ಕೊರೊನಾ ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರವೇ: ಕಾಂಗ್ರೆಸ್ ಟ್ವೀಟ್
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರಿಗೆ ಕೊರೋನಾ ಪಾಟಿವ್ ತಗುಲಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಕುರಿತಾಗಿ ಟೀಕಿಸಿರುವ ರಾಜ್ಯ ಕಾಂಗ್ರೆಸ್ ‘ಕೊರೊನಾ’ ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರವಾಗಿದೆ ಎಂದು ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಕಳ್ಳನೊಬ್ಬ “ನನಗೆ ಕೊರೊನಾ ಬಂದಿದೆ ಮುಟ್ಟಬೇಡಿ” ಎಂದು ಪೊಲೀಸರಿಗೆ ಹೇಳಿದಂತೆ! “ಕೊರೊನಾ” ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರ ಎನ್ನುವುದು ಸ್ಪಷ್ಟವಾಗಿದೆ. ಸಿಡಿ ಹೇಗೆ ಬಂದಿದೆಯೋ, ಹಾಗೆಯೇ ವಾಪಸ್ ಹೋಗುತ್ತದೆ ಎನ್ನುವ ಸಚಿವ ಆರ್.ಶಂಕರ್ ಮಾತು ಸಹ ಪ್ರಕರಣವನ್ನು ಮುಚ್ಚಿ ಹಾಕಲು ನಡೆಯುತ್ತಿರುವ ಷಡ್ಯಂತ್ರಗಳ ಪ್ರತಿಬಿಂಬ ಎಂಬುದು ಗೊತ್ತಾಗುತ್ತಿದೆ ಎಂದು ಬರೆದುಕೊಂಡಿದೆ.