ಮಂಗಳೂರು ಮೂಲದ ದಂಪತಿ ನ್ಯೂಜಿಲೆಂಡ್ ನಲ್ಲಿ ಮಗನಿಂದಲೇ ಹತ್ಯೆ: ಬಳಿಕ ತಾನೂ ಆತ್ಮಹತ್ಯೆಗೆ ಯತ್ನ!

ಮಂಗಳೂರು: ನ್ಯೂಜಿಲೆಂಡ್​ನ ಆಕ್ಲಂಡ್‌ ನಗರದಲ್ಲಿ ನೆಲೆಸಿದ್ದ ಮಂಗಳೂರು ಮೂಲದ ಗಂಡ-ಹೆಂಡತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. 

ಅದಕ್ಕೂ ವಿಚಿತ್ರವೆಂದರೆ ಆ ದಂಪತಿಯ ಮಗನೇ ಅವರನ್ನು ಕೊಲೆ ಮಾಡಿದ್ದಾನೆ. 5 ದಿನಗಳ ಹಿಂದೆಯೇ ಈ ಕೊಲೆ ನಡೆದಿದ್ದು, ತನ್ನ ತಂದೆ-ತಾಯಿಯನ್ನು ಕೊಲೆ ಮಾಡಿದ ಬಳಿಕ ಮಗ ಕೂಡ ಚಾಕುವಿನಿಂದ ಇರಿದುಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಮಂಗಳೂರಿನ ಬಲ್ಮಠ ನಿವಾಸಿಗಳಾಗಿದ್ದ ಎಲ್ಸಿ ಬಂಗೇರ ಮತ್ತು ಅವರ ಪತಿ ಹರ್ಮನ್‌ ಬಂಗೇರ ಕೊಲೆಯಾದವರು. ಎಂಜಿನಿಯರಿಂಗ್‌ ಓದುತ್ತಿರುವ ಪುತ್ರ ಶೀಯಲ್‌(23) ಎಂಬಾತ ತನ್ನ ಮನೆಯಲ್ಲೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದ. ಐದು ದಿನಗಳ ಹಿಂದೆ ಘಟನೆ ನಡೆದಿದ್ದು, ಹೆತ್ತವರಿಗೆ ಚೂರಿಯಿಂದ ಇರಿದ ಬಳಿಕ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಸ್ಥಳೀಯರು ಗಮನಿಸಿ, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

ಹರ್ಮನ್‌ ಅವರು ಮುಂಬಯಿಯ ಶಾಲೆಯೊಂದರಲ್ಲಿಆಡಳಿತಾಧಿಕಾರಿಯಾಗಿದ್ದರು. ಮುಂಬಯಿಯಲ್ಲಿ ಗೋದ್ರೆಜ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಎಲ್ಸಿ ಅವರೊಂದಿಗೆ ಹರ್ಮನ್‌ ಅವರ ಮದುವೆಯಾದ ಬಳಿಕ ದಂಪತಿ ಗೋವಾದಲ್ಲಿ ನೆಲೆಸಿದ್ದರು. ಮಗನ ಉನ್ನತ ಮತ್ತು ಉತ್ತಮ ವಿದ್ಯಾಭ್ಯಾಸಕ್ಕಾಗಿ ದಂಪತಿ 2007ರಲ್ಲಿ ನ್ಯೂಜಿಲ್ಯಾಂಡ್‌ ತೆರಳಿದ್ದರು. 2014ರಲ್ಲಿ ಮಗ ಪದವಿ ಮುಗಿಸಿದ್ದ.

ತನ್ನ ಅಪ್ಪ-ಅಮ್ಮನ ಜೊತೆ ಇರಲು ಇಷ್ಟವಿರಲಿಲ್ಲ. ತಾನು ಸ್ವತಂತ್ರವಾಗಿ ಬೇರೆ ಮನೆಯಲ್ಲಿ ವಾಸವಾಗಲು ಇಚ್ಛಿಸಿದ್ದ. ಇದು ಆತನ ಪೋಷಕರಿಗೆ ಇಷ್ಟವಿರಲಿಲ್ಲ. ಇದೇ ವಿಷಯಕ್ಕೆ ಆಗಾಗ ಅವರ ಮಧ್ಯೆ ಜಗಳವಾಗುತ್ತಿತ್ತು. 5 ದಿನಗಳ ಹಿಂದೆ ಕೂಡ ಇದೇ ವಿಚಾರಕ್ಕೆ ಜಗಳ ನಡೆದಿದ್ದು, ಕೋಪದಿಂದ ಶಿಯಲ್ ತನ್ನ ಅಪ್ಪ-ಅಮ್ಮನಿಗೆ ಚೂರಿಯಿಂದ ಇರಿದ ಬಳಿಕ ತಾನು ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಅಕ್ಕಪಕ್ಕದವರು ಇದನ್ನು ಗಮನಿಸಿ, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು

ಕಳೆದ ಶುಕ್ರವಾರ ಕೂಡಾ ಇದೇ ವಿಚಾರದಲ್ಲಿ ಜಗಳ ನಡೆದಿದ್ದು, ಶೀಯಲ್‌. ಹೆತ್ತವರ ಮೇಲೆ ಚೂರಿಯಿಂದ ಇರಿದಿದ್ದ. ಹೆತ್ತವರು ಸತ್ತರೆಂದು ಗೊತ್ತಾಗಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು  ಸ್ಥಳೀಯರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!