67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ತುಳು ಚಿತ್ರ -ಪಿಂಗಾರ, ಕನ್ನಡ ಚಿತ್ರ- ಅಕ್ಷಿ ಅತ್ಯುತ್ತಮ ಚಲನಚಿತ್ರ
ನವದೆಹಲಿ: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ ‘ಅಕ್ಷಿ’ ಅತ್ಯುತ್ತಮ ಚಲನಚಿತ್ರ ಪುರಸ್ಕಾರಕ್ಕೆ ಪಾತ್ರವಾಗಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರ್, ಹಿಂದಿಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ಕಾರಣದಿಂದ ಪ್ರಶಸ್ತಿ ಘೋಷಣೆಯಲ್ಲಿ ವಿಳಂಬವಾಗಿತ್ತು. ಸೋಮವಾರ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಯಿತು. ನಿತೇಶ್ ತಿವಾರಿ ನಿರ್ದೇಶನದ ಚಿಚೋರ್ ಚಿತ್ರದಲ್ಲಿ ಶ್ರದ್ದಾ ಕಫೂರ್, ವರುಣ್ ಶರ್ಮಾ ಅಭಿನಯಿಸಿದ್ದರು.
ವಿಶೇಷ ಚಿತ್ರಗಳ ವಿಭಾಗ- ಬಿರಿಯಾನಿ (ಮಲಯಾಳಂ) ಜೊನಕಿ ಪೊರುವಾ (ಅಸ್ಸಾಂ) ಲತಾ ಭಗವಾನ್ ಕರೇ (ಮರಾಠಿ)ಪಿಕಾಸೊ (ಮರಾಠಿ)
ಇತರ ಭಾಷೆಗಳ ಅತ್ಯುತ್ತಮ ಚಲನಚಿತ್ರಗಳು
ಅತ್ಯುತ್ತಮ ತುಳು ಚಿತ್ರ – ಪಿಂಗಾರ
ಅತ್ಯುತ್ತಮ ತೆಲುಗು ಚಿತ್ರ- ಜೆರ್ಸಿ
ಅತ್ಯುತ್ತಮ ತಮಿಳು ಚಿತ್ರ – ಅಸುರನ್
ಅತ್ಯುತ್ತಮ ಮಲಯಾಳಂ ಚಿತ್ರ – ಕಲ್ಲಾ ನೋಟಂ
ಅತ್ಯುತ್ತಮ ಕನ್ನಡ ಚಿತ್ರ- ಅಕ್ಷಿ
ಅತ್ಯುತ್ತಮ ಹಿಂದಿ ಚಿತ್ರ-ಚಿಚೋರ್
ಅತ್ಯತ್ತಮ ಬೆಂಗಾಲಿ ಚಿತ್ರ-ಗುಮ್ನಾಮಿ
ಅತ್ಯುತ್ತಮ ನಟ ಪ್ರಶಸ್ತಿಯನ್ನು ಧನುಷ್ ( ಅಸುರನ್ ) ಹಾಗೂ ಮನೋಜ್ ಬಾಜಪೇಯಿ( ಬೋನ್ಸ್ಲೇ ) ಚಿತ್ರಕ್ಕೆ ಜಂಟಿಯಾಗಿ
ಪಡೆದುಕೊಂಡಿದ್ದಾರೆ. ಇನ್ನೂ ಮಣಿಕರ್ಣಿಕಾ ಮತ್ತು ಪಿಂಗಾ ಸಿನಿಮಾಕ್ಕಾಗಿ ಕಂಗನಾ ರಣಾವತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಮಲಯಾಳಂ ಸಿನಿಮಾ ಜಲ್ಲಿಕಟ್ಟು ಅತ್ಯುತ್ತಮ ಛಾಯಾಗ್ರಾಹಣ, ಬಾರ್ಡೋ -ಅತ್ಯುತ್ತಮ ಹಿನ್ನೆಲೆ ಗಾಯಕಿ, ಕೇಸರಿ – ಅತ್ಯುತ್ತಮ ಗಾಯಕ, ವಿಜಯ್ ಸೇತುಪತಿ- ಅತ್ಯುತ್ತಮ ಪೋಷಕ ನಟ, ಬಹತ್ತರ್ ಹೊರಿಯನ್- ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.