ಉಡುಪಿ: ಜಾಗ ಇರುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ
ಉಡುಪಿ: ಖರೀದಿಸಲು ಜಾಗ ಇರುವುದಾಗಿ ವಂಚಿಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಬಗ್ಗೆ ಮಣಿಪಾಲದ ಅನಂತ ನಗರ ನಿವಾಸಿ ಸುಂದರ ರಾಮ ನಾಯಕ್ ಎಂಬವರು ದೂರು ನೀಡಿದ್ದು, ಕೊರಂಗ್ರಪಾಡಿಯ ಸಂಜಯ್ ಶೆಟ್ಟಿ, ಬಂಟ್ವಾಳದ ಧನಂಜಯ್ ಜೈನ್ ಎಂಬವರು ಮಣಿಪಾಲದ ಅನಂತ ನಗರ ನಿವಾಸಿ ಸುಂದರ ರಾಮ ನಾಯಕ್ ಅವರ ಕಚೇರಿಗೆ ಭೇಟಿ ನೀಡಿ ಮೂಡಬಿದರೆಯಲ್ಲಿ ಜಾಗ ಇರುವುದಾಗಿ ತಿಳಿಸಿ ಜಾಗದ ಬಗ್ಗೆ ಮಾಹಿತಿ ನೀಡಿದ್ದರು.
ಅಲ್ಲದೆ ಜಾಗದ ವಿಚಾರವಾಗಿ ಸುಂದರ ರಾಮ ನಾಯಕ್ ಅವರು ಮುಂಗಡವಾಗಿ 1,25,000 ರೂ ನೀಡಿದ್ದರು. ಬಳಿಕ ಸುಂದರ ಅವರಿಂದ 20,00,000 ರೂ ಹಣವನ್ನು ಆರೋಪಿಗಳು ಪಡೆದಿದ್ದಾರೆ. ಆದರೆ ಈ ಜಾಗವನ್ನು ಸುಂದರ ಅವರ ಹೆಸರಲ್ಲಿ ನೋಂದಣಿ ಮಾಡಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಆರೋಪಿಗಳಲ್ಲಿ ವಿಚಾರಿಸಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ನಿನಗೆ ಜಾಗ ಕೊಡುವುದಿಲ್ಲ ಹಣವೂ ನೀಡುವುದಿಲ್ಲ. ನಿನಗೆ ಮೋಸ ಮಾಡುವ ಉದ್ದೇಶದಿಂದಲೇ ನಿನ್ನೊಂದಿಗೆ ವ್ಯವಹಾರ ಮಾಡಿ ಬೇರ ಕಡೆಗಳಲ್ಲಿ ಅಡವು ಹಾಕಿ ಸಾಲ ಮಾಡಿರುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.