ಕೋವಿಡ್ ನಿಯಮ ಉಲ್ಲಂಘನೆ, 4 ಅಂಗಡಿಗೆ ರೂ.5,000 ದಂಡ- ಸಾರ್ವಜನಿಕರು ಸಹಕರಿಸಿದರೆ ಲಾಕ್ ಡೌನ್ ಅಗತ್ಯವಿಲ್ಲಾ: ಉಡುಪಿ ಡಿಸಿ
ಉಡುಪಿ: ಸಾರ್ವಜನಿಕರು ಸಹಕರಿಸಿದರೆ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಅಗತ್ಯ ಬರುವುದಿಲ್ಲ. ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ. ಉಡುಪಿ ನಗರದಲ್ಲಿ ಇಂದು ಮಾಸ್ಕ್ ಕುರಿತು ಜಾಗೃತಿ ಕಾರ್ಯಾಚರಣೆ ವೇಳೆ ಮಾತನಾಡಿದ ಅವರು, ಕೋವಿಡ್ ನಿಯಮ ಉಲ್ಲಂಘಿಸುವವರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡುವುದಿಲ್ಲ.
ಗ್ರಾಹಕರಿಗೆ ಅಂಗಡಿಗೆ ಪ್ರವೇಶ ಮಾಡುವ ಮೊದಲು ಮಾಸ್ಕ್ ಹಾಕಿಕೊಂಡೇ ಬರಲು ಅಂಗಡಿ ಮಾಲಕರು ಸೂಚಿಸಬೇಕು. ಎಲ್ಲಾ ಅಧಿಖಾರಿಗಳ ಸಭೆಯನ್ನು ಕರೆದು ಕೋವಿಡ್ ನಿಯಮವನ್ನು ಪಾಲಿಸುವ ಕುರಿತು ಸೂಚನೆ ನೀಡಲಾಗಿದೆ.
ನಗರದ ಜನತೆಗೆ ಮಾಸ್ಕ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಕೈಗೊಂಡಿದ್ದೇವೆ. ಅದರಂತೆ ನಾಲ್ಕು ಅಂಗಡಿಗಳ ಮಾಲಿಕರಿಗೆ ತಲಾ 5,000 ದಂತೆ ದಂಡ ವಿಧಿಸಲಾಗಿದೆ. ಹಾಗೂ ಸಾರ್ವಜನಿಕರಿಗೂ ರೂ.100 ದಂಡ ವಿಧಿಸಲಾಗಿದೆ.
ಮಾಸ್ಕ್ ಧರಿಸದಿರುವವರಿಗೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ಯಾವುದೇ ಖಾಸಗಿ , ಸಾರ್ವಜನಿಕ, ಧಾರ್ಮಿಕ , ರಾಜಕೀಯ ಸಮಾರಂಭಗಳನ್ನು ನಡೆಸುವಂತಿಲ್ಲ. ಎಲ್ಲಾ ರೀತಿಯ ಸಭೆ ಸಮಾರಂಭಗಳಲ್ಲೂ ಸರಕಾರದ ಮಾರ್ಗ ಸೂಚಿಯಲ್ಲಿ ತಿಳಿಸಿರುವಷ್ಟು ಜನರು ಮಾತ್ರ ಭಾಗವಹಿಸಬೇಕು.
ಇನ್ನು ಈ ಕಾರ್ಯಕ್ರಮ ಗಳಿಗೆ ಅನುಮತಿ ನೀಡುವಾಗ ತಹಶಿಲ್ದಾರರು , ನಿರ್ಧಿಷ್ಟ ಸಮಾರಂಭ ದ ಉಸ್ತುವಾರಿ ಯಾರು ನೋಡಿಕೊಳ್ಳುತ್ತಾರೆ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಿಸುವಲ್ಲಿ ವಿಫಲರಾದರೆ ಅಂತಹ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದರು ಇನ್ನು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು ಸಾರ್ವಜನಿಕರು ಈ ಹಿಂದೆ ಕೊರೋನಾ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮ ಪಾಲಿಸಿದಂತೆ ಈ ಭಾರಿಯೂ ಜಿಲ್ಲೆಯ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರು ಮನೆಯಿಂದ ಹೊರಡುವ ಮುನ್ನ ಮಾಸ್ಕ್ ಹಾಕಿಕೊಂಡೇ ಹೊರಡಬೇಕು.
ಸಾರ್ವಜನಿಕರು ಸಹಕರಿಸಿದರೆ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಅಗತ್ಯ ಬರುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಜೊತೆಗೆ ಕ್ರಿಮಿಲ್ ಕೇಸು ಕೂಡಾ ದಾಖಲಿಸಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ಒಟ್ಟು 28 ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಕಂಟೋನ್ಮೆಂಟ್ ಝೋನ್ ನಲ್ಲಿ ರುವ ಎಂಐಟಿಯಲ್ಲಿ 7 ಪ್ರಕರಣ ಗಳು ಪತ್ತೆಯಾಗಿದೆ ಎಂದು ತಿಳಿಸಿದರು.