ಈದು ದೈವಸ್ಥಾನದ ಆಡಳಿತವನ್ನು ಆಡಳಿತಾಧಿಕಾರಿಗೆ ಹಸ್ತಾಂತರಿಸುವಂತೆ ಗ್ರಾಮಸ್ಥರ ಧರಣಿ
ಕಾರ್ಕಳ (ಉಡುಪಿಟೈಮ್ಸ್ ವರದಿ): ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ಆಡಳಿತವನ್ನು ಆಡಳಿತಾಧಿಕಾರಿಗೆ ಹಸ್ತಾಂತರಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ. ಈ ಕುರಿತಾಗಿ ದೈವಸ್ಥಾನದ ವಠಾರದಲ್ಲಿ ಧರಣಿ ನಡೆಸಿರುವ ಗ್ರಾಮಸ್ಥರು, ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ಆಡಳಿತವನ್ನು ಆಡಳಿತ ಅಧಿಕಾರಿಗೆ ಹಸ್ತಾಂತರಿಸಲು ಹಾಗೂ ಕಾಲಾವಧಿ ಜಾತ್ರೋತ್ಸವವನ್ನು ನೆರವೇರಿಸಬೇಕೆಂದು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.