ಹಳೆಯ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಬಿಗ್ ಶಾಕ್!
ದೆಹಲಿ : ಹಳೆಯ ವಾಹನಗಳ ಆರ್ ಸಿ ನವೀಕರಣ ಶುಲ್ಕವನ್ನ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. 15 ವರ್ಷ ಹಳೆಯ ವಾಹನಗಳ ಆರ್ ಸಿ ನವೀಕರಣದ ಶುಲ್ಕ ಹೆಚ್ಚಳದ ಬಗ್ಗೆ ಮಾಹಿತಿ ನೀಡಿರುವ ಸಾರಿಗೆ ಸಚಿವಾಲಯ ಹೊಸ ಕರಡು ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆಯ ಪ್ರಕಾರ, ಈ ವರ್ಷದ ಕೊನೆಯಲ್ಲಿ (ಅಕ್ಟೋಬರ್ 1) ಅಂತಹ ವಾಹನಗಳ ನೋಂದಣಿ ಪ್ರಮಾಣಪತ್ರಗಳನ್ನ ನವೀಕರಿಸುವುದು ದುಬಾರಿಯಾಗಲಿದೆ. ಈ ಏರಿಕೆಯು ಖಾಸಗಿ ವಾಹನಗಳಿಗೆ ಮಾತ್ರವಲ್ಲದೆ, ಭಾರತದ ವಾಣಿಜ್ಯ ವಾಹನಗಳಿಗೂ ಅನ್ವಯವಾಗಲಿದೆ ಎನ್ನಲಾಗ್ತಿದೆ.
ಅದರಂತೆ, 15 ವರ್ಷಕ್ಕಿಂತ ಹಳೆಯ ವಾಹನಗಳ ಆರ್ಸಿ ನವೀಕರಣ ಶುಲ್ಕದಲ್ಲಿ ಏರಿಕೆ ಆಗಿರುವುದನ್ನು ಗಮನಿಸುವುದಾದರೆ ಬೈಕ್ ರೂ. 1,000, ಮೂರು ಚಕ್ರ ಅಥವಾ ನಾಲ್ಕು ಚಕ್ರದ ವಾಹನ ರೂ. 3,500 , ಲಘು ಮೋಟಾರು ವಾಹನ ರೂ. 7,500, ಮಧ್ಯಮ ಸರಕು ಪ್ರಯಾಣಿಕ ಮೋಟಾರು ವಾಹನ ರೂ. 10,000, ಭಾರವಾದ ಸರಕು / ಪ್ರಯಾಣಿಕ ಮೋಟಾರು ವಾಹನ ರೂ. 12,500 ಹೆಚ್ಚಳವಾಗಿದೆ.
ಇನ್ನು ಹೊಸ ಕರಡು ಅಧಿಸೂಚನೆಯಲ್ಲಿ ಇತರ ಶುಲ್ಕಗಳ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಬೈಕ್’ಗಳಿಗೆ, ನೋಂದಣಿ ಪ್ರಮಾಣಪತ್ರ ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿಳಂಬವಾದ್ರೆ ಅದರ ಒಂದು ಭಾಗಕ್ಕಾಗಿ ರೂ.300 ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತೆ. ಹಾಗೂ ಪ್ರತಿ ತಿಂಗಳೂ ವಿಳಂಬಕ್ಕೆ ರೂ 500 ಪಾವತಿಸಬೇಕಾಗುತ್ತದೆ. ನೋಂದಣಿ ಪ್ರಮಾಣಪತ್ರವು ನಮೂನೆಯಲ್ಲಿ ನೀಡಲಾದ ಅಥವಾ ನವೀಕರಿಸಿದ ಸ್ಮಾರ್ಟ್ ಕಾರ್ಡ್ ಪ್ರಕಾರವಾಗಿದ್ದರೆ ವಾಹನ ಮಾಲೀಕರು ರೂ 200 ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.