ಹಿರಿಯಡ್ಕ: ಜಾಗದ ತಕರಾರು ವ್ಯಕ್ತಿಯೋರ್ವರಿಗೆ ಹಲ್ಲೆ
ಹಿರಿಯಡ್ಕ: ಜಾಗದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿರುವ ಘಟನೆ ಹಿರಿಯಡ್ಕದಲ್ಲಿ ನಡೆದಿದೆ. ಈ ಕುರಿತಂತೆ ಬೆಳ್ಳರಪಾಡಿ ಗ್ರಾಮದ ರಾಜು ಶೆಟ್ಟಿ ಅವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು ನೀಡಿರುವ ದೂರಿನ ಅನುಸಾರ, ರಾಜು ಶೆಟ್ಟಿ ಅವರ ತಾಯಿಯ ತಂಗಿಯ ಮಗ ರಘುನಾಥ ಶೆಟ್ಟಿ ಹಾಗೂ ತಾಯಿಯ ತಮ್ಮ ಗೋಪಾಲ ಶೆಟ್ಟಿಯವರ ಮಕ್ಕಳಿಗೆ 41ನೇ ಶೀರೂರು ಗ್ರಾಮದ ಕೊಡ್ಸರಬೆಟ್ಟು ಎಂಬಲ್ಲಿರುವ ಜಾಗದ ವಿಚಾರದಲ್ಲಿ ಸುಮಾರು 7 ವರ್ಷದಿಂದ ತಕಾರಾರು ಇದ್ದು, ಈ ಬಗ್ಗೆ ರಘುನಾಥ ಶೆಟ್ಟಿಯವರು ನ್ಯಾಯಾಲಯದಲ್ಲಿ ದಾವೆ ಹೂಡಿ ಅವರ ಪರವಾಗಿ ತಿರ್ಪು ಆಗಿರುತ್ತದೆ.
ಜೊತೆಗೆ ಜಾಗದ ಅಳತೆಗೆ ಏ.2 ರಂದು ದಿನ ನಿಗದಿಯಾಗಿತ್ತು. ಆದರೆ ಅನಾರೋಗ್ಯದ ಹಿನ್ನೆಲೆ ಸಂತೆಕಟ್ಟೆಯ ಗೋಪಾಲಪುರದಲ್ಲಿರು ರಘುನಾಥ ಶೆಟ್ಟಿಯವರು ಜಾಗದ ಅಳತೆಗೆ ತಮ್ಮ ಬದಲು ರಾಜು ಶೆಟ್ಟಿ ಅವರನ್ನು ಕಳುಹಿಸಿದ್ದಾರೆ. ಅದರಂತೆ ಏ.2 ರಂದು ರಘುನಾಥ ಶೆಟ್ಟಿಯವರ ವಕೀಲರಾದ ಶ್ರೀನಿವಾಸ ನಾಯಕ್, ಸರ್ವೆಯರ್ ಪದ್ಮನಾಭ ಹಾಗೂ ಅವರ ಸಹಾಯಕ ಶಂಕರ್, ಕೊರ್ಟ್ ಕಮೀಷನರ್ ಸುದರ್ಶನ್ ಮತ್ತು ಕೆಲಸಗಾರರಾದ ಪೆರ್ಡೂರಿನ ಆನಂದ ಮತ್ತು ದರ್ಶನ್‍ರವರೊಂದಿಗೆ ಅಳತೆ ಮಾಡುತ್ತಿದ್ದರು.
ಈ ವೇಳೆ ರಾಜು ಶೆಟ್ಟಿ ಅವರ ಮಾವನ ಮಕ್ಕಳಾದ ಬಾಲಕೃಷ್ಣ, ಪ್ರವೀಣ ಹಾಗೂ ಅವಿನಾಶ್‍ರವರು ಅಲ್ಲಿಗೆ ಬಂದಿದ್ದು, ಈ ಪೈಕಿ ಪ್ರವೀಣ ನಿಮಗೆ ಸರ್ವೆ ಮಾಡಲು ಯಾರು ಹೇಳಿದ್ದು ಎಂದು ಹೇಳಿ ರಾಜು ಅವರಿಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಮೂವರು ರಾಜು ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದು, ಅವಿನಾಶನು ಕಬ್ಬಿಣದ ಸರಳಿನಿಂದ ಹೊಡೆಯಲು ಬಂದಾಗ ವಕೀಲರು ಹಾಗೂ ಸರ್ವೆಯರ್ ಆತನನ್ನು ತಡೆದಿದ್ದು, ಆಗ ನಮ್ಮ ಜಾಗದ ವಿಚಾರಕ್ಕೆ ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಈ ವೇಳೆ ಗಾಯಗೊಂಡ ರಾಜು ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