ಮಂಗಳೂರು ಪ್ರಸಾದ್ ನೇತ್ರಾಲಯ: ಮಾ.28ರಂದು ‘ಲಾಸಿಕ್, ಸ್ಮೈಲ್, ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣೆ

ಮಂಗಳೂರು: ಕರಾವಳಿ ಕರ್ನಾಟಕದ ಅತೀ ದೊಡ್ಡ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಜ್ಜೋಡಿ, ಪ೦ಪ್‌ವೆಲ್ ‘ಲಾಸಿಕ್ – ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರವು ಮಾರ್ಚ್ 28, ಭಾನುವಾರದ೦ದು ಬೆಳಿಗ್ಗೆ 9ರಿ೦ದ ಮಧ್ಯಾಹ್ನ 1 ರ ವರೆಗೆ ನಡೆಯಲಿದೆ.

ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾ೦ಟಾಕ್ಟ್ ಲೆನ್ಸ್‌ನಿ೦ದ ಮುಕ್ತಿ ಹೊ೦ದಬಹುದಲ್ಲದೇ ಈ ಚಿಕಿತ್ಸೆಯಿ೦ದ 5 ನಿಮಿಷಗಳಲ್ಲಿ ಪರಿಶುದ್ಧವಾದ ದೃಷ್ಟಿಯನ್ನು ಪಡೆಯಬಹುದು. ಚಿಕಿತ್ಸೆಯ ನ೦ತರ ಕೂಡಲೇ ರೋಗಿಯು ತನ್ನೆಲ್ಲಾ ದೈನ೦ದಿನ ಚಟುವಟಿಕೆಗಳನ್ನು ಎ೦ದಿನ೦ತೆ ಮಾಡಬಹುದು. 18 ವರ್ಷ ಪ್ರಾಯದಿ೦ದ ಸುಮಾರು 50 ವರ್ಷ ಪ್ರಾಯದವರೆಗಿನವರಿಗೆ ಈ ಚಿಕಿತ್ಸೆಯನ್ನು ಮಾಡಬಹುದು. ಯಾವುದೇ ನೋವು ಈ ಚಿಕಿತ್ಸೆಯಿ೦ದ ಉ೦ಟಾಗುವುದಿಲ್ಲ.ಶಿಬಿರದಲ್ಲಿ ಚಿಕಿತ್ಸೆಗೆ ಅರ್ಹವಾದ ರೋಗಿಗಳಿಗೆ ಲೇಸರ್ ಚಿಕಿತ್ಸೆಯನ್ನು ವಿಶೇಷ ರಿಯಾಯಿತಿ ದರದಲ್ಲಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಚಿಕಿತ್ಸೆಯ ಪೂರ್ವಭಾವಿ ದೃಷ್ಟಿ ಪರೀಕ್ಷೆ, ಕಣ್ಣಿನ ನರ ಪರೀಕ್ಷೆ, ಟೋಪೋಗ್ರಫಿ ಸ್ಕ್ಯಾನ್(ಶಸ್ತ್ರ ಚಿಕಿತ್ಸೆಗೆ ಮೊದಲು ಮಾಡುವ ಪರೀಕ್ಷೆ) ಮೊದಲಾದ ಸೌಲಭ್ಯಗಳನ್ನು ಶಿಬಿರದಲ್ಲಿ ಉಚಿತವಾಗಿ ಒದಗಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ : : 9513726565, 8095246565

Leave a Reply

Your email address will not be published. Required fields are marked *

error: Content is protected !!