ಉಡುಪಿ: ಆಸ್ತಿ ಲಪಟಾಯಿಸಿ ತಾಯಿಯನ್ನೇ ಬೀದಿ ಪಾಲು ಮಾಡಿದ ಮಕ್ಕಳು!

ಉಡುಪಿ(ಉಡುಪಿ ಟೈಮ್ಸ್ ವರದಿ): ಆಸ್ತಿಯನ್ನು ಲಪಟಾಯಿಸಿದ ಮಕ್ಕಳು ಹೆತ್ತತಾಯಿಯನ್ನೇ ಬೀದಿ ಪಾಲು ಮಾಡಿರುವ ಘಟನೆ ದ.ಕ ಜಿಲ್ಲೆಯಲ್ಲಿ ನಡೆದಿದೆ. ಇದೀಗ ತನ್ನ ಮಕ್ಕಳಿಂದಲೇ ವಂಚನೆಗೊಳಗಾಗಿರುವ ತಾಯಿ ತನಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾರೆ ಎಂದು ಪ್ರತಿಷ್ಟಾನದ ಅಧ್ಯಕ್ಷ ಡಾ. ರವೀಂದ್ರ ನಾಥ್ ಶಾನುಭಾಗ್ ತಿಳಿಸಿದ್ದಾರೆ

ಈ ಬಗ್ಗೆ ಮಾಹಿತಿ ನೀಡಿದ ಅವರು, ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ಮೋಂತಿನ್ ಡಿಸಿಲ್ವ ಅವರು ವಿಧವೆಯಾಗಿದ್ದು, 2006 ರಲ್ಲಿ ಪತಿ ಬ್ಯಾಪ್ಟಿಸ್ಟ್ ಡಿಸಿಲ್ವ ಅವರ ನಿಧನದ ಬಳಿಕ ಆಸ್ತಿಯಾಗಿ ಉಳಿದಿದ್ದ 6.25 ಎಕರೆ ಜಮೀನು ಹಾಗೂ ಮನೆಯಲ್ಲಿ ಪಾಲು ನೀಡಬೇಕೆಂದು ದಿನಿತ್ಯವೂ ಮಕ್ಕಳು ಆಗ್ರಯಿಸುತ್ತಿದ್ದರು. ಮಕ್ಕಳ ಬೇಡಿಕೆಗೆ ಮಣಿದಿದ್ದ ಮೋಂತಿನ್ ಡಿಸಿಲ್ವ  ಪರಸ್ಪರ ಒಪ್ಪಿಗೆ ಮೂಲಕ ಜಮೀನನ್ನು ಪಾಲು ಮಾಡಿಕೊಳ್ಳುವಂತೆ ಸೂಚಿಸಿದ್ದರು, ಆದರೆ 2009ರಲ್ಲಿ ಎಲ್ಲಾ ಸದಸ್ಯರು ಸೇರಿ ವಿಭಾಗ ಪತ್ರವೊಂದರ ಮೂಲಕ ವಿವಿಧ ಸರ್ವೆ ನಂಬ್ರಗಳಲ್ಲಿದ್ದ ಜಮೀನುಗಳನ್ನೆಲ್ಲಾ ವಿಂಗಡಿಸಿ ಅವರವರ ಪಾಲಿಗೆ ಬಂದ ಆಸ್ತಿಗಳನ್ನು ತಂತಮ್ಮ ಹೆಸರಿಗೆ ವರ್ಗಾಯಿಸಿ ಹಕ್ಕು ಪತ್ರಗಳನ್ನೂ ಮಾಡಿಕೊಂಡರು.

