ಕುಂದಾಪುರ: 6 ವರ್ಷದ ಬಾಲಕನ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ನಿರೀಕ್ಷೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಕುಂದಾಪುರದ ಪಡುಕೋಣೆಯ 6 ವರ್ಷದ ಪುಟ್ಟ ಬಾಲಕನೊಬ್ಬ ತನ್ನ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾನೆ. ಪಡುಕೋಣೆಯ. ರಾಜೇಂದ್ರ ಆಚಾರ್ಯ ಹಾಗೂ ಸುಮಂಗಳ ಆಚಾರ್ಯ ಅವರ ಮಗನಾದ ರಿಷಿಕ್ ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓಡುತ್ತಿದ್ದಾನೆ.
ಈತ 8 ತಿಂಗಳ ಮಗುವಾಗಿದ್ದಾಗಿನಿಂದ ತಲಸ್ಸಿಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತೀಚಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತಪಾಸಣೆ ನಡೆಸಿದ ವೈದ್ಯರು ಅಸ್ಥಿಮಜ್ಜೆ ( ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್) ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ತಿಳಿಸಿರುತ್ತಾರೆ.
ಅಲ್ಲದೆ ಈ ಚಿಕಿತ್ಸೆಗೆ 35 ಲಕ್ಷದಿಂದ 40 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದೂ ವೈದ್ಯರು ತಿಳಿಸಿದ್ದಾರೆ. ಇದೀಗ ಕೂಲಿ ಕಾರ್ಮಿಕರಾಗಿರುವ ಬಾಲಕನ ಪೋಷಕರು ಚಿಕಿತ್ಸೆಗೆ ವೈದ್ಯರು ಸೂಚಿಸಿರುವ ಭಾರೀ ಮೊತ್ತದ ಹಣವನ್ನು ಹೊಂದಿಸಲು ಸಾಧ್ಯವಾಗದೆ ಅಸಾಹಯಕರಾಗಿದ್ದಾರೆ. ತಮ್ಮ ಮಗನ ಚಿಕಿತ್ಸೆಗೆ ಕೊಡುಗೈ ದಾನಿಗಳು ನೆರವು ನೀಡುವರೇ ಎಂಬ ನಿರೀಕ್ಷೆಯಲ್ಲಿ ದಾನಿಗಳತ್ತ ಸಹಾಯ ಹಸ್ತ ಚಾಚಿದ್ದಾರೆ.
ಈ ಪುಟ್ಟ ಬಾಲಕನ ಚಿಕಿತ್ಸೆಗೆ ನೆರವು ನೀಡಲು ಇಚ್ಚಿಸುವವರು ಬಾಲಕನ ತಾಯಿಯ ಖಾತೆಗೆ ಹಣ ಜಮೆ ಮಾಡುವ ಮೂಲಕ ನೆರವು ನೀಡಬಹುದಾಗಿದೆ.
Acoount Number: 81920100004582
Name : Sumangala IFSC : BARBOVJNADA
Bank Name : Bank Of Baroda Nada
Phone pay and Google pay
Mobile : 8105877136