and an inspiring person

  75. I support you mam.ನಿಮ್ಮ ಪ್ರಾಮಾಣಿಕ ಸೇವೆಗೆ ಜಯ ಸಿಗಲಿ.

  76. ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅಮಾನತು: ಉನ್ನತಮಟ್ಟದ ತನಿಖೆಗೆ ಆಗ್ರಹ
    April 9, 2021

    ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳಾ ಅವರ ಅಮಾನತು ವಿಚಾರ ಇದೀಗ ರಾಜ್ಯ ಮಟ್ಟದಲ್ಲಿ ಸುದ್ಧಿಯಾಗುತ್ತಿದೆ. ಇದೀಗ ಈ ಸುದ್ದಿ ರಾಜ್ಯ ಮಟ್ಟಕ್ಕೆ ಹೋಗಿದ್ದು ಚಿಕ್ಕಬಳ್ಳಾಪುರದ ಸಾಮಾಜಿಕ ಕಾರ್ಯಕರ್ತ ಜಿ ವಿ ಮಂಜುನಾಥ ಎನ್ನುವವರು ‘ಉಡುಪಿ ಟೈಮ್ಸ್’ನಲ್ಲಿ ಪ್ರಕಟವಾದ ಸುದ್ದಿಯನ್ನು ಲಗತ್ತಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

    ಇವರು ಸಲ್ಲಿಸಿದ ಮನವಿಯಲ್ಲಿ ಉಡುಪಿ ಕ್ಷೇತ್ರ ಶಿಕ್ಷಾಣಾಧಿಕಾರಿ ಕೆ.ಮಂಜುಳ ಭ್ರಷ್ಟಚಾರ ಮುಕ್ತ ಕಛೇರಿ ಮಾಡಲು ಹೊರಟ ಕಾರಣಕ್ಕಾಗಿ ಅಮಾನತ್ತಾಗಿರುವುದಾಗಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಇದು ನಿಜವೇ ಆಗಿದ್ದಲ್ಲಿ ದಕ್ಷ ಅಧಿಕಾರಿಗಳಲ್ಲಿ ಮನೋಸ್ಥೈರ್ಯ ಕುಗ್ಗಿಸುವ ಪ್ರಕರಣ ಇದಾಗಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಸತ್ಯಾಸತ್ಯತೆಯನ್ನು ಅರಿಯಲು ಉನ್ನತ ಮಟ್ಟದ ತನಿಖೆ ಆಗಬೇಕಿದೆ. ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

    ತಮ್ಮ ಅಮಾನತಿನ ವಿಚಾರವಾಗಿ ಮಂಜುಳ ಅವರು ‘ಉಡುಪಿ ಟೈಮ್ಸ್’ ಗೆ ನೀಡಿದ ಪ್ರತಿಕ್ರಿಯೆ ಪ್ರಕಟವಾಗುತ್ತಿದ್ದಂತೆ ಅಧಿಕಾರಿಯ ಅಮಾನತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಅಲ್ಲದೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರು ಮಂಜುಳ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಎಲ್ಲರೂ ಮಂಜುಳಾ ಓರ್ವ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯಾಗಿದ್ದು ಎಲ್ಲರಿಗೂ ಮಾದರಿಯಾಗಿದ್ದರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರ ಈ ಅಮಾನತು ನ್ಯಾಯವಾದದ್ದಲ್ಲ ಎಂಬ ಮಾತುಗಳೂ ಕೇಳಿ ಬಂದಿದೆ. ಇದರೊಂದಿಗೆ ‘ಉಡುಪಿ ಟೈಮ್ಸ್‘ ನಲ್ಲಿ ಪ್ರಕಟವಾದ ಸುದ್ದಿಗೆ 80 ಕ್ಕೂ ಅಧಿಕ ಮಂದಿ ಪ್ರತಿಕ್ರಿಯೆ ನೀಡಿದ್ದು ಎಲ್ಲರೂ ಮಂಜುಳಾ ಅವರನ್ನು ಬೆಂಬಲಿಸುವ ಮೂಲಕ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ವಿಶೇಷ.