ತಾಯಿಯ ಪಾಲಿಗೆ ಬಂದ 2.25 ಎಕ್ರೆ ಜಮೀನು ವಿಂಗಡಿಸಿದ್ದರೂ, ಅವರ ಪಾಲಿಗೆ ಬಂದ ಸರ್ವೆ ನಂಬರಿನ ಜಮೀನುಗಳ ಹಕ್ಕು ಪತ್ರಗಳಲ್ಲಿ ಮೋಂತಿನಮ್ಮನ ಹೆಸರು ದಾಖಲಾಗಲೇ ಇಲ್ಲ, ಬದಲಾಗಿ ತಾಯಿ ಮೋಂತಿನಮ್ಮನ ಪಾಲಿಗೆ ಬಂದ ಜಮೀನುಗಳಿಗೆ ಎಲ್ಲಾ ಮಕ್ಕಳ ಜಂಟಿಯಾಗಿ ಹಕ್ಕುದಾರರು” ಎಂದು ವಿಭಾಗ ಪತ್ರದಲ್ಲಿ ದಾಖಲಿಸಿದರು. ಹಾಗೆಯೇ ಹಕ್ಕು ಪತ್ರಗಳಲ್ಲೂ ಎಲ್ಲರ ಹೆಸರುಗಳು ಸೇರಿಕೊಂಡವು. ಆದರೆ ಈ ಬಗ್ಗೆ ಮೋಂತಿಯಮ್ಮರಿಗೆ ಯಾವುದೇ ಅರಿವು ಆಗಲೇ ಇಲ್ಲ. ಬಳಿಕ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು ಪುನಃ 2014ರಲ್ಲಿ ಮಕ್ಕಳೆಲ್ಲಾ ಸೇರಿ ತಾಯಿಯನ್ನು ನೋಡಿಕೊಳ್ಳುವರಾರು ಎಂದು ಚರ್ಚಿಸಿದರು.

ಜೀವನ ಪರ್ಯಂತ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡ ಮಗಳ ಹೆಸರಿಗೆ ತಾಯಿಯ ಪಾಲಿಗೆ ಸೇರಿದ ಮೂರು ಸರ್ವೆ ನಂಬದಲ್ಲಿರುವ ಜಮೀನುಗಳನ್ನು ವರ್ಗಾಯಿಸಿದರು. ಆಗಲೂ ಮೋಂತಿನಮ್ಮನಿಗೆ ಈ ಎಲ್ಲಾ ವಿಚಾರಗಳು ತಿಳಿಯದಿದ್ದರೂ ಮಕ್ಕಳೆಲ್ಲಾ ಸೇರಿ ತನ್ನ ಅಂತಿಮ ದಿನಗಳನ್ನು ಸುಖವಾಗಿ ಕಳೆಯಲು ವ್ಯವಸ್ಥೆಯೊಂದನ್ನು ರೂಪಿಸುತ್ತಿದ್ದಾರೆ ಎಂದು ಭಾವಿಸಿ ಅವರು ಹೇಳಿದ ದಾಖಲೆಗಳಿಗೆಲ್ಲಾ ಸಹಿ ಹಾಕಿದರು. ಆದರೆ ತಾಯಿಯ ಪಾಲನೆ ಮಾಡುತ್ತೇನೆಂದು ನಂಬಿಸಿದ ಮಗಳು ಔಷದೋಪಚಾರಕ ಹಣ ನೀಡದೆ ಹಿರಿಯ ಜೀವ ಪರದಾಡುವಂತೆ ಮಾಡಿದ್ದಾರೆ. ಈ ನಡುವೆ ತಾಯಿ ತನ್ನ ಪಾಲಿನ ಆಸ್ತಿಯನ್ನಾದರೂ ಮಾರಿ ಜೀವಿಸುತ್ತೇನೆಂದು ನಿರ್ಧರಿಸಿದ್ದರು. ಈ ವೇಳೆ ಮಕ್ಕಳು ತನ್ನ ಪಾಲಿಗೆ ಯಾವುದೇ ಆಸ್ತಿ ನೀಡದೆ ವಂಚಿಸಿರುವ ವಿಚಾರ ಅರ್ಥವಾಗಿದೆ.

