ಸೋಮವಾರದಿಂದ ಶಅಬಾನ್: ಖಾಝಿ ಮಾಣಿ ಉಸ್ತಾದ್ ಘೋಷಣೆ
ಮಾರ್ಚ್.14 ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಶಅಬಾನ್ ತಿಂಗಳ ಪ್ರಥಮ ಚಂದ್ರದರ್ಶನ ಆರಂಭಗೊಂಡಿದ್ದು ಮಾರ್ಚ್ 28 ರ ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಶಬೆ ಬರಾಅತ್ ಆಗಿರುತ್ತದೆ ಎಂದು ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಜಿಲ್ಲೆಗಳ ಸಂಯುಕ್ತ ಜಮಾಅತ್ ಹಾಗೂ ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.