ಉಡುಪಿ: ಚಿನ್ನಬೆಳ್ಳಿ ಕೆಲಸಗಾರರ ಸಂಘದ ಕ್ರಿಕೆಟ್ ಪಂದ್ಯಾಟ: ಗೋಲ್ಡನ್ ಫ್ರೆಂಡ್ಸ್ ವ್ಯವಹಾರ್ ವಿನ್ನರ್ಸ್
ಉಡುಪಿ: ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ 90 ಗಜಗಳ ಕ್ರಿಕೆಟ್ ಪಂದ್ಯಾಟ ಏ.4 ರಂದು ಎಂಜಿಎಂ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿತ್ತು. ಅದರಲ್ಲಿ ಗೋಲ್ಡನ್ ಫ್ರೆಂಡ್ಸ್ ವ್ಯವಹಾರ್ ಉಡುಪಿ ಪ್ರಥಮ ಬಹುಮಾನ ಹಾಗೂ ಚಿನ್ನ ಫ್ರೆಂಡ್ಸ್ ಉಡುಪಿ ದ್ವಿತೀಯ ಬಹುಮಾನ ಪಡೆದುಕೊಂಡಿತು.
ಕಿಶೋರ್ ಆರ್ ಆಚಾರ್ಯ ಪಂದ್ಯಾಟದ ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭ ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಆಚಾರ್ಯ ಉದ್ಯಾವರ, ಸಾಯಿನಾಥ್ ಭಟ್, ನಾಗರಾಜ ಆಚಾರ್ಯ ಕಾಡಬೆಟ್ಟು, ರಾಘವೇಂದ್ರ ಆಚಾರ್ಯ ಕಾಡಬೆಟ್ಟು, ಸುಧಾಕರ ಆಚಾರ್ಯ, ಕೆ. ಗಿರೀಶ್ ಆಚಾರ್ಯ, ಅರುಣ ಆಚಾರ್ಯ, ಸತೀಶ್ ಆಚಾರ್ಯ ನಯಂಪಳ್ಳಿ,ಹಾಗೂ ಟಿ ಜಿ ಪ್ರಭಾಕರ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್ ಆಚಾರ್ಯ, ಪ್ರಸಾದ್ ಆಚಾರ್ಯ ಹಾಗೂ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವೀರನಾರಾಯಣ ರಾವ್, ಯಶ್ ಪಾಲ್ ಸುವರ್ಣ, ಭವಾನಿ ನಾರಾಯಣ ಆಚಾರ್ಯ, ಸುಬ್ರಮಣ್ಯ ಶೇಟ್, ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಅಲೆವೂರು ಯೋಗೀಶ ಆಚಾರ್ಯ, ಗಂಗಾಧರ ಆಚಾರ್ಯ, ಸುಧಾಕರ ಆಚಾರ್ಯ ಬಿಳಿಯಾರು, ಗೋಕುಲ ಆಚಾರ್ಯ, ಟಿ ಜಿ ಪ್ರಭಾಕರ ಆಚಾರ್ಯ, ಪ್ರಶಾಂತ ಆಚಾರ್ಯ ನೇಜಾರು, ರವಿಚಂದ್ರ ಆಚಾರ್ಯ ಮಾರಳಿ, ಜಯಪ್ರಕಾಶ್ ಆಚಾರ್ಯ ಕುತ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.