ಕಾಪು: ಸುಗ್ಗಿ ಮಾರಿ ಪೂಜೆ ಮಾ.23 – 24 ರಂದು ಡ್ರೈ ಡೇ ಘೋಷಣೆ

ಉಡುಪಿ: ಕಾಪುವಿನ ಮೂರು ಮಾರಿಗುಡಿಯಲ್ಲಿ ಮಾ.23 ಮತ್ತು 24 ರಂದು ಸುಗ್ಗಿ ಮಾರಿ ಪೂಜೆ ನಡೆಯಲಿರುವ ಹಿನ್ನಲೆ ಮುಂಜಾಗೃತಾ ಕ್ರಮವಾಗಿ ಈ ದಿನಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ದಿನವನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ.  

ಸುಗ್ಗಿ ಮಾರಿ ಪೂಜೆಯ ಸಲುವಾಗಿ, ಮಾ.23 ರ ಸಂಜೆ 6 ಗಂಟೆಯಿಂದ ಮ.24 ರ ರಾತ್ರಿ 12 ಗಂಟೆ ವರೆಗೆ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಳೂರು ಗ್ರಾಮದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್, ವೈನ್ ಶಾಪ್ ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಸೂಚಿಸಲಾಗಿದೆ.

ಸುಗ್ಗಿ ಮಾರಿ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಲಿದ್ದಾರೆ. ಮೂರು ಮಾರಿ ಗುಡಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ಮಾರಿ ಪೂಜೆಗೆ ಬರುವವರ ಪೈಕಿ ಕೆಲವರು ಮದ್ಯ ಸೇವಿಸಿ, ಅಮಲಿನಲ್ಲಿ ರಸ್ತೆ ದಾಟುವ ವೆಳೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ, ರಾತ್ರಿ ವೇಳೆಗೆ ದೇವಸ್ಥಾನಕ್ಕೆ ಬರುವ ಜನರೊಂದಿಗೆ ಮದ್ಯ ಸೇವಿಸಿದವರು ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವ ಸಾಧ್ಯತೆ ಇದೆ. ಇದು ಕಾನೂನು ಸುವ್ಯಸ್ಥೆಗೆ ಧಕ್ಕೆಯಾಗುವ ಸಾದ್ಯತೆ ಇರುವುದರಿಂದ  ಮುನ್ನೆಚ್ಚರಿಕಾ ಕ್ರಮವಾಗಿ ಈ ಅವಧಿಯಂದು ಮದ್ಯ ಮಾರಾಟವನ್ನು ನಿಷೇಧಿಸುವಂತೆ ಸೂಚಿಸಲಾಗಿದೆ.

ಮಾ.23 ಮತ್ತು 24 ರಂದು ಕಾಪು ತಾಲೂಕಿನ ಕಾಪುವಿನ ಮಾರಿ ಗುಡಿಗಳಲ್ಲಿ ಸುಗ್ಗಿ ಮಾರಿ ಪೂಜೆಯು ನಡೆಯುವ ಸಂದರ್ಭದಲ್ಲಿ ಬಾರ್ ಮತ್ತು ವೈನ್ ಶಾಪ್‍ಗಳು ತೆರೆದಿದ್ದಲ್ಲಿ, ಮದ್ಯಪಾನಾಸಕ್ತರು ಮದ್ಯಪಾನಮಾಡಿ ಗಲಭೆಮಾಡುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆಯನ್ವಯ ಅಧಿಕಾರವನ್ನು ಚಲಾಯಿಸಿ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಮತ್ತು ಸ್ಟೋರೆಂಟ್ ಮತ್ತು ವೈನ್ ಶಾಪ್‍ಗಳ ಮದ್ಯ ಮಾರಾಟವನ್ನು ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿದ್ದಾರೆ.

 ಈ ಹಿನ್ನಲೆಯಲ್ಲಿ ಮಾ.23 ರ ಸಂಜೆ 6 ಗಂಟೆಯಿಂದ ಮ.24 ರ ರಾತ್ರಿ 12 ಗಂಟೆ ವರೆಗೆ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!