ಹೃದಯಾಘಾತದಿಂದ ಪಿಯುಸಿ ವಿದ್ಯಾರ್ಥಿನಿ ಮೃತ್ಯು
ಪುತ್ತೂರು: ಹೃದಯಾಘಾತದಿಂದ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಬೆಳ್ಳಿಪ್ಪಾಡಿಯಲ್ಲಿ ಇಂದು ನಡೆದಿದೆ.
ಶ್ರೇಯಾ ಪಕ್ಕಳ (16 ) ಮೃತಪಟ್ಟ ವಿದ್ಯಾರ್ಥಿನಿ. ಇವರು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಕುಂಡಾಪು ಪದ್ಮ ಪಕ್ಕಳ ಹಾಗೂ ಉಮಾವತಿ ದಂಪತಿಯ ಎರಡನೇ ಮಗಳಾಗಿದ್ದು, ವಿವೇಕಾನಂದ ಕಾಲೇಜಿನ ಪಿಯುಸಿ ವಿಜ್ಞಾನ ವಿಭಾಗದ ಓದುತ್ತಿದ್ದರು. ಆರೋಗ್ಯವಾಗಿದ್ದ ಶ್ರೇಯಾರಿಗೆ ಏಕಾಏಕಿ ಇಂದು ಮುಂಜಾನೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.