ಹಳೆಯಂಗಡಿ: ಸಮಾಜ ಸೇವಕ, ಉದ್ಯಮಿ ಪಂಜದಗುತ್ತು ಶಾಂತಾರಾಮ ಶೆಟ್ಟಿ ನಿಧನ

ಹಳೆಯಂಗಡಿ: ವಿವಿಧ ಕ್ಷೇತ್ರದಲ್ಲಿ ಸೇವಾರ್ಥಿಯಾಗಿ ಗುರುತಿಸಿಕೊಂಡಿದ್ದ, ಸಮಾಜ ಸೇವಕ, ಉದ್ಯಮಿ, ಪಂಜದಗುತ್ತು ಶಾಂತಾರಾಮ ಶೆಟ್ಟಿ (79) ಅವರು ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರು ಪಂಜದ ಗ್ರಾಮದಲ್ಲಿ ಬೀಡಿ ಉದ್ಯಮ ಆರಂಭಿಸಿ ಸಾವಿರಾರು ಕುಟುಂಬಕ್ಕೆ ಆಸರೆಯಾಗಿದ್ದು, ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿ, ಹಳೆಯಂಗಡಿ, ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಪಂಜ ವಿಠೋಬ ಭಜನಾ ಮಂದಿರ, ಮೂಲ್ಕಿ ಅರಮನೆ ಹಾಗೂ ಬಸದಿಯ ನವ ನಿರ್ಮಾಣದಲ್ಲಿ ವಿಶೇಷ ಸಹಕಾರ ನೀಡಿದವರು, ಹುಟ್ಟೂರಿನಲ್ಲಿ ಕೆಮ್ರಾಲ್ ಫ್ರೌಢಶಾಲೆಯನ್ನು ಸ್ಥಾಪಿಸಿದ್ದರಿಂದ ಸರಕಾರವು ಅವರ ಹೆಸರಿನಲ್ಲಿಯೇ ಶಾಲೆಯನ್ನು ಪುನನಾಮಕರಣ ಮಾಡಿ ಗೌರವ ಪಡೆದಿದ್ದಾರೆ.

ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್, ಮಾಜಿ ರಾಜ್ಯ ಸಚಿವ ಕೆ.ಅಭಯಚಂದ್ರ, ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು, ಕಾಂಗ್ರೆಸ್‌ನ ಯುವ ನಾಯಕ ಮಿಥುನ್ ರೈ, ಕೆಪಿಸಿಸಿ ಕೋ ಆರ್ಡಿನೇಟರ್ ಎಚ್.ವಸಂತ ಬೆರ್ನಾಡ್, ಮೂಲ್ಕಿ ಅರಮನೆಯ ಗೌತಮ್ ಜೈನ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!