ಉಡುಪಿ: ಮಾ.28ರಂದು ವೈಷ್ಣವಿ ಸರ್ವೀಸಸ್ ಮತ್ತು ಫಿಟ್ಲಾನ್ಸ್ ಅರೆನಾ ‘ಬಿಗೆಸ್ಟ್ ಫಿಟ್ನೆಸ್ ಫ್ಯಾಶನ್’
ಉಡುಪಿ(ಉಡುಪಿ ಟೈಮ್ಸ್ ವರದಿ): ವೈಷ್ಣವಿ ಸರ್ವೀಸಸ್ ಮತ್ತು ಫಿಟ್ಲಾನ್ಸ್ ಅರೆನಾ ವತಿಯಿಂದ ಫಿಟ್‍ವೀಕ್ ಎಂಡ್ ಎಂಬ ಇವೆಂಟ್ ಮಾ.28 ರಂದು ಉಡುಪಿ ಸಿಟಿ ಸೆಂಟರ್ ಮಾಲ್ ಬಳಿ ಇರುವ ಹೊಟೇಲ್ ಸೆಂಚುರಿ ಎಕ್ಸಿಕ್ಯೂಟಿವ್ ನಲ್ಲಿ ಆಯೋಜಿಸಿದೆ.
ಈ ಇವೆಂಟ್ ನಲ್ಲಿ ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಗೆ ಸಂಬಂಧಿಸಿದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಯೋಗ, ಎರೋಬಿಕ್ಸ್, ಬಾಡಿ ಫಿಟ್ನೆಸ್, ಫನ್ ಆಕ್ಟಿವಿಟೀಸ್, ಝುಂಬಾ, ಡಯಟ್ ಆಂಡ್ ನ್ಯೂಟ್ರೀಶನಸ್, ಗೇಮ್ಸ್, ಡ್ಯಾನ್ಸ್ ಕುರಿತು 3 ರಿಂದ 4 ಗಂಟೆಯ ಕಾರ್ಯಕ್ರಮ ನಡೆಯುತ್ತದೆ.
ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಯುವಕ, ಯುವತಿಯರು, ಮಕ್ಕಳು ಭಾಗವಹಿಸಬಹುದಾಗಿದ್ದು, ಮಕ್ಕಳಿಗೆ ಮತ್ತು ಹಿರಿಯರಿಗೆ ಪ್ರತ್ಯೇಕ ಕಾರ್ಯಕ್ರಮ ಇರಲಿದೆ. ಈ ಕಾರ್ಯಕ್ರಮ ಮಾ.28 ರ ಬೆಳಿಗ್ಗೆ 9 ಮತ್ತು 3 ಗಂಟೆಗೆ ನಡೆಯಲಿದ್ದು, ಹಿರಿಯರಿಗೆ ರೂ. 350 , ಮಕ್ಕಳಿಗೆ ರೂ. 250 ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ.
ಈ ಇವೆಂಟ್‍ನಲ್ಲಿ “ಉಡುಪಿ ಟೈಮ್ಸ್ ವೆಬ್‍ಸೈಟ್” ಮೀಡಿಯಾ ಪಾರ್ಟ್ನರ್ ಆಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ನಿಮ್ಮ ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 6366913313, 6366913314, 6366913312, 6366913315 ಅನ್ನು ಸಂಪರ್ಕಿಸಬಹುದಾಗಿದೆ.