ಉಡುಪಿ: ಜಿಲ್ಲೆಯಲ್ಲಿ 113, ಮಣಿಪಾಲ 72 ವಿದ್ಯಾರ್ಥಿಗಳಲ್ಲಿ ಪಾಸಿಟಿವ್

ಉಡುಪಿ: (ಉಡುಪಿ ಟೈಮ್ಸ್ ವರದಿ) ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರಂಭವಾಗಿದ್ದು ಜಿಲ್ಲೆಯಲ್ಲಿ ಆರಂಭದಲ್ಲಿಯೇ ಕೊರೋನಾ ಪ್ರಕರಣಗಳು  ಮೂರಂಕಿಯಲ್ಲಿ ಪತ್ತೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಇಂದು (ಮಾ.22)  ಒಂದೇ ದಿನ ಜಿಲ್ಲೆಯಲ್ಲಿ 113 ಪ್ರಕರಣಗಳು ಪತ್ತೆಯಾಗಿದೆ.‌ ಈ ಪೈಕಿ ಉಡುಪಿಯಲ್ಲಿ 84, ಕುಂದಾಪುರ ದಲ್ಲಿ 10, ಕಾರ್ಕಳದಲ್ಲಿ 18 ಮತ್ತು ಹೊರ ಜಿಲ್ಲೆಯ 1 ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸದ್ಯ 439 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಈವರೆಗೆ 3,97,783 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 24328 ಮಂದಿಯಲ್ಲಿ  ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ನಿಂದ 23699 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಡಿಶ್ಚಾರ್ಜ್ ಆಗಿದ್ದು, 190 ಮಂದಿಯನ್ನು ಕೊರೋನಾ ಸೋಂಕು ಬಲಿ ಪಡೆದುಕೊಂಡಿದೆ. ಸದ್ಯ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಗಳು ಏರುತ್ತಿದ್ದರೂ ಸರಕಾರ, ಜಿಲ್ಲಾಡಳಿತದ ಆರೋಗ್ಯ ಸೂಚಿಯನ್ನು ಪಾಲಿಸುವ ಮೂಲಕ ಸೋಂಕಿನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದಾಗಿದೆ. ಹಾಗಾಗಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸಿ ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!