ಕೋವಿಡ್ ಸಂಕಷ್ಟ- ಮಂಗಳೂರು ಮೂಲದ ಹೋಟೆಲ್ ಉದ್ಯಮಿ ಆತ್ಮಹತ್ಯೆ
ವಿಜಯಪುರ: ಇಂಡಿ ನಗರದ ಅಮರ್ ಹೋಟೆಲ್ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಣೇಶ್ ಆತ್ಮಹತ್ಯೆಗೆ ಶರಣಾದ ಹೋಟೆಲ್ ಉದ್ಯಮಿ. ಮಂಗಳೂರು ಮೂಲದವರಾಗಿರುವ ಗಣೇಶ್, ಇಂಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. 30 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡು ಬಾಡಿಗೆ ಕಟ್ಟಡದಲ್ಲಿ ಹೋಟೆಲ್ ಮತ್ತು ಲಾಡ್ಜಿಂಗ್ ಆರಂಭಿಸಿದ್ದರು. ಕೋವಿಡ್ ಕಾರಣದಿಂದ ಹೋಟೆಲ್ ಉದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದ್ದರಿಂದ ಗಣೇಶ್ ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗಿದೆ.
ಹೋಟೆಲ್ ನಡೆಸಲು ಪಡೆದ ಸಾಲ ಹಿಂದಿರುಗಿಸಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.