ತನ್ನ ಬಳಿ ಉಳಿತಾಯವಾಗಲಿ, ಬೇರಾವ ಆದಾಯವಾಗಲಿ ಇಲ್ಲವಾದುದರಿಂದ ತನ್ನ ಪಾಲಿಗೆ ವಿಂಗಡಿಸಿದ್ದ ಆಸ್ತಿಯನ್ನು ಈ ಕೂಡಲೇ ತನಗೆ ಹಿಂದಿರುಗಿಸಬೇಕೆಂದು ಮೋಂತಿನಮ್ಮ ಮಂಗಳೂರಿನ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲದೆ  ಪೊಲೀಸ್ ಠಾಣೆಗೂ ದೂರು ನೀಡಿದರು. ಅದರಂತೆ  2018ರ ಮೇ 30 ರಂದು ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆ ಹಾಗೂ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಕರೆದ ಸಭೆಯಲ್ಲಿ ಭಾಗವಹಿಸಿದ ಮಕ್ಕಳು ತಾವು ಮಾಡಿದ ತಪ್ಪುಗಳನ್ನೆಲ್ಲಾ ಒಪ್ಪಿಕೊಂಡರು. ಅಲ್ಲದೆ ತಾಯಿಯ ಪಾಲಿಗೆ ಬಂದ ಜಮೀನುಗಳನ್ನೆಲ್ಲ ಆರು ತಿಂಗಳೊಳಗೆ ಆವರಿಗೆ ಹಿಂದಿರುಗಿಸಿ, ಆಕೆಯ ಹೆಸರಿನಲ್ಲಿಯೇ ಹಕ್ಕು ಪತ್ರ ಮಾಡಿಸಲು ಲಿಖಿತದಲ್ಲೇ ಒಪ್ಪಿಕೊಂಡರು. ಆದರೆ ಆರು ತಿಂಗಳು ಕಳೆದರೂ ಮಕ್ಕಳು ತನಗೆ ಆಸ್ತಿ ಹಿಂದಿರುಗಿಸದೇ ಇದ್ದಾಗ 2018ರ ಡಿ. 12 ರಂದು ಮೋಂತಿನಮ್ಮ ಅವರು, ಮಂಗಳೂರಿನ ಹಿರಿಯ ನಾಗರೀಕರ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದರು. ಈ ಕುರಿತು ತನಿಖೆ ನಡೆಸಿದ ನ್ಯಾಯ ಮಂಡಳಿಯು 2019ರ ಮಾ.5 ರಂದು ಆದೇಶವೊಂದನ್ನು ಹೊರಡಿಸಿ ಮಕ್ಕಳೆಲ್ಲ ಸೇರಿ ಪ್ರತಿ ತಿಂಗಳು ತಲಾ 2000 ರೂ.ಗಳನ್ನು ಕೊಡುವಂತೆ ಆದೇಶಿಸಿತು, ಇದರೊಂದಿಗೆ ಅವರ ಜಮೀನು ಹಿಂತಿರುಗಿಸುವ ಕುರಿತು ಟಿಪ್ಪಣೆ ನೀಡಿದ ನ್ಯಾಯ ಮಂಡಳಿ ಹಿರಿಯ ನಾಗರೀಕರಿಗೆ ಪೋಷಣೆ ಮಾಡದಿದ್ದಲ್ಲಿ ಮಾತ್ರ ಕಾಯಿದೆಯ 23ನೇ ನಿಯಮದಂತೆ ಆದೇಶ ಮಾಡುವುದು ಸಾಧ್ಯ” ಸ್ಪಷ್ಟನೆಯನ್ನೂ ನೀಡಿತ್ತು.

ಆದರೆ ನ್ಯಾಯ ಮಂಡಳಿ ಸ್ಪಷ್ಟ ಆದೇಶ ನೀಡಿ 6 ತಿಂಗಳು ಕಳೆದರೂ ಯಾವ ಮಕ್ಕಳೂ ನಿಯಮಿತವಾಗಿ ಮಾಶಾಸನ ನೀಡದೇ ಇರುವುದರಿಂದ ಮೋಂತಿನಮ್ಮ ಪುನಃ ನ್ಯಾಯ ಮಂಡಳಿಗೆ ದೂರು ನೀಡಿದರು. 2019ರ ಅ.14 ರಂದು ನ್ಯಾಯ ಮಂಡಳಿ ಮಂಗಳೂರಿನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತನ್ನ ಆದೇಶದ ಅಮಲ್ಜಾರಿಗೆ ಸೂಚಿಸಿತು. ಆದರೆ ನ್ಯಾಯ ಮಂಡಳಿಯ ಆದೇಶವನ್ನು ಜಾರಿಗೊಳಿಸಲು ಇದುವರೆಗೂ ಪೊಲೀಸ್ ಹಾಗೂ ಕಂದಾಯ ಇಲಾಖೆಗಳಿಂದ ಸಾಧ್ಯವಾಗಿಲ್ಲ, ಈ ನಡುವೆ ಮೋಂತಿನಮ್ಮನ ಐದು ಮಕ್ಕಳಲ್ಲಿ, ಮೂವರು ನ್ಯಾಯ ಮಂಡಳಿಯ ಅಧ್ಯಕ್ಷರಾದ ಸಹಾಯಕ ಆಯುಕ್ತರಿಗೆ ಪತ್ರ ಬರೆದು “ತಾಯಿಗೆ ಮಾಶಾಸನ ನೀಡುವಂತೆ ಪೆಪೊಲೀಸ್ ಹಾಗೂ ಕಂದಾಯ ಇಲಾಖೆಗಳ ಸಿಬ್ಬಂದಿಗಳಿಂದ ನೋಟಿಸುಗಳು ಬರುತ್ತಿದ್ದು ಇವೆಲ್ಲ ನಮಗೆ ಮಾನಸಿಕವಾಗಿ ಅತೀವ ವೇದನೆ ಮತ್ತು ಕಿರಿ ಕಿರಿ ಉಂಟು ಮಾಡುತ್ತಿವೆ ಎಂದು ಉತ್ತರಿಸಿ ತಾವು ತಾಯಿಯ ಪೋಷಣೆಗೆ ಹಣ ಕೊಡುವುದು ಅಸಾಧ್ಯ ಎಂದು ಲಿಖಿತದಲ್ಲಿ ನೀಡಿದ್ದಾರೆ.

