ಉಡುಪಿ: ವೈಷ್ಣವಿ ಸರ್ವೀಸಸ್ ಮತ್ತು ಫಿಟ್ಲಾನ್ಸ್ ಅರೆನಾ ವತಿಯಿಂದ ಫಿಟ್‍ವೀಕ್ ಎಂಡ್ ಇವೆಂಟ್

ಉಡುಪಿ(ಉಡುಪಿ ಟೈಮ್ಸ್ ವರದಿ): ವೈಷ್ಣವಿ ಸರ್ವೀಸಸ್ ಮತ್ತು ಫಿಟ್ಲಾನ್ಸ್ ಅರೆನಾ ವತಿಯಿಂದ ಆಯೋಜಿಸಲಾದ ಫಿಟ್‍ವೀಕ್ ಎಂಡ್ ಎಂಬ ಇವೆಂಟ್ ಮಾ.28 ರಂದು ಉಡುಪಿ ಸಿಟಿ ಸೆಂಟರ್ ಮಾಲ್ ಬಳಿ ಇರುವ ಹೊಟೇಲ್ ಸೆಂಚುರಿ ಎಕ್ಸಿಕ್ಯೂಟಿವ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಗೆ ಸಂಬಂಧಿಸಿದ ಈ ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ಭಾಗವಹಿಸಿದ್ದು, ಯೋಗ, ಎರೋಬಿಕ್ಸ್, ಬಾಡಿ ಫಿಟ್ನೆಸ್, ಡಯಟ್ ಆಂಡ್ ನ್ಯೂಟ್ರೀಶನಸ್, ಫನ್ ಆಕ್ಟಿವಿಟೀಸ್ ಗಳಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ ಜನರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಮಾತ್ರವಲ್ಲದೆ ಇಂತಹ ಕಾರ್ಯಕ್ರಮಗಳನ್ನು ಮತ್ತೆ ಮತ್ತೆ ಆಯೋಜನೆ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಫಿಟ್ ನೆಸ್ ಕಾರ್ಯಕ್ರಮಗಳನ್ನು ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ‘ಉಡುಪಿ ಟೈಮ್ಸ್’ ಮೀಡಿಯಾ ಪಾರ್ಟ್‍ನರ್ ಆಗಿ ಕಾರ್ಯನಿರ್ವಹಿಸಿದ್ದು, ಸ್ಪಾನ್ಸರ್ ಆಗಿ ಕರಾವಳಿ ಇನಸ್ಟಿಟ್ಯೂಟ್ ಆಫ್ ಫಯರ್ ಆಂಡ್ ಸೇಫ್ಟಿ, ಶಾಂತಾ ಎಲೆಕ್ಟ್ರಿಕಲ್ಸ್, ಇಂಜಿನಿಯರ್ಸ್ ಪ್ರೈ.ಲಿ, ಎಟಿಎಂಟಿ ಪ್ರೋ ಆಪ್ ಕಾರ್ಯ ನಿರ್ವಹಿಸಿದೆ.
ಕಾರ್ಯಕ್ರಮದಲ್ಲಿ ಯೋಗ ಗುರು ಪ್ರಸಾದಿನಿ ರಾವ್, ಡಯಟ್ ಆಂಡ್ ನ್ಯೂಟ್ರೀಶನ್ ಪೂಜಾ, ಬಾಡಿ ಫಿಟ್ನೆಸ್ ಅದ್ವಿನ್, ಧೀರಜ್, ಲಾವಣ್ಯ, ಸುಶ್ಮಿತ, ಯಶ್ವಿನಿ ಉಪಸ್ಥಿತರಿದ್ದರು. ವಿ. ಜೆ ಸುರೇಶ ಮತ್ತು ಪ್ರಿಯಾಂಕ ಕಾರ್ಯಕ್ರಮ ನಿರ್ವಹಿಸಿದರು.

ಈ ಕಾರ್ಯಕ್ರಮದಲ್ಲಿ ಎಟಿಎಂಟಿ ಪ್ರೋ ಇದರ ಡಿಸ್ಟ್ರಿಬ್ಯೂಟರ್ ರಾಜೇಶ್ ಸುವರ್ಣ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!