ಹಿರಿಯಡ್ಕ: ಮದ್ದಳೆಗಾರ ಚಂದ್ರಶೇಖರ ಆಚಾರ್ಯರಿಗೆ ಸನ್ಮಾನ
ಹಿರಿಯಡ್ಕ: ಶ್ರೀದಶಾವತಾರ ಯಕ್ಷಗಾನ ಕಲಾ ಮಂಡಳಿ ಕಾಜಾರಗುತ್ತು ಇದರ 34ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮದ್ದಳೆ ಮಾಂತ್ರಿಕ ದಿ.ಗೋಪಾಲ ರಾವ್ ಶಿಷ್ಯರ ಸಾರಥ್ಯದಲ್ಲಿ ರುಕ್ಮಾಂಗದ ಚರಿತ್ರೆ ಮತ್ತು ರತಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗಗಳು ಕಾಜಾರಗುತ್ತು ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಈ ವೇಳೆ, ಮದ್ದಳೆಗಾರ ಚಂದ್ರಶೇಖರ ಆಚಾರ್ಯ ಮತ್ತು ವಿನೋದಾ ಆಚಾರ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಎಂ.ಅಚ್ಯುತ್ ನಾಯಕ್, ಕಾರ್ಯದರ್ಶಿ ಎಂ.ವಿಠಲ ನಾಯಕ್, ಯಕ್ಷಗಾನ ಭಾಗವತ, ನಿರ್ದೇಶಕ ಕೆ. ಅನಂತಪದ್ಮನಾಭ ಭಟ್, ಮಂಜುನಾಥ ಭಟ್, ಚಂದ್ರಶೇಖರ ಆಚಾರ್, ಜಗದೀಶ ಆಚಾರ್ಯ ಕುತ್ಪಾಡಿ, ದೇವೇಂದ್ರ ನಾಯಕ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.