ವಿವಿ ಕುಲಪತಿಯಾಗಿ ನೇಮಕ ಮಾಡುವುದಾಗಿ ವಂಚಿಸಿದ ರಾಮಸೇನೆಯ ಪ್ರಸಾದ್ ಅತ್ತಾವರ ಬಂಧನ

ಮಂಗಳೂರು: ಉನ್ನತ ಉದ್ಯೋಗ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪ್ರಸಾದ್ ಅತ್ತಾವರ(40) ಬಂಧಿತ ಆರೋಪಿ. 

ಮಂಗಳೂರು ವಿಶ್ವ ವಿದ್ಯಾನಿಲಯದ ಓರ್ವ ಪ್ರಾಧ್ಯಾಪಕರಿಗೆ ವಿವೇಕ್ ಆಚಾರ್ಯ ಎಂಬವರ ಮೂಲಕ ಪ್ರಸಾದ್ ಅತ್ತಾವರನ ಪರಿಚಯವಾಗಿತ್ತು. ಪ್ರಾಧ್ಯಾಪಕರ ಸ್ನೇಹನ ಬೆಳೆಸಿಕೋಂಡ ಪ್ರಸಾದ್ ಗಣ್ಯ ವ್ಯಕ್ತಿಗಳೊಂದಿಗೆ ತೆಗೆದ ಫೋಟೊ ತೋರಿಸಿ ತನಗೆ ರಾಜ್ಯದ, ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದೆ ಅವರೊಂದಿಗೆ ತುಂಬಾ ಸಲುಗೆಯಲ್ಲಿದ್ದು, ಬೇಕಾದ ಕೆಲಸ ಮಾಡಬಲ್ಲೆ ಎಂದು ತಿಳಿಸಿದ್ದಾನೆ.

ಅಲ್ಲದೆ ಪ್ರಾಧ್ಯಾಪಕರಿಗೆ ರಾಯಚೂರು ವಿಶ್ವವಿದ್ಯಾನಿಲಯದ ಎಸಿ (ಕುಲಪತಿ)ಯಾಗಿ ನೇಮಕ ಮಾಡುವುದಾಗಿ ತಿಳಿಸಿದ್ದಾನೆ. ಇದರೊಂದಿಗೆ ಈ ಕೆಲಸ ಮಾಡಿಕೊಡಲು ತನಗೆ 30 ಲಕ್ಷ ರೂ ನೀಡುವಂತೆ ಬೇಡಿಕೆಯಿಟ್ಟದ್ದಾನೆ. ಪ್ರಾಧ್ಯಾಪಕರನ್ನು ನಂಬಿಸಿದ ಪ್ರಸಾದ್ ಅವರಿಂದ ಒತ್ತಾಯವಾಗಿ ರೂ 17.5 ಲಕ್ಷ ಹಣ ಪಡೆದು ಉಳಿದ ಹಣಕ್ಕೆ 3 ಖಾಲಿ ಚೆಕ್ ಪಡೆದುಕೊಂಡಿದ್ದಾನೆ. ಬಳಿಕ ಪ್ರಾಧ್ಯಾಪಕರು ಮರಳಿ ಹಣ ಕೇಳಿದಾಗ ಹಣ ವಾಪಾಸ್ಸು ನೀಡದೆ ವಂಚಿಸಿರುವುದು ಮಾತ್ರವಲ್ಲದೆ. ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಕಂಕನಾಡಿ ನಗರ ಠಾಣೆಯಲ್ಲಿ  ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಈತನ ವಿರುದ್ದ ಈಗಾಗಲೇ ಮಂಗಳೂರು ಉತ್ತರ ಠಾಣೆ, ಮಂಗಳೂರು ಪೂರ್ವ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಕಂಕನಾಡಿ ಠಾಣಾ ಅಧಿಕಾರಿಗಳು ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!