ಉಡುಪಿ ಜಿಲ್ಲೆಯ ಆರ್ಥಿಕತೆಗೆ ಮಾಂಡವಿ ಬಿಲ್ಡರ್ಸ್ ನೆರವಾಗಿದೆ : ಶಾಸಕ ರಘುಪತಿ ಭಟ್

ಉಡುಪಿ(ಉಡುಪಿ ಟೈಮ್ಸ್ ವರದಿ): ನಗರದ ಕಲ್ಸOಕ-ಗುಂಡಿಬೈಲು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಸ್ಥೆ ನಿರ್ಮಿಸಿರುವ `ಮಾಂಡವಿ ಪ್ರಿನ್ಸ್ ಪ್ಯಾಲೇಸ್ ರೆಸಿಡೆನ್ಸಿಯಲ್ ಅಪಾರ್ಟ್‍ಮೆಂಟ್’ ಇಂದು ಉದ್ಘಾಟನೆ ಗೊಂಡಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಈ ನೂತನ ಅಪಾರ್ಟ್‍ಮೆಂಟ್‍ನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಕೆ. ರಘುಪತಿ ಭಟ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕಟ್ಟಡ ನಿರ್ಮಾಣ ಕೆಲಸಗಳು ನಿಂತು ಹೋದರೆ ನಿರುದ್ಯೋಗ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಜೆರ್ರಿ ವಿಲ್ಸನ್ ಡಯಾಸ್ ರವರ ಅಪಾರ್ಟ್‍ಮೆಂಟ್ ನಿರ್ಮಾಣ ಯೋಜನೆಯ ಮೂಲಕ ಉಡುಪಿಯ ಆರ್ಥಿಕತೆಗೆ ನೆರವಾಗುವ ಜೊತೆಗೆ ಒಂದಷ್ಟು ದುಡಿಯುವ ಕೈಗಳಿಗೆ ಕೆಲಸ ನೀಡಿದಂತಾಗಿದೆ ಎಂದರು.

ಜೆರ್ರಿ ವಿನ್ಸೆಂಟ್ ಡಯಾಸ್ ಅವರ 25 ವರ್ಷಗಳ ಸೇವೆಗೆ ಅಭಿನಂದನೆ ಸಲ್ಲಿಸಿದ ಅವರು, ಇವರ ಉದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದಿ 50 ಪೂರೈಸಿ ಮುನ್ನುಗ್ಗುವಂತಾಗಲಿ ಎಂದು ಶುಭ ಹಾರೈಸಿದರು. ಇದೇ ವೇಳೆ ಮಾತು ಮುಂದುವರೆಸಿದ ಅವರು ಅಪಾರ್ಟ್ ಮೆಂಟ್‍ಗಳ ನಿರ್ಮಾಣ ಯೋಜನೆ ಹೆಚ್ಚಾದಾಗ ಆ ಭಾಗದ ರಸ್ತೆ ಗಳು ಅಭಿವೃದ್ಧಿ ಹೊಂದುತ್ತವೆ. ಅದೇ ರೀತಿ ಕಟ್ಟಡ ಕಾಮಗಾರಿ ಸಮಾಗ್ರಿಗಳ ಪೂರೈಕೆ ನಿಂತು ಹೋದರೆ ಸಂಪೂರ್ಣ ಕಸ್ಟ್ರಕ್ಷನ್ ಕೆಲಸ ನಿಂತು ಹೋಗುತ್ತದೆ ಆದ್ದರಿಂದ ಕಟ್ಟಡ ಕಾಮಗಾರಿಗಳಿಗೆ ನೆರವಾಗಲು ಉಡುಪಿ ಜಿಲ್ಲೆಯಲ್ಲಿ 21 ಕ್ವಾರಿಗಳು ನಿನ್ನೆ ಸಂಜೆಯಿಂದಲೇ ಆರಂಭಗೊಂಡಿದ್ದು, ಜಲ್ಲಿಗಳ ಪೂರೈಕೆ ಆಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್‍ನ ಧರ್ಮಗುರು ವಂ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಆಶೀರ್ವಚನ ನೀಡಿದರು. ಈ ಸಂದರ್ಭ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಸ್ಥೆ ಜೆರ್ರಿ ವಿನ್ಸೆಂಟ್ ಡಯಾಸ್, ಅವರ ಪತ್ನಿ ಮೋಲಿ ಡಯಾಸ್ ಹಾಗೂ ಮಕ್ಕಳಾದ ಗ್ಲೆನ್ ಡಯಾಸ್, ಜಾಸನ್ ಡಯಾಸ್, ಡಾ. ಲಾರ ಡಯಾಸ್   ನಗರಸಭೆ ಸದಸ್ಯ ಸಂತೋಷ್ ಜತ್ತನ್ನ, ಉಜ್ವಲ್ ಡೆವಲಪರ್ಸ್‍ನ  ಪುರುಷೋತ್ತಮ ಪಿ. ಶೆಟ್ಟಿ, ಉದ್ಯಮಿ ನಾಗರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್  www.mandavibuilders.com  ಅನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!