ಬ್ರಹ್ಮಾವರ: ಹಂದಾಡಿ ಶಾಂತಿಮತೀ ಪ್ರತಿಷ್ಠಾನ ವತಿಯಿಂದ ಪೂರ್ಣಿಮಾ ಜನಾರ್ದನ್’ರಿಗೆ ಸನ್ಮಾನ

ಉಡುಪಿ: ಬ್ರಹ್ಮಾವರದ ಹಂದಾಡಿಯ ಶಾಂತಿಮತೀ ಪ್ರತಿಷ್ಠಾನ ವತಿಯಿಂದ ಸಾಧಕರೆಡೆ ನಮ್ಮ ನಡೆ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬರಹಗಾರ್ತಿ ಪೂರ್ಣಿಮಾ ಜನಾರ್ದನ್ ಅವರನ್ನು ಸನ್ಮಾನಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು. ನಮ್ಮ ಸಾಧನೆಯ ಬಗ್ಗೆ ನಾವೇ ಅಭಿಮಾನ ಪಟ್ಟರೆ ಸಂತಸವೆನಿಸುತ್ತದೆ. ಆದರೆ ಇನ್ನೊಬ್ಬರು ನಮ್ಮ ಸಾಧನೆ ಬಗ್ಗೆ ಅಭಿಮಾನ ಪಟ್ಟಾಗ ಮಾತ್ರ ಅದು ಸಾರ್ಥಕವೆನಿಸುತ್ತದೆ.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಸುಪ್ತ ಪ್ರತಿಭೆ ಇರುತ್ತದೆ. ಅದಕ್ಕೊಂದು ಸೂಕ್ತ ವೇದಿಕೆ ದೊರೆತಾಗ ಆ ಪ್ರತಿಭೆ ಪ್ರಕಾಶಿಸುತ್ತದೆ ಎಂದರು. ಈ ವೇಳೆ ಶಾಂತಿಮತೀ ಪ್ರತಿಷ್ಟಾನದ ವಿದ್ವಾನ್ ವಿಜಯ ಮಂಜರವರು ಮಾತನಾಡಿ, ಒಂದು ಮನೆ, ಆ ಮನೆ ಮಂದಿ, ಆ ಮನೆಯ ಸುತ್ತಲಿನ ಜನ, ಸಮುದಾಯ, ಒಂದು ಸಮಾಜ ಇವೆಲ್ಲವನ್ನೂ ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗುವ ಸ್ತ್ರೀ ಶಕ್ತಿ ನಿಜಕ್ಕೂ ಅದ್ಭುತ. ಅಂತಹ ಮಹಿಳಾ ಶಕ್ತಿಯನ್ನು ನಾವು ಗೌರವಿಸಬೇಕು ಎಂದರು.

ಈ ಸಂದರ್ಭ ಉಡುಪ ರತ್ನ ಪ್ರತಿಷ್ಟಾನದ ಸಂಚಾಲಕ ಜನಾರ್ದನ ಕೊಡವೂರು, ಶಾಂತಿ ಮತೀ ಪ್ರತಿಷ್ಟಾನದ ಅಧ್ಯಕ್ಷ ದಯಾನಂದ ವಾರಂಬಳ್ಳಿ, ನಳಿನಿ ಪ್ರದೀಪ್ , ಯಶೋದಾ ಹೊಳ್ಳ , ಉಮೇಶ್ ಬಾಯರಿ ಮೊದಲಾದವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!