ಮಂಗಳೂರು: ಹವಾಲಾ ಹಣ ಎಗರಿಸಿದ್ದ ಐವರು ದರೋಡೆಕೋರರ ಬಂಧನ
ಮಂಗಳೂರು: ಸ್ಕೂಟರ್ ಸವಾರನಿಂದ 16.2 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದ ಐವರನ್ನು ಮಂಗಳೂರು ಪೋಲೀಸರು ಬಂಧಿಸಿದ್ದಾರೆ.
“ಬಂಧಿತರು ಉಳ್ಳಾಲ ಮೂಲದ ಮೊಹಮ್ಮದ್ ರಿಫಾತ್, ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿರುವ ಫೈಸಲ್ನಗರದ ಅಶ್ಫಾಕ್, ಬಿ.ಸಿ. ರೋಡ್ ನಲ್ಲಿ ಮರಳು ವ್ಯಾಪಾರ ನಡೆಸುತ್ತಿರುವ ಜಾಫರ್ ಸಾದಿಕ್, ದುಬೈನಿಂದ ಹಿಂದಿರುಗಿದ್ದ ಮೊಹಮ್ಮದ್ ಇಸ್ಮಾಯಿಲ್ ಮತ್ತು ಪಡುಬಿದ್ರಿಯ ಚಾಲಕನಾದ ಮಯ್ಯದ್ದಿ ಬಂಧಿತರು.
ಶುಕ್ರವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ಶಶಿ ಕುಮಾರ್, “ಅವರಿಂದ 95,000 ರೂ, ಬೈಕು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಕದ್ದಿರುವ ಹಣ ಹವಾಲಾ ದಂಧೆಗೆ ಸೇರಿದ್ದಾಗಿತ್ತು. ಎಂದರು.
ಹವಾಲಾ ದಂಧೆಯ ಕಿಂಗ್ ಪಿನ್ ಅನ್ನು ಇನ್ನೂ ಬಂಧಿಸಲಾಗಿಲ್ಲ. ಅವರು ಏಜೆಂಟರಾಗಿರುವ ದೂರುದಾರ ಅಬ್ದುಲ್ ಸಲಾಂಗೆ ದೊಡ್ಡ ಮೊತ್ತದ ಹಣವನ್ನು ಹಸ್ತಾಂತರಿಸಿದ್ದರು. ಅಬ್ದುಲ್ ಆಯಾ ಪಾರ್ಟಿಗಳಿಗೆ ಹಣವನ್ನು ತಲುಪಿಸುತ್ತಿದ್ದ.ಆರೋಪಿಗಳಲ್ಲಿ ಒಬ್ಬನಾದ ಇಸ್ಮಾಯಿಲ್, ದರೋಡೆ ಸೀನ್ ಸೃಷ್ಟಿಸುವ ಯೋಜನೆಯಲ್ಲಿ ಇತರರೊಡನೆ ಸೇರಿಕೊಂಡಿದ್ದನು. ದೂರುದಾರನು ತನ್ನ ಕುಟುಂಬದೊಂದಿಗೆ ಪರಾರಿಯಾಗಿದ್ದಾನೆ. ಈ ಪ್ರಕರಣದಲ್ಲಿ ಇನ್ನೂ 6 ರಿಂದ 7 ಜನರನ್ನು ಬಂಧಿಸಬೇಕಿದೆ. ತನಿಖೆ ಪ್ರಗತಿಯಲ್ಲಿದೆ. ಮೊಹಮ್ಮದ್ ರಿಫಾತ್ ವಿರುದ್ಧ ಮೂರು, ಅಶ್ಫಾಕ್ ವಿರುದ್ಧ ಮೂರು ಮತ್ತು ವಿವಿಧ ಪೊಲೀಸ್ ಠಾಣೆಗಳಲ್ಲಿ ಇಸ್ಮಾಯಿಲ್ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ತನ್ನ ಸೊಸೆಯ ಮದುವೆಗೆ ಬಟ್ಟೆ ಮತ್ತು ಚಿನ್ನದ ಆಭರಣಗಳನ್ನು ಖರೀದಿಸುವುದಕ್ಕಾಗಿ ಈ ನಗದನ್ನು ಕೊಂಡೊಯ್ಯುತ್ತಿದ್ದುದ್ದಾಗಿ ದೂರುದಾರ ಹೇಳಿಕೊಂಡಿದ್ದ. ಆದರೆ ಅಂತಹಾ ಯಾವ ಮದುವೆಗಳೂ ನಡೆಯಲಿಲ್ಲ. ಇದು ಹವಾಲಾ ಹಣವಾಗಿತ್ತು.”
“ದೂರುದಾರ ಅಬ್ದುಲ್ ಸಲಾಮ್ ಈಗಾಗಲೇ ಹಲವಾರು ಬಾರಿ ಇಂತಹ ವಹಿವಾಟುಗಳನ್ನು ಮಾಡಿದ್ದಈ ಬಾರಿ ಅದು 16.2 ಲಕ್ಷ ರೂ. ಮೊತ್ತವಾಗಿತ್ತು.ಹವಾಲಾ ವಹಿವಾಟಿಗೆ ಏಜೆಂಟ್ ಮತ್ತು ಉಪ-ಏಜೆಂಟರಿಗೆ ಕಿಂಗ್ ಪಿನ್ 8,000 ನೀಡುತ್ತಿದ್ದ.ಘಟನೆ ನಡೆದ ಕೂಡಲೇ 2 ರಿಂದ 3 ಆರೋಪಿಗಳು ದುಬೈಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿಯೂ ನಮಗೆ ಬಂದಿದೆ. ಇಸ್ಮಾಯಿಲ್ ಮತ್ತು ಅಶ್ಫಾಕ್ ಕೊಆರ್ಡಿನೇಟರ್ ಗಳಾಗಿದ್ದು ರಿಫಾತ್, ಸಾದಿಕ್ ದರೋಡೆಗೋರರಾದರೆ ಮಯ್ಯಾಡಿ ಏಜೆಂಟ್ ಆಗಿದ್ದಾನೆ.” ಅವರು ವಿವರಿಸಿದ್ದಾರೆ.