ಸಿಡಿ ಪ್ರಕರಣ – ಯುವತಿ ನಾಪತ್ತೆ!

ಬೆಳಗಾವಿ: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೋಷಕರು ಬೆಳಗಾವಿಯಲ್ಲಿ ಮಗಳು ನಾಪತ್ತೆಯಾಗಿರುವ ಬಗ್ಗೆ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾರ್ಚ್ 2ರಿಂದ ಮಗಳು ಕಾಣೆಯಾಗಿದ್ದು, ನಕಲಿ ಸಿಡಿ ಮಾಡಿ ತೇಜೋವಧೆ ಮಾಡಲಾಗುತ್ತಿದೆ. ಮಗಳನ್ನ ಬೆಂಗಳೂರಿನಲ್ಲಿ ಅಪಹರಣ ಮಾಡಲಾಗಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಯುವತಿಯ ತಂದೆ-ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೋಷಕರ ದೂರಿನ ಅನ್ವಯ ಐಪಿಸಿ 363, 368, 343, 346,354, 506. ಪ್ರಕರಣದಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ಡಿಸಿಪಿ ವಿಕ್ರಂ ಹೇಳಿದ್ದಾರೆ.

ಶನಿವಾರ ರಮೇಶ್ ಜಾರಕಿಹೊಳಿ ದೂರು ದಾಖಲಿಸುತ್ತಿದ್ದಂತೆ ಯುವತಿ ಕೂಡ ವಿಡಿಯೋ ಮೂಲಕ ಪ್ರತ್ಯಕ್ಷಳಾಗಿದ್ದಳು. ಕೆಲಸದ ಆಮಿಷ ಒಡ್ಡಿ ರಮೇಶ್ ಜಾರಕಿಹೊಳಿ ಅವರೇ ಮೋಸ ಮಾಡಿದ್ದಾರೆ ಅಂತ ಆರೋಪಿಸಿದ್ದಳು. ತನಗೆ ರಕ್ಷಣೆ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬಳಿ ಮನವಿ ಮಾಡಿಕೊಂಡಿದ್ದಳು.

Leave a Reply

Your email address will not be published. Required fields are marked *

error: Content is protected !!