  77. An unforgettable ,uncompromising, straight forward with human values and down to earth ,motivating as role model for all the teachers .You have a permanent place in our hearts .May Almighty bless you to become more stronger to face the challenges of your bright future.

  78. ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಅಮಾನತು ಶಿಕ್ಷೆಯಾದರೆ ನಮ್ಮ ಂತಹ ಯುವಕರು ಮುಂದೆ ಯಾವ ರೀತಿ ನಡೆಯಬೇಕು ಎಂದು ಹೇಳುವಿರಾ ?

  79. My daughter who is very young happened to meet SMT.Manjula just a few years ago told me about this officers friendly attitude n said she was the one who was talking to everyone n guiding those who come for help.If this dirty politics happens in a place like udupi..it is a great shame.i worked in udupi for over 16 years till 2007 and I never thought a zilla Panchayat president can stoop down to this level to harass an efficient cultured honest officer to meet his ends.Hope people will teach him a lesson and govt will come down to its senses n withdraw it’s order immedlately.Madamji don’t get deterred by all these n sink down be confident, you will get justice…God bless you.

  80. Why tv channels and news papers are silent, for them only politicians important and not protection of honest officials. All should support Manjula madam. Unfortunately politicians silent as usual

  81. Madam Manjula was a very good person, good officer. Tried to put order in everything. ದಕ್ಷ ಅಧಿಕಾರಿಯಾಗಿದ್ದ ಅವರಿಗೆ ಅಮಾನಾತು ಗೊಳಿಸಿದ್ದು ಬೇಸರದ ವಿಷಯ.. ಅವರಿಗೆ ನ್ಯಾಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತೇನೆ.

  82. Manjula mam was a very good officer. Your truth and honesty will win mam . I think we should support her

  83. ಬಹುಶಃ ಎಲ್ಲೆಡೆ ಪ್ರಾಮಾಣಿಕತೆ ಎಂಬುವುದು ಮರೀಚಿಕೆಯಾಗಿದೆ.
    ಸಮಾಜದಲ್ಲಿ ಧೂರ್ತರದ್ದೆ ಕಾರುಬಾರು ಅದು ಸರ್ಕಾರವಾಗಲಿ ಅಧಿಕಾರಿಗಳಾಗಲಿ ಸಾಮಾನ್ಯ ಜನರಾಗಲಿ.
    ಕೊನೆಗೆ ಸತ್ಯಕ್ಕೆ ಜಯ, ಈ ಅಧಿಕಾರಿಗೆ ನ್ಯಾಯ ಸಿಗಲಿ.

  84. Corruption percolate from top. Politicians pressurize burocrats to get corrupt. If not cooperate they create he’ll for them.. Needn’t fear go ahead with your work BEO madam. They can’t do anything except transferring you. Don’t deter from your goal.

  85. THE CURRUPTED OFFICIAL & ZILLA PANCHYATH ADHYAKSHA IS AFRAID OF UR STYLE OF WORKING WITHOUT CURRUPTION THEY ARE (POLITICIANS)PROTECTING THE CURRUPTED OFFICIALS FOR THEIR FINANCIAL PROFIT THE KARNATAKA RASTRA SAMITHI PARTY POLITICALLY STRONG WITH THEIR AGENDA AGAINST THE CURRUPTED GOVERNMENT SYSTEM

  86. Education department is one of hopeful n holy deptt. Its because every steps & movements of nations are designed to evolution of its future citizens.
    Hon’ble BEO-Manjula madman’s present condition will conveys a negative lesson among officers not only edn deptt, also some deptt which have plenty of chances to corruption. This obviously arouses ” honesty” is a thing to be in musium. Eventually affects not only Udupi edn deptt, but also every corner of society even speeder than Corona. So friends we should raise our voice for our existance.

Leave a Reply

Your email address will not be published. Required fields are marked *

error: Content is protected !!