ಮಣಿಪಾಲ: ಸ್ವಚ್ಚತಾ ಕಾರ್ಮಿಕರಿಗೆ ಹಲ್ಲೆಗೈದು ಜೀವ ಬೆದರಿಕೆ

ಮಣಿಪಾಲ: ಸ್ವಚ್ಚತಾ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಮಣಿಪಾಲ ದ ನೇತಾಜಿ ನಗರದಲ್ಲಿ ನಡೆದಿದೆ. ಈ ಬಗ್ಗೆ ರಂಗ ಎಂಬುವವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಂಗ ಅವರು SLRM 80 ಬಡಗಬೆಟ್ಟು ಗ್ರಾಮದ ಕಸ ನಿರ್ವಹಣಾ ಘಟಕದಲ್ಲಿ ಸ್ವಚ್ಚತಾ ಕಾರ್ಮಿಯಾಗಿ ಕೆಲಸ ಮಾಡಿಕೊಂಡಿದ್ದರು. ಮಾ.30 ರಂದು ಅವರು ತಮ್ಮ ವಾಹನದಲ್ಲಿ ಕಸ ತುಂಬಿಕೊಂಡು ಬರುತ್ತಿದ್ದ ವೇಳೆ ನೇತಾಜಿನಗರದಲ್ಲಿ ಗಣೇಶ್ ಎಂಬಾತ ತನ್ನ ಬೈಕ್ ನ್ನು ರಂಗ ರವರು ಹೋಗುತ್ತಿದ್ದ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿ ವಾಹನದಲ್ಲಿದ್ದ 6 ಜನ ಸ್ವಚ್ಚತಾ ಕಾರ್ಮಿಕರನ್ನು ವಾಹನದಿಂದ ಕೆಳಗಿಳಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ ಕಲ್ಲಿನಿಂದ ರಂಗ ಹಾಗೂ ಸಂತೋಷ್ ಎಂಬವರಿಗೆ ಹೊಡೆದಿದ್ದಾನೆ.

ಅಲ್ಲದೆ ಇನ್ನು ಮುಂದೆ ಈ ರಸ್ತೆಯಲ್ಲಿ ಕಸ ತೆಗೆದುಕೊಂಡು ಬಂದರೆ ನಿಮ್ಮನ್ನೆಲ್ಲ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದಾಗಿರುವುದ್ದಾನೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!