ಟ್ರಕ್-ಬೈಕ್ ಮುಖಾಮುಖಿ ಡಿಕ್ಕಿ, ಪೆರಂಪಳ್ಳಿಯ ಯುವಕ ಸ್ಥಳದಲ್ಲೇ ಮೃತ್ಯು
ಕುಂದಾಪುರ: (ಉಡುಪಿ ಟೈಮ್ಸ್ ವರದಿ)ಟ್ರಕ್ಗೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಕುಂದಾಪುರದ ಮಾಸ್ತಿಕಟ್ಟೆಯ ಯಡೂರು ಬಳಿ ನಡೆದಿದೆ. ಉಡುಪಿಯ ಪೆರಂಪಳ್ಳಿಯ ಜೋಸೆಫ್ ಗೋಮ್ಸ್ (28) ಮೃತಪಟ್ಟವರು.
ಮೂಲಗಳ ಪ್ರಕಾರ ಜೋಸೆಫ್ ಗೋಮ್ಸ್ ಮತ್ತವರ ಸ್ನೇಹಿತರು ಮಾಸ್ತಿಕಟ್ಟೆಯಲ್ಲಿರುವ ಸ್ನೇಹಿತರ ಮನೆಗೆ ಹೋಗುತ್ತಿದ್ದರು. ಜೋಸೆಫ್ ಬೈಕ್ನಲ್ಲಿ ಹೋಗುತ್ತಿದ್ದರೆ ಇತರ ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ಮಸ್ತಿಕಟ್ಟೆಯ ಪ್ರದೇಶದ ಬಳಿ ಬರುತ್ತಿದ್ದಂತೆ, ಬೈಕ್ ನಿಯಂತ್ರಣ ಕಳೆದುಕೊಂಡು ಮುಂದಿನಿಂದ ಬರುತ್ತಿದ್ದ ಟ್ರಕ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.
ಜೋಸೆಫ್ ಅವರು ಮಲ್ಪೆ ಬಂದರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪೆರಂಪಳ್ಳಿಯಲ್ಲಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘದಲ್ಲಿ ಅವರು ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.