ಬ್ರಹ್ಮಾವರ: ಶ್ರೀವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ಕಳವು
ಬ್ರಹ್ಮಾವರ: ದೈವಸ್ಥಾನದಲ್ಲಿ ಕಳ್ಳತನ ನಡೆದಿರುವ ಘಟನೆ ಹೇರೂರು ಗ್ರಾಮ ಬ್ರಹ್ಮಾವರದ ರಾಜು ಎಂಬವರ ಕುಟುಂಬದವರ ಶ್ರೀ ವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ನಡೆದಿದೆ.
ಈ ದೈವಸ್ಥಾನದಲ್ಲಿ ರಾಜು ರವರು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ದೀಪಹಚ್ಚಿ ರಾತ್ರಿ ಸಮಯ ಬಾಗಿಲಿಗೆ ಬೀಗ ಹಾಕುತ್ತಿದ್ದರು. ಎಂದಿನಂತೆ ಮಾ.15 ರಂದು ಸಂಜೆ 7:00 ಗಂಟೆಗೆ ದೈವಸ್ಥಾನದಲ್ಲಿ ದೀಪ ಹಚ್ಚಿ ಬಾಗಿಲು ಹಾಕಿ ಬೀಗ ಹಾಕಿ ಹೋಗಿದ್ದಾರೆ.
ಮರು ದಿನ ಮಾ.16 ರಂದು ದೀಪ ಹಚ್ಚಲು ದೈವಸ್ಥಾನಕ್ಕೆ ಹೋಗಿದ್ದಾಗ ಯಾರೋ ಕಳ್ಳರು ದೈವಸ್ಥಾನದ ಬಾಗಿಲಿನ ಬೀಗವನ್ನು ಆಯುಧದಿಂದ ಮುರಿದು ಕಳ್ಳತನ ನಡೆಸಿರುವುದು ತಿಳಿದು ಬಂದಿದೆ. ದೈವಸ್ಥಾನದ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ವಿಗ್ರಹದ ಬಳಿ ಇದ್ದ ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಾಣಿಕೆ ಹುಂಡಿಯಲ್ಲಿ ಸುಮಾರು ರೂ. 4,000 ಇರಬಹುದುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.