ಅಲೆವೂರು: 30ನೇ ವರ್ಷದ ಶಾಮ ಸುಂದರಿ ಟ್ರೋಫಿ 2021- ಉದ್ಘಾಟನೆ

ಅಲೆವೂರು: 30 ನೇ ವರ್ಷದ ಶಾಮ ಸುಂದರಿ ಟ್ರೋಫಿ 2021 ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್  ಪಂದ್ಯಾವಳಿಯನ್ನುಅಲೆವೂರಿನ ನೆಹರು ಕ್ರೀಡಾಂಗಣದಲ್ಲಿ ಲಯನ್ಸ್ ಕ್ಲಬ್ ಉಡುಪಿ ಇದರ ಅಧ್ಯಕ್ಷರಾದ ಲಯನ್ ವರ್ವಾಡಿ ಪ್ರಸಾದ ಶೆಟ್ಟಿ ಉದ್ಘಾಟಿಸಿದರು.

ವಿಷ್ಣುಮೂರ್ತಿ ಟ್ರಾವೆಲ್ಸ್ ಅಲೆವೂರು ಮಾಲಕರಾದ ರಾಮಚಂದ್ರ ಕೊಡಂಚ ಅಧ್ಯಕ್ಷತೆ ವಹಿಸಿ, ಸಂಘವು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಟವನ್ನು ಸಂಘಟಿಸುವಂತಾಗಲಿ ಎಂದು ಆಶಿಸಿದರು. ಮಹಿಳಾ ಕ್ರಿಕೆಟ್ ಆಟಗಾರ್ತಿ ಏಕ್ತಾ ಪಟೇಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಂಘದ ಗೌರವ ಅಧ್ಯಕ್ಷ ಹರೀಶ್ ಕಿಣಿ, ಅಧ್ಯಕ್ಷ ಗುರುರಾಜ್ ಸಾಮಗಾ, ಕಾರ್ಯದರ್ಶಿ ಅರುಣ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಗಳಾದ ಸುಧಕರ್ ಪೂಜಾರಿ, ಜಯ ಸೇರಿಗಾರ್, ನಿತ್ಯನಂದಾ ಅಂಚನ್, ಕ್ರಿಕೆಟ್ ತಂಡದ ನಾಯಕ ಸುದೀರ್ ಸೇರಿಗಾರ್, ಗೌರವ ಸಲಹೆಗಾರರದ ಮುರಳಿದರ್ ಭಟ್, ದಿನೇಶ್ ಕಿಣಿ , ಸತೀಶ್ ಪೂಜಾರಿ,ಶೇಖರ್ ಕಲಾಪ್ರತಿಭ ಉಪಸ್ತಿತರಿದ್ದರು. ಪ್ರತಾಪ ಕುಂದರ್ ಕಾರ್ಯಕ್ರಮ  ನಿರ್ವಹಿಸಿ, ದಯನಂದ ಅಂಚನ್ ವಂದಿಸಿದರು. 16 ತಂಡಗಳು ಭಾಗವಹಿಸಿವೆ.

Leave a Reply

Your email address will not be published. Required fields are marked *

error: Content is protected !!