ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡುವುದು ನಿಷೇಧ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ರೈಲಿನಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿರುವುದರಿಂದ ಇಂತಹ ಘಟನೆಗಳನ್ನು ತಪ್ಪಿಸುವ ಸಲುವಾಗಿ ಇನ್ನುಮುಂದೆ ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಚಾರ್ಜ್ ಮಾಡುವುದನ್ನು ರೈಲ್ವೇ ಇಲಾಖೆ ನಿಷೇಧಿಸಿದೆ.

ಈ ಬಗ್ಗೆ ರೈಲ್ವೇ ಇಲಾಖೆ ಆದೇಶ ಹೊರಡಿಸಿದ್ದು, ರೈಲ್ವೆ ಪ್ರಯಾಣಿಕರು ರಾತ್ರಿ ಸಮಯದ ವೇಳೆ ಚಾಜಿರ್ಂಗ್ ಪಾಯಿಂಟ್ ಬಳಕೆಯನ್ನು ನಿಬರ್ಂಧಿಸಿರುವುದು ಮಾತ್ರವಲ್ಲದೆ ಧೂಮಪಾನಿಗಳ ಮೇಲೆಯೂ ನಿಗಾ ಇಡಲು ನಿರ್ಧರಿಸಲಾಗಿದೆ. ಮೊಬೈಲ್ ಫೆÇೀನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಬಳಸುವ ಬೋರ್ಡ್‍ಗಳನ್ನು ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಸ್ವಿಚ್ ಆಫ್ ಮಾಡಲಾಗುತ್ತದೆ. ಈ ಬಗ್ಗೆ ಎಲ್ಲಾ ವಿಭಾಗದ ರೈಲ್ವೆಗಳಿಗೆ ಕೇಂದ್ರ ರೈಲ್ವೆ ಮಂಡಳಿ ಸೂಚನೆ ನೀಡಿದೆ.

ಈಗಾಗಲೇ ಮಾ.16 ರಿಂದಲೇ ಜಾರಿಗೆ ಬಂದಿದ್ದು, ಈ ಹಿಂದೆ 2014 ರಲ್ಲಿ ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‍ಪ್ರೆಸ್‍ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ನಂತರ, ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಚಾಜಿರ್ಂಗ್ ಸೇವೆಗಳನ್ನು ಸ್ವಿಚ್ ಆಫ್ ಮಾಡಲು ರೈಲ್ವೆ ಸುರಕ್ಷತಾ ಆಯುಕ್ತರು ಶಿಫಾರಸು ಮಾಡಿದ್ದರು. ಇದೀಗ ರೈಲ್ವೆ ಮಂಡಳಿ ಅಂತಿಮವಾಗಿ ಎಲ್ಲಾ ರೈಲು ವಲಯಗಳಿಗೆ ಈ ಆದೇಶಗಳನ್ನು ನೀಡಿದೆ. ಇತ್ತೀಚಿನ ಬೆಂಕಿಯ ಘಟನೆಗಳ ದೃಷ್ಟಿಯಿಂದ, ಈ ಕ್ರಮ ಜರುಗಿಸಿದ್ದೇವೆ. ಮುಖ್ಯ ಸ್ವಿಚ್‍ಬೋರ್ಡ್‍ನಿಂದ ವಿದ್ಯುತ್ ಅನ್ನು ರಾತ್ರಿ 11 ರಿಂದ 5 ರವರೆಗೆ ಸ್ವಿಚ್ ಆಫ್ ಮಾಡಲಾಗುತ್ತದೆ ಎಂದು ದಕ್ಷಿಣ ರೈಲ್ವೆ ಸಿಪಿಆರ್ ಒ ಬಿ  ಗುಗನೇಶನ್ ಹೇಳಿದರು.

ಪ್ರಸ್ತುತ, ರೈಲುಗಳ ಒಳಗೆ ಧೂಮಪಾನಿಗಳಿಗೆ ರೈಲ್ವೆ ಕಾಯ್ದೆಯ ಸೆಕ್ಷನ್ 167 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಧೂಮಪಾನ ಮಾಡುವ ಪ್ರಯಾಣಿಕರಿಗೆ 100 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇದಲ್ಲದೇ ರೈಲುಗಳಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುವುದು ರೈಲ್ವೆ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಅಪರಾಧಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1,000 ರೂ ಅಥವಾ ಎರಡನ್ನೂ ದಂಡ ವಿಧಿಸಬಹುದು ಮತ್ತು ಸೆಕ್ಷನ್ 165 ರ ಅಡಿಯಲ್ಲಿ 500 ರೂ.ಗಳ ದಂಡವನ್ನು ಅನ್ವಯಿಸಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಅಂದರೆ ಮಾರ್ಚ್ 13 ರಂದು ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕೇವಲ ಆರು ದಿನಗಳ ಅಂತರದಲ್ಲಿ ರಾಂಚಿ ನಿಲ್ದಾಣದಲ್ಲಿ ಸರಕು ಸಾಗಾಣಿಕಾ ರೈಲಿನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿ ದುರಂತದ ವಿರುದ್ಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ರೈಲ್ವೆ ಬಳಕೆದಾರರು ಮತ್ತು ನೌಕರರು ಸೇರಿದಂತೆ ಎಲ್ಲ ಪ್ರಯಾಣಿಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಏಳು ದಿನಗಳ ತೀವ್ರ ಜಾಗೃತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಕೇಂದ್ರ ಸಾರಿಗೆ ಇಲಾಖೆ ರೈಲ್ವೆ ಮಂಡಳಿಗೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!