ಮಲ್ಪೆ: ಬೀಚ್ ಕ್ಲೀನಿಂಗ್ ಯಂತ್ರಕ್ಕೆ ಬೆಂಕಿ
ಮಲ್ಪೆ: ಬೀಚ್ ಕ್ಲೀನಿಂಗ್ ಯಂತ್ರಕ್ಕೆ ಜೋಡಿಸಲಾದ ಟ್ರಾಕ್ಟರ್ ಬೆಂಕಿಗಾಹುತಿಯಾದ ಘಟನೆ ಮಲ್ಪೆ ಬೀಚ್‍ನಲ್ಲಿ ಇಂದು(ಏ.1) ನಸುಕಿನ ಜಾವ 4.30ರ ಸುಮಾರಿಗೆ ನಡೆದಿದೆ.
ಘಟನೆಯಿಂದ ಟ್ರಾಕ್ಟರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಕುರಿತಂತೆ ಮಲ್ಪೆ ಬೀಚ್ ಅಭಿವೃದ್ಧಿ ಸಮೀತಿ ಮಲ್ಪೆ ಠಾಣೆಗೆ ದೂರು ನೀಡಿದೆ.
ಘಟನೆ ಕಾರಣ ಕುರಿತಂತೆ ಆಕಸ್ಮಿಕವಾಗಿ ಶಾರ್ಟ್ ಸಕ್ರ್ಯೂಟ್‍ನಿಂದ ಅವಘಡ ಸಂಬವಿಸಿರಬಹುದೇ ಅಥವಾ ಯಾರಾದರೂ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದೇ ಎಂಬುದು ಇನ್ನಷ್ಟೇ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಘಟನೆಯಿಂದ ಸುಮಾರು ಏಳುವರೆಯಿಂದ 8 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆ ಬಗ್ಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಬೀಚ್‍ನಲ್ಲಿ ಟ್ರಾಕ್ಟರ್ ಸುಟ್ಟು ನಾಶಾವಾಗಿದೆ. ಅಲ್ಲದೆ, ತಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮೊದಲ ಬೀಚ್ ಕ್ಲೀನಿಂಗ್ ಯಂತ್ರವನ್ನು ಖರೀದಿಸಿದ್ದು, ಘಟನೆ ಬಗ್ಗೆ ಸರಿಯಾದ ವಿಚಾರಣೆ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.