ಕೋವಿಡ್-19 ಅತಿ ದೊಡ್ಡ ಬೆದರಿಕೆಯಾಗಿದೆ, ಸುರಕ್ಷತಾ ಕ್ರಮ ಬಿಡಬೇಡಿ: ರಾಹುಲ್ ಗಾಂಧಿ

ನವದೆಹಲಿ: ಕೊರೋನಾ ಇಂದಿಗೂ ಅತಿ ದೊಡ್ಡ ಬೆದರಿಕೆಯಾಗಿದೆ, ಹೀಗಾಗಿ ಜನರು ಯಾವುದೇ ಕಾರಣಕ್ಕೂ ಸುರಕ್ಷತಾ ಕ್ರಮಗಳನ್ನು ಬಿಡಬಾರದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೋನಾ ವೈರಸ್ ಅನ್ನು ನಿಭಾಯಿಸುವಲ್ಲಿ ಸರ್ಕಾರವು ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ರಾಹುಲ್ ಕಳೆದ ತಿಂಗಳು ಆರೋಪಿಸಿದ್ದರು.

ಮೊದಲೇ ಎಚ್ಚರಿಸಿದಂತೆ, ಕೋವಿಡ್ -19 ಜಗತ್ತಿಗೆ ಅತಿ ದೊಡ್ಡ ಬೆದರಿಕೆಯಾಗಿ ಮುಂದುವರೆದಿದೆ. ದಯವಿಟ್ಟು ಮಾಸ್ಕ್ ಧರಿಸಿ ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ನಾಲ್ಕು ವಾರಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಡಬಲ್ ಆಗಿರುವ ನಕ್ಷೆಯನ್ನು ಕೂಡ ಅವರು ತೋರಿಸಿದ್ದಾರೆ. ವಾರದಲ್ಲಿ ಶೇ.33 ರಷ್ಟು ಸೋಂಕು ಏರಿಕೆಯಾಗಿರುವುದನ್ನು ಅವರು ತಿಳಿಸಿದ್ದಾರೆ.  ಕಳೆದ ವರ್ಷ ಜುಲೈ ನಿಂದ ಸೋಂಕಿತರ ಸಂಖ್ಯೆ ತೀವ್ರ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!