ಕಾಂಗ್ರೆಸ್ ಬೆಲೆ ಏರಿಕೆಯನ್ನೇ ಹಿಡಿದು ಸರಕಾರವನ್ನು ನಿಂದಿಸುತ್ತಿದೆ: ಕುಯಿಲಾಡಿ ಸುರೇಶ ನಾಯಕ್
ಉಡುಪಿ: (ಉಡುಪಿ ಟೈಮ್ಸ್ ವರದಿ)ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಅಲೆವೂರು ಆಶ್ರಯದಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣಾ ಪೂರ್ವಭಾವಿಯಾಗಿ ಬೃಹತ್ ಕಾರ್ಯಕರ್ತರ ಸಭೆ ಅಲೆವೂರು ಪಂಚಾಯತ್ ಕ್ರೀಡಾಂಗಣದಲ್ಲಿ ನಡೆಯಿತು.
ಸಮಾವೇಶವನ್ನು ಕಾಪು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಿ ಮಾತನಾಡಿದ ಇವರು, ರಾಜಕೀಯಾ ಪಕ್ಷ ಎಂದರೆ ಸೋಲು ಗೆಲುವು ಸಾಮಾನ್ಯ, ಈ ಹಿಂದೆ ಜನ ಸಂಘ ಇದ್ದಾಗ ಕೂಡ ಈಡೀ ದೇಶದಲ್ಲಿ ಕೇವಲ ಎರಡು ಸಂಸದರು ಇದ್ದ ಸಮಯದಿಂದ ಹಿಡಿದು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮೆಚ್ಚಿ ಸಂಪೂರ್ಣ ಬಹುಮತ ತರುವಲ್ಲಿ ಕಾರ್ಯಕರ್ತರ ಶ್ರಮ ಇದೆ. ಕಾರ್ಯಕರ್ತರೆ ಪಕ್ಷದ ಬೆನ್ನೆಲುಬು, ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಮನೆ ಮನೆ ತಲುಪಿಸಿ ಅದರ ಸದುಪಯೋಗಪಡಿಸಿಕೊಳ್ಳುವಂತೆ ಜನಸಾಮಾನ್ಯರಿಗೆ ತಿಳಿ ಹೇಳುವ ಕೆಲಸ ಮಾಡಿ, ಪಕ್ಷವನ್ನು ಸದೃಢಗೊಳಿಸಬೇಕಾದ್ದು ಕಾರ್ಯಕರ್ತರ ಜವಾಬ್ದಾರಿ ಎಂದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮಾತನಾಡಿ, ಕಾಂಗ್ರೆಸ್ ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಬೆಲೆ ಏರಿಕೆಯ ವಿಷಯವನ್ನು ಹಿಡಿದು ಕೇಂದ್ರ ಸರಕಾರವನ್ನು ನಿಂದಿಸುವ ಕೆಲಸ ಮಾಡುತ್ತಿದೆ. ಅದಕ್ಕೆಲ್ಲ ನಮ್ಮ ಕಾರ್ಯಕರ್ತರು ಸರಿಯಾದ ಉತ್ತರ ನೀಡಬೇಕು. ಪ್ರಸ್ತುತ ದೇಶ ಕೊರೋನಾ ಲಾಕ್ ಡೌನ್ ನಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೂ ಕೇಂದ್ರ, ರಾಜ್ಯ ಸರಕಾರ ಕೃಷಿಕರ ಖಾತೆಗೆ ವಾರ್ಷಿಕ ಹತ್ತು ಸಾವಿರ ರೂ., ರೋಗಿಗಳ ಚಿಕಿತ್ಸೆಗಾಗಿ ಆಯುಷ್ಯಮಾನ್ ಭಾರತ್ ಯೋಜನೆ, ಜನ್ ಧನ್ ಖಾತೆ ಸಹಾಯ ಧನ ವಿತರಿಸಿದೆ, ಮಾತ್ರವಲ್ಲದೆ ಕೊರೋನಾ ಲಾಕ್ ಡೌನ್ ಸಂದರ್ಭ ಉಚಿತ ಆಹಾರ ಸಾಮಾಗ್ರಿ ವಿತರಿಸಿದೆ. ಇದೆಲ್ಲವನ್ನು ಕಾರ್ಯಕರ್ತರು ಸರಕಾರ ಟೀಕಿಸುವ ವಿರೋಧ ಪಕ್ಷಗಳಿಗೆ ಹೇಳ ಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಯುವಮೋರ್ಚಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಶೋಕ ಶೆಟ್ಟಿಗಾರ್ ವಹಿಸಿದ್ದರು. ಸಭೆಯಲ್ಲಿ, ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಕಾರ್ ಹೆಗ್ಡೆ, ಕಾಪು ಮಂಡಲ ಪ್ರಭಾರಿ ಯಶ್ಪಾಲ್ ಸುವರ್ಣ, ಯುವಮೊರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಸಚಿನ್ ಸುವರ್ಣ, ಅಶೋಕ್ ಕುಮಾರ್, ಕಿಶನ್ ಅಲೆವೂರು, ಉಮೇಶ್ ಶೆಟ್ಟಿ ಅಲೆವೂರು ಉಪಸ್ಥಿತರಿದ್ದರು.
ಸಮಾರಂಭದ ಬಳಿಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ‘ಶಿವದೂತೆ ಗುಳಿಗೆ’ ವಿಭಿನ್ನ ಶೈಲಿಯ ತುಳು ನಾಟಕದ ಪ್ರದರ್ಶನ ನಡೆಯಿತು.
Attachments area
ReplyReply allForward |