ಇದೀಗ, ತನಗೆ ನ್ಯಾಯ ನೀಡುವಂತೆ ಮಂಗಳೂರಿನ ಜಿಲ್ಲಾಧಿಕಾರಿಯವರಿಗೆ ಮೇಲ್ಮನವಿ ನೀಡಲು ಪ್ರತಿಷ್ಠಾನದವತಿಯಿಂದ ಮೋಂತಿಯಮ್ಮನಿಗೆ ಕಾನೂನು ನೆರವು ನೀಡಲಾಗಿದೆ. ಆಕೆಗೆ ಸಂಪೂರ್ಣವಾಗಿ ನ್ಯಾಯ ಸಿಗುವ ತನಕ ಸಹಕಾರ ನೀಡಲು ಪ್ರತಿಷ್ಠಾನ ಬದ್ಧವಾಗಿದೆ ಎಂದು ತಿಳಿಸಿದರು.

7 thoughts on “ಉಡುಪಿ: ಆಸ್ತಿ ಲಪಟಾಯಿಸಿ ತಾಯಿಯನ್ನೇ ಬೀದಿ ಪಾಲು ಮಾಡಿದ ಮಕ್ಕಳು!

  1. ಇಂಥ ಮಕ್ಕಳು ಬೇಕಾ….. ತಾಯಿಯನ್ನು ಹೊರಗೆ ಹಾಕಿ ಚರ್ಚ್ ಗೆ ದೇವಸ್ಥಾನ ಗೆ ಹೋಗಿ ಏನು ಪ್ರಯೋಜನ…. ತಾಯಿಯ ಕೊನೆಯ ಕಾಲ ಸ್ಟೇಷನ್ ಕೋರ್ಟ್ ಹತ್ತುವ ಹಾಗೆ ಮಾಡುವ ಮಕ್ಕಳಿಗೆ ದೇವರು ಕೈ ಹಿಡಿಯುವರೆ

  2. Very well said Mr. Rajesh. ನಾನು ಕೂಡ catholic. ಆದರೆ ಇಂತಹ ಮನುಷರಿಂದ catholic relegion ಗೆ ದೊಡ್ಡ ಶೇಮ್.

  3. It all happens in DK . Nothing strange to me . Church priest kidnapped my parents ,grabbed property making us homeless .Same priest then neglects old parents and children took care of old parents .But Church sells property to Mullers and makes money .Nothing strange .Everything is possible if society keeps quiet and does not support the victims.

  4. Shameful act by children. Am wondering how could they do this to a mother whose carried them in her womb for 9 months, sacrificed to get them up? And how will they upbringing their children?

  5. Bible says honour your parents, you will have health, prosperity and long life. When children goes opposite to this, they will reap its fruits.

  6. Above is not true story. Monthinamma is in her house and her son is taking care. One daughter ws taking care of mother more than 23 years, also when mother was in sick-bed, she has taken care well
    . They issued Notice on her and sent her out of the house. Another daughter got deceived and no property share was given.
    Parish priest intervened in the situation with legal advisors but their efforts are in vain.

Leave a Reply

Your email address will not be published. Required fields are marked *

error: Content is protected !!